ಇಸ್ಲಾಂ
ಹಿಂದೆ

83. ಅಲ್-ಮುಟಾಫಿಫಿನ್

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ವಿನಾಶವಿದೆ ತೂಕದಲ್ಲಿ ಕೊರತೆ ಮಾಡುವವರಿಗೆ

2ಅವರು ಜನರಿಂದ ಅಳೆದು ಪಡೆಯುವಾಗ ಪೂರ್ಣವಾಗಿ ಪಡೆಯುತ್ತಾರೆ

3ಆದರೆ ಇತರರಿಗೆ ಅಳೆದು ಅಥವಾ ತೂಗಿ ಕೊಡುವಾಗ ಕಡಿಮೆಗೊಳಿಸಿ ಕೊಡುತ್ತಾರೆ

4ಅವರನ್ನು ಮತ್ತೆ ಜೀವಂತ ಗೊಳಿಸಲಾಗುವುದೆಂದು ಅವರಿಗೇನು ತಿಳಿಯದೇ

5ಒಂದು ಮಹಾದಿನ ಅದು ಸಂಭವಿಸುವುದು

6ಅಂದು ಮಾನವರೆಲ್ಲಾ ವಿಶ್ವದೊಡೆಯನ ಮುಂದೆ ನಿಲ್ಲುವರು

7ನಿಮಗೆ ತಿಳಿದಿರಲಿ, ದುಷ್ಟರ ಕರ್ಮಗಳು ‘ಸಿಜ್ಜೀನ್’ನಲ್ಲಿವೆ

8ಸಿಜ್ಜೀನ್ ಅಂದರೆ ಏನೆಂದು ನಿಮಗೇನು ಗೊತ್ತು

9ಅದೊಂದು ಲಿಖಿತ ಗ್ರಂಥ

10ಅಂದು ವಿನಾಶವಿದೆ – ಧಿಕ್ಕಾರಿಗಳಿಗೆ

11ಅವರು ಪ್ರತಿಫಲದ ದಿನವನ್ನು ತಿರಸ್ಕರಿಸುತ್ತಾರೆ

12ನಿಜವಾಗಿ, ಎಲ್ಲೆ ಮೀರಿದ ಪಾಪಿ ಮಾತ್ರ ಅದನ್ನು ಧಿಕ್ಕರಿಸುತ್ತಾನೆ

13ಅವನಿಗೆ ನಮ್ಮ ವಚನಗಳನ್ನು ಓದಿ ಕೇಳಿಸಲಾದಾಗ ಅವನು, ಇವೆಲ್ಲ ಗತಕಾಲದ ಕಥೆಗಳು ಎನ್ನುತ್ತಾನೆ

14ಹಾಗಲ್ಲ – ನಿಜವಾಗಿ ಅವರು ಮಾಡಿದ್ದ ಕರ್ಮಗಳು ಅವರ ಮನಸ್ಸುಗಳಿಗೆ ತುಕ್ಕು ಹಿಡಿಸಿವೆ

15ಹಾಗಲ್ಲ – ಅಂದು ಅವರು ತನ್ನ ಒಡೆಯನಿಂದ ಮರೆಯಲ್ಲಿರುವರು

16ತರುವಾಯ ಅವರು ನರಕವನ್ನು ಸೇರುವರು

17ನೀವು ತಿರಸ್ಕರಿಸುತ್ತಿದ್ದುದು ಇದನ್ನೇ ಎಂದು ಅವರೊಡನೆ ಹೇಳಲಾಗುವುದು

18ನಿಮಗೆ ತಿಳಿದಿರಲಿ ಸಜ್ಜನರ ಕರ್ಮ ಪತ್ರವು ‘ಇಲ್ಲಿಯ್ಯೀನ್’ನಲ್ಲಿರುವುದು

19ಇಲ್ಲಿಯ್ಯೀನ್ ಅಂದರೇನೆಂದು ನಿಮಗೇನು ಗೊತ್ತು

20ಅದೊಂದು (ಕರ್ಮಗಳ) ಲಿಖಿತ ಗ್ರಂಥ

21(ಅಲ್ಲಾಹನಿಗೆ) ನಿಕಟರಾಗಿರುವವರು ಅದರ ಬಳಿ ಹಾಜರಿರುವರು

22ಸಜ್ಜನರು ಖಂಡಿತ ಐಶಾರಾಮದಲ್ಲಿರುವರು

23ವೈಭವದ ಆಸನಗಳಲ್ಲಿದ್ದು ದೃಶ್ಯಗಳನ್ನು ಆಸ್ವದಿಸುವರು

24ನೀವು ಅವರ ಮುಖಗಳಲ್ಲಿ ಸುಖದ ಉಲ್ಲಾಸವನ್ನು ಕಾಣುವಿರಿ

25ಅವರಿಗೆ ಮುದ್ರೆ ಹಾಕಿ ಮುಚ್ಚಿಟ್ಟಿದ್ದ ಶುದ್ಧ ಮದಿರೆಯನ್ನು ಕುಡಿಸಲಾಗುವುದು

26ಅದರ ಮುದ್ರೆ ಕಸ್ತೂರಿಯದ್ದಾಗಿರುವುದು, ಸ್ಪರ್ಧಿಸುವವರು ಇದನ್ನು ಪಡೆಯಲು ಸ್ಪರ್ಧಿಸಲಿ

27ಅದರಲ್ಲಿ ತಸ್ನೀಮ್‌ನ ಮಿಶ್ರಣವಿರುವುದು

28ಅದೊಂದು ಚಿಲುಮೆ. ಅಲ್ಲಾಹನ ಆಪ್ತರಾಗಿರುವವರು (ಸ್ವರ್ಗವಾಸಿಗಳು) ಅದನ್ನು ಸೇವಿಸುವರು

29ಅಪರಾಧಿಗಳು (ಇಹಲೋಕದಲ್ಲಿ) ವಿಶ್ವಾಸಿಗಳನ್ನು ಕಂಡು (ಗೇಲಿ ಮಾಡಿ) ನಗುತ್ತಿದ್ದರು

30ಅವರ ಬಳಿಯಿಂದ ಹಾದು ಹೋಗುವಾಗ ತಾತ್ಸಾರದಿಂದ ಕೈ ಸನ್ನೆಗಳನ್ನು ಮಾಡುತ್ತಿದ್ದರು

31ಅವರು ತಮ್ಮ ಮನೆಯವರ ಬಳಿಗೆ ಮರಳುವಾಗ ಹೆಮ್ಮೆಯಿಂದ ಬೀಗುತ್ತಾ ಮರಳುತ್ತಿದ್ದರು

32ಅವರು ಇವರನ್ನು (ವಿಶ್ವಾಸಿಗಳನ್ನು) ಕಂಡಾಗ, ಇವರು ದಾರಿಗೆಟ್ಟವರು ಎನ್ನುತ್ತಿದ್ದರು

33ನಿಜವಾಗಿ ಅವರನ್ನು ಇವರ ಮೇಲ್ವಿಚಾರಣೆಗೇನೂ ಕಳಿಸಲಾಗಿರಲಿಲ್ಲ

34ಆದರೆ ಇಂದು ವಿಶ್ವಾಸಿಗಳು ಧಿಕ್ಕಾರಿಗಳನ್ನು ಕಂಡು ನಗುವರು

35ವೈಭವದ ಆಸನದಲ್ಲಿದ್ದು (ಧಿಕ್ಕಾರಿಗಳ ಗತಿಯನ್ನು) ಕಾಣುತ್ತಿರುವರು

36ಧಿಕ್ಕಾರಿಗಳಿಗೆ ಸಿಕ್ಕಿ ಬಿಟ್ಟಿತೇ, ಅವರು ಮಾಡುತ್ತಿದ್ದ ಕೃತ್ಯಗಳ ಪ್ರತಿಫಲ

ಮೂಲ: Abdussalam Puthige

WEBREATH · 11:11

«If you are thankful, I will give you more» — Quran 14:7

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath