77. ಅಲ್-ಮುರ್ಸಲಾತ್
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಮೃದುವಾಗಿ ಚಲಿಸುವ ವಸ್ತುವಿನ (ವಾಯುವಿನ) ಆಣೆ
2ಕ್ರಮೇಣ ಅದು ಬಿರುಸಾಗಿ ಬಿಡುತ್ತದೆ
3(ಮೋಡಗಳನ್ನು) ವಿವಿಧೆಡೆಗಳಿಗೆ ತಲುಪಿಸುತ್ತದೆ
4ಕೊನೆಗೆ ಅವುಗಳನ್ನು ಚದುರಿಸಿ ಬಿಡುತ್ತದೆ
5ದಿವ್ಯ ಉಪದೇಶವನ್ನು ತಲುಪಿಸುವವರ (ಮಲಕ್ಗಳ) ಆಣೆ
6ಪುರಾವೆಯ ರೂಪದಲ್ಲಾಗಲೀ ಎಚ್ಚರಿಕೆಯ ರೂಪದಲ್ಲಾಗಲೀ
7ನಿಮಗೇನನ್ನು ವಾಗ್ದಾನ ಮಾಡಲಾಗಿದೆಯೋ ಅದು ಖಂಡಿತ ಸಂಭವಿಸಲಿದೆ
8ನಕ್ಷತ್ರಗಳು ನಿಸ್ತೇಜವಾದಾಗ
9ಆಕಾಶವು ಬಿರಿದು ಬಿಟ್ಟಾಗ
10ಪರ್ವತಗಳು (ಚೂರು ಚೂರಾಗಿ) ಹಾರಾಡುತ್ತಿರುವಾಗ
11ದೇವ ದೂತರುಗಳನ್ನು ಒಟ್ಟು ಸೇರಿಸಲಾದಾಗ
12(ಅವರ ವಿಚಾರಣೆಯನ್ನು) ಯಾವ ದಿನಕ್ಕಾಗಿ ಮುಂದೂಡಲಾಗಿದೆ
13(ಅಂತಿಮ) ತೀರ್ಪಿನ ದಿನಕ್ಕಾಗಿ
14ಆ ತೀರ್ಪಿನ ದಿನ ಏನೆಂಬುದು ನಿಮಗೇನು ಗೊತ್ತು
15ಅಂದು ಧಿಕ್ಕಾರಿಗಳಿಗೆ ವಿನಾಶವಿದೆ
16ನಾವೇನು ಹಿಂದಿನವರನ್ನು ನಾಶ ಮಾಡಿಲ್ಲವೇ
17ಆ ಬಳಿಕ ನಾವು ಮುಂದಿನವರನ್ನು ಅವರ ಹಿಂದೆ ನಡೆಸಿದೆವು
18ನಾವು ಅಪರಾಧಿಗಳಿಗೆ ಹೀಗೆಯೇ ಮಾಡುತ್ತೇವೆ
19ಅಂದು ಧಿಕ್ಕಾರಿಗಳಿಗೆ ವಿನಾಶವಿದೆ
20ನಾವೇನು ನಿಮ್ಮನ್ನು ತುಚ್ಛವಾದ ನೀರಿನಿಂದ ಸೃಷ್ಟಿಸಿಲ್ಲವೇ
21ತರುವಾಯ ನಾವು ಅದನ್ನು ಒಂದು ಸುರಕ್ಷಿತ ಸ್ಥಳದಲ್ಲಿಟ್ಟೆವು
22ಒಂದು ನಿರ್ದಿಷ್ಟ ಕಾಲದವರೆಗೆ
23ತರುವಾಯ ನಾವು (ಅದರ) ಪ್ರಮಾಣವನ್ನು ನಿಶ್ಚಯಿಸಿದೆವು. ನಾವು ಅತ್ಯುತ್ತಮವಾಗಿ ಪ್ರಮಾಣವನ್ನು ನಿಶ್ಚಯಿಸುತ್ತೇವೆ
24ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ
25ನಾವು ಭೂಮಿಯನ್ನು ಬಾಚುವ ವಸ್ತುವಾಗಿಸಿಲ್ಲವೇ –
26– ಜೀವಿಸಿರುವವರನ್ನೂ ಸತ್ತವರನ್ನೂ
27ನಾವು ಅದರೊಳಗೆ ಎತ್ತರದ ಪರ್ವತಗಳನ್ನಿಟ್ಟಿರುವೆವು ಮತ್ತು ನಿಮಗೆ ಸಿಹಿ ನೀರನ್ನು ಕುಡಿಸಿರುವೆವು
28ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ
29ಇದೀಗ, ನೀವು ಯಾವುದನ್ನು ತಿರಸ್ಕರಿಸುತ್ತಲಿದ್ದಿರೋ ಅದರೆಡೆಗೆ ನಡೆಯಿರಿ
30ನಡೆಯಿರಿ, ಮೂರು ಮಜಲುಗಳಿರುವ ಕತ್ತಲೆಯೆಡೆಗೆ
31ಅಲ್ಲಿ ನೆರಳು ಇರದು ಮತ್ತು ಅಗ್ನಿಯ ಆಲಿಂಗನದಿಂದ ರಕ್ಷೆಯೂ ಇರದು
32ಅದು ಕೋಟೆಗಳ ಗಾತ್ರದ ಬೆಂಕಿಯ ಕಿಡಿಗಳನ್ನು ಸುರಿಸುತ್ತಿರುವುದು
33ಅವು ಹಳದಿ ಒಂಟೆಗಳಂತಿರುವವು
34ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ
35ಅದು ಅವರಿಗೆ ಮಾತನಾಡಲಾಗದ ದಿನವಾಗಿರುವುದು
36ನೆಪಗಳನ್ನೊಡ್ಡಲು, ಅಂದು ಅವರಿಗೆ ಅನುಮತಿ ಸಿಗದು
37ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ
38ಇದು ಅಂತಿಮ ತೀರ್ಪಿನ ದಿನ. (ಇಂದು) ನಾವು ನಿಮ್ಮನ್ನೂ ನಿಮ್ಮ ಹಿಂದಿನವರನ್ನೂ ಒಟ್ಟು ಸೇರಿಸಿರುವೆವು
39ನಿಮ್ಮ ಬಳಿ ಏನಾದರೂ ಸಂಚು ಇದ್ದರೆ ಹೂಡಿ ನೋಡಿರಿ
40ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ
41(ಅಂದು) ಧರ್ಮನಿಷ್ಠರು ನೆರಳುಗಳಲ್ಲಿರುವರು ಮತ್ತು (ಅವರ ಬಳಿ) ಚಿಲುಮೆಗಳಿರುವವು
42ಹಾಗೂ ಅವರು ಮೆಚ್ಚುವ ಹಣ್ಣು ಹಂಪಲುಗಳಿರುವವು
43‘‘ನೀವು ಮಾಡಿದ್ದ ಕರ್ಮಗಳ ಫಲವಾಗಿ, ಧಾರಾಳವಾಗಿ ತಿನ್ನಿರಿ ಮತ್ತು ಕುಡಿಯಿರಿ’’ (ಎಂದು ಅವರೊಡನೆ ಹೇಳಲಾಗುವುದು)
44ಸಜ್ಜನರನ್ನು ನಾವು ಇದೇ ರೀತಿ ಪುರಸ್ಕರಿಸುತ್ತೇವೆ
45ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ
46(ಧಿಕ್ಕಾರಿಗಳೇ, ಇಹಲೋಕದಲ್ಲಿ) ಅಲ್ಪಾವಧಿಗಾಗಿ ತಿನ್ನಿರಿ ಮತ್ತು ಕುಡಿಯಿರಿ – ನೀವು ಖಂಡಿತ ಅಪರಾಧಿಗಳಾಗಿರುವಿರಿ
47ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ
48‘‘(ಅಲ್ಲಾಹನ ಮುಂದೆ) ಬಾಗಿರಿ’’ ಎಂದು ಅವರೊಡನೆ ಹೇಳಿದಾಗ ಅವರು ಬಾಗುವುದಿಲ್ಲ
49ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ. 50. ಇದರ (ಕುರ್ಆನಿನ) ಬಳಿಕ, ಅವರಿನ್ನು ಯಾವ ಮಾತನ್ನು ತಾನೇ ನಂಬುವರು
50ಅವರು ಯಾವುದರ ಕುರಿತು ವಿಚಾರಿಸುತ್ತಿದ್ದಾರೆ
ಮೂಲ: Abdussalam Puthige
WEBREATH · 11:11
«If you are thankful, I will give you more» — Quran 14:7
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath