ಇಸ್ಲಾಂ
ಹಿಂದೆ

89. ಅಲ್-ಫಜ್ರ್

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಮುಂಜಾವಿನಾಣೆ

2ಮತ್ತು ಹತ್ತು ರಾತ್ರಿಗಳಾಣೆ

3ಮತ್ತು ಸಮ ಹಾಗೂ ಬೆಸ ಸಂಖ್ಯೆಗಳಾಣೆ

4ಮತ್ತು ರಾತ್ರಿಯು ತೆರಳುವಾಗಿನಾಣೆ

5ಬುದ್ಧಿಜೀವಿಗಳಿಗೆ ಈ ಪ್ರಮಾಣಗಳು ಸಾಕೇ

6ನೀವು ನೋಡಿದಿರಾ, ನಿಮ್ಮ ಒಡೆಯನು ಆದ್ ಜನಾಂಗದವರಿಗೆ ಏನು ಮಾಡಿದನೆಂಬುದನ್ನು

7ಇರಮ್‌ನ ಸ್ತಂಭದವರನ್ನು

8ನಾಡುಗಳ ಪೈಕಿ ಅಂತಹ ಇನ್ನೊಂದು ನಾಡು ಸೃಷ್ಟಿಯಾಗಿಲ್ಲ

9ಬಯಲುಗಳಲ್ಲಿ ಕಠೋರ ಕಲ್ಲುಗಳನ್ನು ಕೆತ್ತಿದ್ದ ಸಮೂದರು –

10ಮತ್ತು ಬೃಹತ್ ಮೊಳೆಗಳ ಫಿರ್‌ಔನ್

11ಅವರೆಲ್ಲಾ (ತಮ್ಮ) ನಾಡುಗಳಲ್ಲಿ ಬಂಡಾಯವೆದ್ದಿದ್ದರು

12ಮತ್ತು ಅವರು ಅಲ್ಲಿ ಅಶಾಂತಿಯನ್ನು ಮೆರೆದಿದ್ದರು

13ಕೊನೆಗೆ ನಿಮ್ಮೊಡೆಯನು ಅವರ ಮೇಲೆ ಶಿಕ್ಷೆಯ ಚಾಟಿಯನ್ನು ಬೀಸಿದನು

14ನಿಮ್ಮ ಒಡೆಯನಂತು ಹೊಂಚಿನಲ್ಲಿದ್ದಾನೆ

15ಮನುಷ್ಯನನ್ನು ಅವನ ಒಡೆಯನು ಪರೀಕ್ಷೆಗೊಳಪಡಿಸಿ ಅವನಿಗೆ ಗೌರವವನ್ನೂ. ಅನುಗ್ರಹವನ್ನೂ ದಯಪಾಲಿಸಿದಾಗ ಅವನು, ನನ್ನೊಡೆಯನು ನನ್ನನ್ನು ಗೌರವಾನ್ವಿತನಾಗಿಸಿದ್ದಾನೆ ಎನ್ನುತ್ತಾನೆ

16ಇನ್ನು ಅವನು ಆತನನ್ನು ಪರೀಕ್ಷೆಗೊಳಪಡಿಸಿ ಅವನ ಆದಾಯವನ್ನು ಸೀಮಿತ ಗೊಳಿಸಿದಾಗ ಅವನು ನನ್ನೊಡೆಯನು ನನ್ನನ್ನು ನೀಚನಾಗಿಸಿದ್ದಾನೆ ಎನ್ನುತ್ತಾನೆ

17ಹಾಗಲ್ಲ, ನಿಜವಾಗಿ ನೀವು ಅನಾಥನನ್ನು ಗೌರವಿಸುವುದಿಲ್ಲ

18ಬಡವನಿಗೆ ಉಣಿಸುವಂತೆ (ಪರಸ್ಪರ) ಪ್ರೋತ್ಸಾಹಿಸುವುದಿಲ್ಲ

19ಮತ್ತು ನೀವು ವಾರೀಸು ಸೊತ್ತನ್ನು (ಅಕ್ರಮವಾಗಿ) ಕಬಳಿಸುತ್ತೀರಿ

20ನೀವು ಸಂಪತ್ತನ್ನು ಅಪಾರವಾಗಿ ಪ್ರೀತಿಸುತ್ತೀರಿ

21ಹಾಗಲ್ಲ, ಭೂಮಿಯನ್ನು ಕುಟ್ಟಿ ಕುಟ್ಟಿ ತಗ್ಗಿಸಲಾದಾಗ

22ನಿಮ್ಮೊಡೆಯನು ಬಂದಾಗ, ಹಾಗೂ ಮಲಕ್‌ಗಳು ಸಾಲುಗಟ್ಟಿದಾಗ

23ಅಂದು ನರಕವನ್ನು ಮುಂದೆ ತರಲಾಗುವುದು. ಅಂದು ಮನುಷ್ಯನಿಗೆ ವಿಷಯವು ಅರ್ಥವಾಗುವುದು. ಆದರೆ ಅಂದು ಅರ್ಥವಾದರೆ ಅವನಿಗೇನು ಲಾಭ

24ಅವನು ಹೇಳುವನು; ಅಯ್ಯೋ, ನಾನು ಈ ಬದುಕಿಗೆ ಪೂರ್ವ ಸಿದ್ಧತೆ ನಡೆಸಬೇಕಿತ್ತು

25ಅಂದು ಅವನು (ಅಲ್ಲಾಹನು) ನೀಡುವಂತಹ ಶಿಕ್ಷೆಯನ್ನು ಬೇರೆ ಯಾರೂ ನೀಡಲಾರರು

26ಮತ್ತು ಅವನು ಕಟ್ಟಿಡುವ ರೀತಿಯಲ್ಲಿ ಬೇರೆ ಯಾರೂ ಕಟ್ಟಿಡಲಾರನು

27(ಸಜ್ಜನರೊಡನೆ ಹೇಳಲಾಗುವುದು;) ಸಂತೃಪ್ತ ಚಿತ್ತವೇ

28ಸಂತೃಪ್ತನಾಗಿ ಮರಳು ನಿನ್ನ ಒಡೆಯನೆಡೆಗೆ – ಅವನೂ ನಿನ್ನಿಂದ ಸಂತೃಪ್ತ ನಾಗಿರುವನು

29ನನ್ನ ದಾಸರ ಜೊತೆ ಪ್ರವೇಶಿಸು

30ನನ್ನ ಸ್ವರ್ಗವನ್ನೂ ಪ್ರವೇಶಿಸು

ಮೂಲ: Abdussalam Puthige

WEBREATH · 11:11

«If you are thankful, I will give you more» — Quran 14:7

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath