80. ಅಬಾಸ
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1– ತಮ್ಮ ಬಳಿಗೆ ಕುರುಡನೊಬ್ಬನು ಬಂದನೆಂದು
2(ದೂತರೇ,) ನಿಮಗೇನು ಗೊತ್ತು – ಅವನು ಸಂಸ್ಕಾರವಂತನಾಗಲೂ ಬಹುದು
3ಅಥವಾ ಉಪದೇಶದ ಕುರಿತು ಅವನು ಚಿಂತಿಸ ಬಹುದು ಮತ್ತು ಅವನಿಗೆ
4ಉಪದೇಶದಿಂದ ಲಾಭವಾಗ ಬಹುದು
5(ನಿಮ್ಮನ್ನು) ಕಡೆಗಣಿಸುವವನು
6ಅವನೆಡೆಗೆ ನೀವು ಗಮನ ಹರಿಸುತ್ತೀರಿ
7ಅವನು ಸುಧಾರಿಸದಿದ್ದರೆ ನಿಮ್ಮ ಮೇಲೆ ದೋಷವೇನಿಲ್ಲ
8ಆದರೆ ನಿಮ್ಮೆಡೆಗೆ ಧಾವಿಸಿ ಬಂದ ವ್ಯಕ್ತಿ
9ಅವನು ಭಯಭಕ್ತಿ ಉಳ್ಳವನು
10ನೀವು ಅವನನ್ನು ನಿರ್ಲಕ್ಷಿಸುತ್ತೀರಿ
11ಹಾಗಲ್ಲ, ಇದು (ಕುರ್ಆನ್) ಒಂದು ಉಪದೇಶವಾಗಿದೆ
12ಇಷ್ಟ ಉಳ್ಳವನು ಇದರಿಂದ ಉಪದೇಶ ಪಡೆಯಲಿ
13ಇದು ಗೌರವಾರ್ಹ ಹಾಳೆಗಳಲ್ಲಿ ಲಿಖಿತವಾಗಿದೆ
14ಉನ್ನತ ಸ್ಥಾನದಲ್ಲಿದ್ದು, ಪಾವನವಾಗಿದೆ
15ಅದು ಬರೆಯುವವರ ಕೈಯಲ್ಲಿದೆ
16ಅವರು ಗೌರವಾನ್ವಿತರು ಮತ್ತು ಶ್ರೇಷ್ಠರು
17ಮಾನವನಿಗೆ ಛೀಮಾರಿ. ಅವನು ಅದೆಷ್ಟು ಕೃತಘ್ನನು
18ಅವನನ್ನು ಸೃಷ್ಟಿಸಲಾಗಿರುವುದು ಯಾವುದರಿಂದ
19ವೀರ್ಯದಿಂದ. ಅವನು (ಅಲ್ಲಾಹನು) ಆತನನ್ನು ಸೃಷ್ಟಿಸಿದನು ಹಾಗೂ ಆತನ ವಿಧಿಯನ್ನು ನಿಶ್ಚಯಿಸಿದನು
20ಆ ಬಳಿಕ ಅವನಿಗೆ ಬದುಕಿನ ದಾರಿಯನ್ನು ಸುಗಮಗೊಳಿಸಿದನು
21ಆ ಬಳಿಕ ಅವನನ್ನು ಸಾಯಿಸಿ ಅವನನ್ನು ಗೋರಿಗೆ ತಲುಪಿಸಿದನು
22ಆ ಬಳಿಕ ಅವನು, ತಾನಿಚ್ಛಿಸಿದಾಗ ಅವನನ್ನು ಪುನಃ ಜೀವಂತಗೊಳಿಸುವನು
23ಹಾಗಲ್ಲ, ಅವನು (ಮಾನವನು) ತನಗೆ ನೀಡಲಾದ ಆದೇಶವನ್ನು ಪಾಲಿಸಲಿಲ್ಲ
24ಮನುಷ್ಯನು ತನ್ನ ಆಹಾರದ ಕಡೆಗೊಮ್ಮೆ ನೋಡಲಿ
25ನೀರು ಸುರಿಸಿದವರು ನಾವು
26ಭೂಮಿಯನ್ನು ಸೀಳಿದವರು ನಾವು
27ಅದರಲ್ಲಿ ಬೆಳೆಗಳನ್ನು ಬೆಳೆದವರು ನಾವು
28ದ್ರಾಕ್ಷಿಗಳು ಹಾಗೂ ತರಕಾರಿಗಳು
29ಝೈತೂನ್ ಹಾಗೂ ಖರ್ಜೂರಗಳು
30ದಟ್ಟವಾದ ತೋಟಗಳು
31ಹಣ್ಣುಗಳು ಹಾಗೂ ಮೇವು
32ನಿಮಗಾಗಿ ಹಾಗೂ ನಿಮ್ಮ ಜಾನುವಾರುಗಳಿಗಾಗಿ ಇದನ್ನೆಲ್ಲಾ ಮಾಡಲಾಯಿತು
33ಕೊನೆಗೆ ಪುನರುತ್ಥಾನದ ಕೋಲಾಹಲವು ಮೊಳಗಿದಾಗ
34ಅಂದು ಮನುಷ್ಯನು ತನ್ನ ಸಹೋದರನಿಂದ ದೂರ ಓಡುವನು
35ತನ್ನ ತಂದೆಯಿಂದಲೂ ತಾಯಿಯಿಂದಲೂ
36ಪತ್ನಿಯಿಂದಲೂ ಪುತ್ರರಿಂದಲೂ (ದೂರ ಓಡುವನು)
37ಅಂದು ಪ್ರತಿಯೊಬ್ಬನೂ ತನಗೊದಗಿರುವ ಚಿಂತೆಯಲ್ಲೇ ಮಗ್ನನಾಗಿರುವನು
38ಅಂದು ಕೆಲವು ಮುಖಗಳು ಉಜ್ವಲವಾಗಿರುವವು
39ನಗುತ್ತಾ ಸಂಭ್ರಮಿಸುತ್ತಿರುವವು
40ಮತ್ತೆ ಕೆಲವು ಮುಖಗಳ ಮೇಲೆ ಅಂದು ಧೂಳು ತುಂಬಿರುವುದು
41(ಮತ್ತು ) ಕರಾಳತೆ ಕವಿದಿರುವುದು
42ಅವರು ಧಿಕ್ಕಾರಿ ದುಷ್ಕರ್ಮಿಗಳಾಗಿರುವರು
ಮೂಲ: Abdussalam Puthige
WEBREATH · 11:11
«If you are thankful, I will give you more» — Quran 14:7
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath