ಇಸ್ಲಾಂ
ಹಿಂದೆ

79. ಅನ್-ನಾಜಿಯಾತ್

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಮೃದುವಾಗಿ ಬಿಡಿಸುವವರ ಆಣೆ

2ತೇಲುತ್ತಾ ಚಲಿಸುವವರ ಆಣೆ

3ಹುರುಪಿನಿಂದ ಮುನ್ನುಗ್ಗುವವರಾಣೆ

4(ಜಗತ್ತಿನ)ವ್ಯವಹಾರಗಳನ್ನು ನೋಡಿ ಕೊಳ್ಳುವವರಾಣೆ

5ಭೂಮಿಯು ಅಲ್ಲೋಲ ಕಲ್ಲೋಲವಾಗುವ ದಿನ

6ಅದರ ಬೆನ್ನಿಗೇ ಮತ್ತೆ ಅಲ್ಲೋಲ ಕಲ್ಲೋಲವಾಗುವುದು

7ಅಂದು ಮನಸ್ಸುಗಳು ಭಯ ಭೀತವಾಗಿರುವವು

8ದೃಷ್ಟಿಗಳು ಭಯದಿಂದ ತಗ್ಗಿರುವವು

9(ಧಿಕ್ಕಾರಿಗಳು) ಕೇಳುತ್ತಾರೆ ನಾವು ಮರಳಿ ಮತ್ತೆ ಬರಲಿಕ್ಕುಂಟೇ

10ನಾವು ಟೊಳ್ಳು ಮೂಳೆಗಳಾದ ಬಳಿಕ (ಮರಳಿ ಬರುವುದೇ)

11ಆ ಮರಳಿಕೆಯು ತೀರಾ ನಷ್ಟದ ವ್ಯವಹಾರವಾಗಿದೆ ಎಂದು ಅವರು ಹೇಳುತ್ತಾರೆ

12ಅದೊಂದು ಭೀಕರ ಶಬ್ದವಾಗಿರುವುದು

13ಅದರ ಬೆನ್ನಿಗೇ ಅವರೆಲ್ಲಾ ಒಂದು ಬಯಲಲ್ಲಿ ಸೇರುವರು

14ನಿಮಗೆ ಮೂಸಾರ ವೃತ್ತಾಂತವು ತಲುಪಿದೆಯೇ

15ಅವರ ಒಡೆಯನು ಅವರನ್ನು ಪವಿತ್ರ ‘‘ತುವಾ’’ ಬೆಟ್ಟದಿಂದ ಕರೆದು (ಹೇಳಿದನು)

16ಹೋಗಿರಿ ಫಿರ್‌ಔನ್‌ನೆಡೆಗೆ, ಅವನು ವಿದ್ರೋಹಿಯಾಗಿದ್ದಾನೆ

17ಮತ್ತು ಅವನೊಡನೆ ಹೇಳಿರಿ – ನೀನು ನಿರ್ಮಲನಾಗ ಬಯಸುವೆಯಾ

18ನಾನು ನಿನಗೆ ನಿನ್ನೊಡೆಯನ ಕಡೆಗಿರುವ ದಾರಿಯನ್ನು ತೋರಬಲ್ಲೆನು – ನೀನು ಭಯಭಕ್ತಿ ಉಳ್ಳವನಾಗಬೇಕೆಂದು

19ಅವರು ಅವನಿಗೆ ದೊಡ್ಡ ಪುರಾವೆಯನ್ನು ತೋರಿಸಿದರು

20ಆದರೆ ಅವನು ತಿರಸ್ಕರಿಸಿದನು ಮತ್ತು ಅವರ ಆದೇಶವನ್ನು ಮೀರಿದನು

21ಆ ಬಳಿಕ ಅವನು ಮರಳಿ ಸಂಚು ಹೂಡ ತೊಡಗಿದನು

22ಮತ್ತು ಜನರನ್ನು ಸೇರಿಸಿ ಕರೆ ಕೊಟ್ಟನು

23ಮತ್ತು ನಾನೇ ನಿಮ್ಮ ಅತಿ ದೊಡ್ಡ ಒಡೆಯನು ಎಂದು ಘೋಷಿಸಿದನು

24ಕೊನೆಗೆ ಅಲ್ಲಾಹನು ಅವನನ್ನು ಹಿಡಿದು ಪರಲೋಕದ ಮತ್ತು ಇಹಲೋಕದ ಶಿಕ್ಷೆಗೆ ಗುರಿಪಡಿಸಿದನು

25ಭಯಭಕ್ತಿ ಉಳ್ಳವನಿಗೆ ಇದರಲ್ಲಿ ಖಂಡಿತ ಪಾಠವಿದೆ

26ನಿಮ್ಮನ್ನು ಸೃಷ್ಟಿಸುವುದು ಕಷ್ಟವೋ ಅಥವಾ ಅಕಾಶಗಳನ್ನೋ? ಅವನು ಅವುಗಳನ್ನು ರಚಿಸಿರುವನು

27ಅವನು ಅವುಗಳನ್ನು ಎತ್ತರಕ್ಕೇರಿಸಿರುವನು ಹಾಗೂ ಅವುಗಳಿಗೆ ರೂಪ ಕೊಟ್ಟಿರುವನು

28ಅವನು ಇರುಳನ್ನು ಕತ್ತಲಾಗಿಸಿರುವನು ಮತ್ತು ಬಿಸಿಲನ್ನು ಹೊರಡಿಸಿರುವನು

29ತರುವಾಯ ಭೂಮಿಯನ್ನು ಹರಡಿರುವನು

30ಅವನು ಅದರಿಂದ ನೀರನ್ನು ಹೊರಡಿಸಿ ಮೇವನ್ನು ಬೆಳೆಸಿರುವನು

31ಮತ್ತು ಅದರ ಮೇಲೆ ಪರ್ವತಗಳನ್ನು ಹೊರಿಸಿರುವನು

32ಇದೆಲ್ಲಾ ನಿಮ್ಮ ಲಾಭಕ್ಕಾಗಿ ಹಾಗೂ ನಿಮ್ಮ ಜಾನುವಾರುಗಳಿಗಾಗಿ

33ಆ ಮಹಾ ವಿಪತ್ತು ಬಂದು ಬಿಟ್ಟಾಗ

34ಅಂದು ಮನುಷ್ಯನು ತಾನು ಮಾಡಿದ್ದೆಲ್ಲವನ್ನೂ ಸ್ಮರಿಸಿ ಕೊಳ್ಳುವನು

35ಮತ್ತು ನೋಡುವವರ ಮುಂದೆ ನರಕವನ್ನು ತಂದಿಡಲಾಗುವುದು

36ವಿದ್ರೋಹ ವೆಸಗಿದವನು

37ಮತ್ತು ಇಹಲೋಕ ಬದುಕಿಗೆ ಪ್ರಾಶಸ್ತ್ಯ ಕೊಟ್ಟವನು –

38– ನರಕವೇ ಅವನ ನೆಲೆಯಾಗಿರುವುದು

39ಇನ್ನು ತನ್ನ ಒಡೆಯನ ಮುಂದೆ ನಿಲ್ಲಲಿಕ್ಕಿದೆ ಎಂದು ಅಂಜುತ್ತಿದ್ದವನು ಮತ್ತು ತನ್ನ ಸ್ವೇಚ್ಛೆಯನ್ನು ನಿಯಂತ್ರಿಸುತ್ತಿದ್ದವನು –

40– ಸ್ವರ್ಗವೇ ಅವನ ನೆಲೆಯಾಗಿರುವುದು

41(ಪುನರುತ್ಥಾನದ) ಆ ಘಳಿಗೆಯು ಎಂದು ಬರುವುದು? ಎಂದು ಅವರು ಪ್ರಶ್ನಿಸುತ್ತಾರೆ

42ಅದನ್ನು ಪ್ರಸ್ತಾಪಿಸಿ ನಿಮಗೆ ಏನಾಗಬೇಕಾಗಿದೆ

43ಆ ಕುರಿತು ಅಂತಿಮ ಜ್ಞಾನವು ನಿಮ್ಮೊಡೆಯನ ಬಳಿ ಇದೆ

44(ದೂತರೇ,) ನೀವಂತು ಭಯ ಭಕ್ತಿ ಉಳ್ಳವರನ್ನು ಎಚ್ಚರಿಸುವವರು ಮಾತ್ರ

45ಅವರು ಅದನ್ನು (ಪರಲೋಕವನ್ನು) ಕಣ್ಣಾರೆ ಕಂಡಾಗ, ತಾವು (ಇಹಲೋಕದಲ್ಲಿ) ಕಳೆದುದು ಕೇವಲ ಒಂದು ಸಂಜೆ ಅಥವಾ ಒಂದು ಮುಂಜಾನೆ ಮಾತ್ರ ಎಂದು ಕೊಳ್ಳುವರು

46ಅವರು (ದೂತರು) ಅತೃಪ್ತರಾದರು ಮತ್ತು ಮುಖ ತಿರುಗಿಸಿಕೊಂಡರು –

ಮೂಲ: Abdussalam Puthige

WEBREATH · 11:11

«If you are thankful, I will give you more» — Quran 14:7

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath