ಇಸ್ಲಾಂ
ಹಿಂದೆ

86. ಅಟ್-ತಾರಿಕ್

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಆಕಾಶದಾಣೆ ಮತ್ತು ‘ತ್ವಾರಿಕ್’ ನಾಣೆ

2‘ತ್ವಾರಿಕ್’ ಏನೆಂದು ನಿಮಗೇನು ಗೊತ್ತು

3ಅದು ಮಿನುಗುವ ತಾರೆ

4ಪ್ರತಿಯೊಂದು ಜೀವದ ಮೇಲೂ ಒಬ್ಬ ಮೇಲ್ವಿಚಾರಕನಿರುತ್ತಾನೆ

5ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂದು ಮನುಷ್ಯನೊಮ್ಮೆ ನೋಡಲಿ

6ಅವರನ್ನು ಜಿಗಿಯುವ ನೀರಿನಿಂದ ಸೃಷ್ಟಿಸಲಾಗಿದೆ

7ಅದು ಬೆನ್ನು ಹಾಗೂ ಎದೆಯ ಮಧ್ಯದಿಂದ ಹೊರಡುತ್ತದೆ

8ಅವನು ಅವನನ್ನು (ಮನುಷ್ಯನನ್ನು) ಮತ್ತೊಮ್ಮೆ ಸೃಷ್ಟಿಸಲು ಖಂಡಿತ ಸಮರ್ಥನಾಗಿದ್ದಾನೆ

9ಮನದೊಳಗಿನ ರಹಸ್ಯಗಳ ಪರಿಶೀಲನೆ (ಅಂತಿಮ ವಿಚಾರಣೆ) ನಡೆಯುವ ದಿನ

10ಅಂದು ಅವನ (ಮಾನವನ) ಬಳಿ ಯಾವ ಶಕ್ತಿಯೂ ಇರದು. ಯಾವ ಸಹಾಯಕನೂ ಇರಲಾರನು

11ಮಳೆ ಸುರಿಸುವ ಆಕಾಶದಾಣೆ

12ಬಿರಿಯುವ ಭೂಮಿಯಾಣೆ

13ಇದು ನಿರ್ಣಾಯಕ ಸಂದೇಶ

14ಇದು ತಮಾಷೆಯಲ್ಲ

15ಅವರು ಸಂಚುಗಳನ್ನು ಹೂಡುತ್ತಿದ್ದಾರೆ

16ಮತ್ತು ನಾನೊಂದು ಸಂಚು ಹೂಡುತ್ತಿದ್ದೇನೆ

17ನೀವೀಗ ಧಿಕ್ಕಾರಿಗಳಿಗೆ ಕಾಲಾವಕಾಶವನ್ನು ನೀಡಿರಿ. ಕೇವಲ ಸ್ವಲ್ಪ ಕಾಲಾವಕಾಶ

ಮೂಲ: Abdussalam Puthige

WEBREATH · 11:11

«If you are thankful, I will give you more» — Quran 14:7

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath