92. ಅಲ್-ಲೈಲ್
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ರಾತ್ರಿಯಾಣೆ – ಅದು, ಅದನ್ನು (ಹಗಲನ್ನು) ಮರೆ ಮಾಚಿದಾಗ
2ಹಗಲಿನಾಣೆ – ಅದು ಬೆಳಗಿದಾಗ
3ಗಂಡು ಹಾಗೂ ಹೆಣ್ಣನ್ನು ಸೃಷ್ಟಿಸಿದವನಾಣೆ
4ನಿಮ್ಮ ಶ್ರಮಗಳು ವಿವಿಧ ಬಗೆಯದ್ದಾಗಿವೆ
5ದಾನ ಮಾಡಿದವನು ಹಾಗೂ ಧರ್ಮ ನಿಷ್ಠನಾಗಿರುವವನು
6ಮತ್ತು ಒಳಿತನ್ನು ಸಮರ್ಥಿಸಿದವನು –
7– ಅವನ ಪಾಲಿಗೆ ನಾವು ಸರಳವಾದ ಮಾರ್ಗದ ಸುಲಭ ಗೊಳಿಸುವೆವು
8ಮತ್ತು ಜಿಪುಣತೆ ತೋರಿದ ಹಾಗೂ ನಿರ್ಲಕ್ಷಿಸಿದವನು
9ಮತ್ತು ಒಳಿತನ್ನು ತಿರಸ್ಕರಿಸಿದವನು –
10– ಅವನ ಪಾಲಿಗೆ ನಾವು ಕಠಿಣವಾದ ಮಾರ್ಗವನ್ನು ಸುಲಭಗೊಳಿಸುವೆವು
11ಅವನು ಉರುಳಿ ಬಿದ್ದಾಗ ಅವನ ಸಂಪತ್ತು ಅವನ ಯಾವ ಕೆಲಸಕ್ಕೂ ಬಾರದು
12ದಾರಿ ತೋರುವ ಹೊಣೆಯು ಖಂಡಿತ ನಮ್ಮ ಮೇಲಿದೆ
13ಪರಲೋಕವೂ ಇಹಲೋಕವೂ ಖಂಡಿತ ನಮಗೇ ಸೇರಿವೆ
14ನಾನು ನಿಮಗೆ ಧಗಧಗಿಸುವ ಅಗ್ನಿಯ ಕುರಿತು ಮುನ್ನೆಚ್ಚರಿಕೆ ನೀಡುತ್ತಿದ್ದೇನೆ
15ಭಾಗ್ಯಹೀನನು ಮಾತ್ರ ಅದರೊಳಗೆ ಪ್ರವೇಶಿಸುವನು –
16– ಅವನು (ಸತ್ಯವನ್ನು) ತಿರಸ್ಕರಿಸಿದವನು ಹಾಗೂ ಅದರಿಂದ ಮುಖ ತಿರುಗಿಸಿ ಕೊಂಡವನು
17ಅಲ್ಲಾಹನು ಧರ್ಮ ನಿಷ್ಠನನ್ನು ಅದರಿಂದ ರಕ್ಷಿಸುವನು
18ಅವನು ಪರಿಶುದ್ಧನಾಗಲಿಕ್ಕಾಗಿ ತನ್ನ ಸಂಪತ್ತನ್ನು (ಸನ್ಮಾರ್ಗದಲ್ಲಿ) ದಾನ ಮಾಡುತ್ತಾನೆ
19ಅವನು ಮರು ಪಾವತಿಸಬೇಕಾದ ಯಾವ ಋಣವೂ ಅವನ ಮೇಲಿಲ್ಲ –
20ಅವನು (ಮಾಡುವ ದಾನವೆಲ್ಲಾ) ಕೇವಲ ತನ್ನ ಪರಮೋನ್ನತ ಒಡೆಯನನ್ನು (ಅಲ್ಲಾಹನನ್ನು) ಮೆಚ್ಚಿಸುವುದಕ್ಕಾಗಿ ಮಾತ್ರವಾಗಿರುತ್ತದೆ
21ಮತ್ತು ಅವನು ಬಹು ಬೇಗನೇ ಸಂತೃಪ್ತನಾಗುವನು
ಮೂಲ: Abdussalam Puthige
WEBREATH · 11:11
«If you are thankful, I will give you more» — Quran 14:7
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath