84. ಅಲ್-ಇನ್ಶಿಕಾಕ್
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಆಕಾಶವು ಸ್ಫೋಟಿಸುವಾಗ
2ಅದು ತನ್ನ ಒಡೆಯನ ಆದೇಶವನ್ನು ಪಾಲಿಸುವುದು ಮತ್ತು ಅದು ಅದರ ಕರ್ತವ್ಯವಾಗಿರುವುದು
3ಭೂಮಿಯನ್ನು ಸಮ ತಟ್ಟಾಗಿಸಲಾಗುವುದು
4ಅದು ತನ್ನೊಳಗಿರುವ ಎಲ್ಲವನ್ನೂ ಹೊರ ಹಾಕಿ ಖಾಲಿಯಾಗಿ ಬಿಡುವುದು
5ಅದು ತನ್ನ ಒಡೆಯನ ಆದೇಶವನ್ನು ಪಾಲಿಸುವುದು ಮತ್ತು ಅದು ಅದರ ಕರ್ತವ್ಯವಾಗಿರುವುದು
6ಮಾನವನೇ, ನೀನು ಕ್ರಮೇಣ ನಿನ್ನೊಡೆಯನ ಕಡೆಗೇ ಹೋಗುತ್ತಿರುವೆ, ನೀನು ಖಂಡಿತ ಅವನನ್ನು ಭೇಟಿಯಾಗುವೆ
7ಯಾರ ಕರ್ಮ ಪತ್ರವನ್ನು ಅವನ ಬಲಗೈಯಲ್ಲಿ ನೀಡಲಾಯಿತೋ –
8ಅವನ ವಿಚಾರಣೆಯು ಸುಲಭವಾಗಿ ನಡೆಯುವುದು
9ಮತ್ತು ಅವನು ತನ್ನ ಮನೆಯವರ ಜೊತೆ ಸಂತುಷ್ಟನಾಗಿರುವನು
10ಯಾರಿಗೆ ಅವನ ಗ್ರಂಥವನ್ನು ಅವನ ಬೆನ್ನ ಹಿಂದಿನಿಂದ ನೀಡಲಾಯಿತೋ
11ಅವನು ಮರಣಕ್ಕಾಗಿ ಪ್ರಾರ್ಥಿಸುವನು
12ಮತ್ತು ಅವನು ನರಕವನ್ನು ಪ್ರವೇಶಿಸುವನು
13(ಇಹಲೋಕದಲ್ಲಿ) ಅವನು ತನ್ನ ಮನೆಯವರ ಜೊತೆ ಮೈ ಮರೆತಿದ್ದನು
14ತಾನೆಂದೂ (ತನ್ನ ಒಡೆಯನ ಬಳಿಗೆ) ಹೋಗಲಿಕ್ಕೇ ಇಲ್ಲವೆಂದು ಭಾವಿಸಿದ್ದನು
15ಯಾಕಿಲ್ಲ; ಅವನ ಒಡೆಯನಂತೂ ಅವನನ್ನು ನೋಡುತ್ತಲೇ ಇದ್ದನು
16ಅಲ್ಲ; ನಾನು ಸಂಜೆಯ ಕೆಂಬಣ್ಣದ ಆಣೆ ಹಾಕುತ್ತೇನೆ
17ಮತ್ತು ಇರುಳಿನ ಹಾಗೂ ಅದು ಏನನ್ನೆಲ್ಲಾ ಆವರಿಸುತ್ತದೋ ಅವುಗಳ ಆಣೆ
18ಮತ್ತು ಚಂದ್ರನ ಹಾಗೂ ಅದು ಪೂರ್ಣವಾಗುವಾಗಿನಾಣೆ
19ನೀವು ಹಂತ ಹಂತವಾಗಿ ಮೇಲೇರುವಿರಿ
20ಜನರಿಗೇನಾಗಿದೆ, ಅವರೇಕೆ ನಂಬುವುದಿಲ್ಲ
21ಅವರ ಮುಂದೆ ಕುರ್ಆನನ್ನು ಓದಲಾದಾಗ ಅವರೇಕೆ ಸಾಷ್ಟಾಂಗ ವೆರಗುವುದಿಲ್ಲ
22ನಿಜವಾಗಿ, ಧಿಕ್ಕಾರಿಗಳು ಇದನ್ನು ಸುಳ್ಳೆನ್ನುತ್ತಾರೆ
23ಅವರು ತಮ್ಮ ಮನಸ್ಸುಗಳಲ್ಲಿ ಅಡಗಿಸಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು
24ಅವರಿಗೆ ಒಂದು ಕಠಿಣ ಶಿಕ್ಷೆಯ ಶುಭವಾರ್ತೆ ನೀಡಿರಿ
25ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವರ ಹೊರತು – ಅವರಿಗೆ ಅಪಾರ ಪ್ರತಿಫಲವಿದೆ
ಮೂಲ: Abdussalam Puthige
WEBREATH · 11:11
«If you are thankful, I will give you more» — Quran 14:7
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath