ಇಸ್ಲಾಂ
ಹಿಂದೆ

90. ಅಲ್-ಬಲಾದ್

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಇಲ್ಲ, ನಾನು ಈ ನಗರದ ಆಣೆ ಹಾಕುತ್ತೇನೆ

2ನೀವು ಇದೇ ನಗರದಲ್ಲಿ ಇರುವವರು

3ತಂದೆಯ (ಆದಮರ) ಮತ್ತು ಅವರ ಸಂತತಿಯ ಆಣೆ

4ನಾವು ಮನುಷ್ಯನನ್ನು ಇಕ್ಕಟ್ಟಿನಲ್ಲಿರುವವನಾಗಿ ಸೃಷ್ಟಿಸಿದ್ದೇವೆ

5ತನ್ನ ಮೇಲೆ ಯಾರಿಗೂ ನಿಯಂತ್ರಣವಿಲ್ಲವೆಂದು ಅವನು ಭಾವಿಸಿದ್ದಾನೆಯೇ

6ನಾನು ಬಹಳಷ್ಟು ಸಂಪತ್ತನ್ನು ವ್ಯರ್ಥಗೊಳಿಸಿದ್ದೇನೆ ಎಂದವನು ಹೇಳುತ್ತಾನೆ

7ಅವನೇನು, ತನ್ನನ್ನು ಯಾರೂ ನೋಡಿಲ್ಲವೆಂದು ಭಾವಿಸಿದ್ದಾನೆಯೇ

8ನಾವೇನು ಅವನಿಗೆ ಎರಡು ಕಣ್ಣುಗಳನ್ನು ನೀಡಿಲ್ಲವೇ

9ನಾಲಿಗೆ ಹಾಗೂ ಎರಡು ತುಟಿಗಳನ್ನು ನೀಡಿಲ್ಲವೇ

10ಮತ್ತು ಅವನಿಗೆ ಎರಡು ದಾರಿಗಳನ್ನು ತೋರಿಸಿಲ್ಲವೇ

11ಆದರೆ ಅವನು ಏರು ಹಾದಿಯನ್ನು ಕ್ರಮಿಸಲು ನಿರಾಕರಿಸಿದನು

12ನಿಮಗೇನು ಗೊತ್ತು ಆ ಏರು ಹಾದಿ ಏನೆಂದು

13(ದಾಸ್ಯದಲ್ಲಿರುವವರ) ಕೊರಳನ್ನು ಬಿಡಿಸುವುದು

14ಅಥವಾ ಹಸಿವಿನ ದಿನ ಉಣಿಸುವುದು

15ಸಂಬಂಧಿಕನಾಗಿರುವ ಅನಾಥನನ್ನು ಪೋಷಿಸುವುದು

16ಸಂಕಷ್ಟದಲ್ಲಿರುವ ಬಡವನಿಗೆ ನೆರವಾಗುವುದು

17(ಇದನ್ನು ಮಾಡಿದವನು) ವಿಶ್ವಾಸಿಗಳ, ಪರಸ್ಪರ ಸಹನೆಯನ್ನು ಬೋಧಿಸುವವರ ಹಾಗೂ ಪರಸ್ಪರ ಕರುಣೆಯನ್ನು ಬೋಧಿಸುವವರ ಸಾಲಿಗೆ ಸೇರಿರಬೇಕು

18ಅವರೇ ಬಲ ಭಾಗದವರು (ಸೌಭಾಗ್ಯವಂತರು)

19ಇನ್ನು, ನಮ್ಮ ವಚನಗಳನ್ನು ಧಿಕ್ಕರಿಸಿದವರೇ ಎಡಭಾಗದವರು (ಭಾಗ್ಯಹೀನರು)

20ಅವರನ್ನು ನರಕಾಗ್ನಿಯಲ್ಲಿ ಮುಚ್ಚಿ ಬಿಡಲಾಗುವುದು

ಮೂಲ: Abdussalam Puthige

WEBREATH · 11:11

«If you are thankful, I will give you more» — Quran 14:7

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath