75. ಅಲ್-ಕಿಯಾಮಾ
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಅಲ್ಲ, ನಾನು ಪುನರುತ್ಥಾನ ದಿನದ ಆಣೆ ಹಾಕುತ್ತೇನೆ
2ಅಲ್ಲ, ನಾನು ದೂಷಿಸುವ ಚಿತ್ತದ ಆಣೆ ಹಾಕುತ್ತೇನೆ
3ಮನುಷ್ಯನೇನು, ಅವನ ಎಲುಬುಗಳನ್ನು ನಾವು (ಮತ್ತೆ) ಸಂಘಟಿಸಲಾರೆವೆಂದು ಭಾವಿಸಿದ್ದಾನೆಯೇ
4ಯಾಕಿಲ್ಲ? ನಾವಂತೂ ಅವನ ಬೆರಳ ತುದಿಗಳನ್ನೂ ಮತ್ತೆ ರಚಿಸಲು ಸಮರ್ಥರಾಗಿದ್ದೇವೆ
5ನಿಜವಾಗಿ, ಮನುಷ್ಯನು ತನ್ನ ಪಾಪಕೃತ್ಯಗಳಲ್ಲೇ ಮುಂದುವರಿಯ ಬಯಸುತ್ತಾನೆ
6‘‘ಪುನರುತ್ಥಾನ ದಿನವು ಅದೆಂದು ಬಂದೀತು?’’ ಎಂದು ಅವನು (ವ್ಯಂಗ್ಯವಾಗಿ) ಪ್ರಶ್ನಿಸುತ್ತಾನೆ
7ಕಣ್ಣುಗಳು ಕೋರೈಸುವಾಗ
8ಚಂದ್ರಕ್ಕೆ ಗ್ರಹಣವಾದಾಗ
9ಮತ್ತು ಸೂರ್ಯ ಹಾಗೂ ಚಂದ್ರರನ್ನು ಒಂದು ಗೂಡಿಸಲಾದಾಗ
10ಆ ದಿನ ಮನುಷ್ಯನು ‘‘ಪಲಾಯನಕ್ಕೆ ದಾರಿ ಎಲ್ಲಿದೆ?’’ ಎಂದು ಕೇಳುವನು
11ಖಂಡಿತ ಇಲ್ಲ, ಎಲ್ಲೂ ಆಶ್ರಯವಿಲ್ಲ
12ಅಂದು ಆಶ್ರಯವಿರುವುದು ನಿಮ್ಮೊಡೆಯನ ಬಳಿಯಲ್ಲಿ ಮಾತ್ರ
13ಅಂದು ಅವನು ಮನುಷ್ಯನಿಗೆ ತಿಳಿಸುವನು, ಆತನು ಮುಂದೆ ಕಳಿಸಿದ್ದ ಮತ್ತು ಹಿಂದೆ ಬಿಟ್ಟು ಬಂದಿದ್ದ ಕರ್ಮಗಳ ಕುರಿತು
14ನಿಜವಾಗಿ ಮನುಷ್ಯನು ತನ್ನ ಕುರಿತು ತಾನೇ ಸಾಕ್ಷಿಯಾಗಿದ್ದಾನೆ
15ಅವನು ಅದೆಷ್ಟೇ ನೆಪಗಳನ್ನೊಡ್ಡಿದರೂ ಸರಿಯೇ
16(ದೂತರೇ,) ನೀವು ಇದಕ್ಕಾಗಿ (ದಿವ್ಯವಾಣಿಯನ್ನು ನೆನಪಿಟ್ಟುಕೊಳ್ಳಲಿಕ್ಕಾಗಿ) ಆತುರವಾಗಿ ನಿಮ್ಮ ನಾಲಿಗೆಯನ್ನು ಚಲಿಸಬೇಡಿ
17ಇದನ್ನು ಸಂಗ್ರಹಿಸುವ ಹಾಗೂ ಓದಿಸುವ ಹೊಣೆ ಖಂಡಿತ ನಮ್ಮ ಮೇಲಿದೆ
18ಆದ್ದರಿಂದ ನಾವು ಇದನ್ನು ಓದುವಾಗ, ನೀವು ಇದರ ಪಠಣವನ್ನು ಅನುಸರಿಸಿರಿ
19ಆ ಬಳಿಕ ಇದನ್ನು ವಿವರಿಸುವ ಹೊಣೆಯೂ ನಮ್ಮ ಮೇಲಿದೆ
20ಹಾಗೇನೂ ಅಲ್ಲ. (ಜನರೇ,) ನೀವು ತುರ್ತಾಗಿ ಸಿಗುವುದನ್ನು (ಇಹ ಲೋಕವನ್ನು) ಮಾತ್ರ ಪ್ರೀತಿಸುತ್ತೀರಿ
21ಮತ್ತು ಅನಂತರದ್ದನ್ನು (ಪರಲೋಕವನ್ನು) ಬಿಟ್ಟು ಬಿಡುತ್ತೀರಿ
22ಅಂದು ಹಲವು ಮುಖಗಳು ಅರಳಿರುವವು
23ಅವು ತಮ್ಮ ಒಡೆಯನೆಡೆಗೆ ನೋಡುತ್ತಿರುವವು
24ಮತ್ತೆ ಕೆಲವು ಮುಖಗಳು ಅಂದು ಬಾಡಿರುವವು
25ತಮ್ಮ ಜೊತೆ ಸೊಂಟ ಮುರಿಯುವಂತಹ ವ್ಯವಹಾರ ನಡೆಯುವುದನ್ನ್ನು ಅವು ನಿರೀಕ್ಷಿಸುತ್ತಿರುವವು
26ಹಾಗಲ್ಲ. ಜೀವವು ಕೊರಳನ್ನು ತಲುಪಿದಾಗ
27ಜನರು, ‘‘ಮಾಂತ್ರಿಕನೆಲ್ಲಿದ್ದಾನೆ?’’ ಎನ್ನುವರು
28ಅದು (ತನ್ನ) ವಿದಾಯದ ಸಮಯ ಎಂದು (ಸಾಯುತ್ತಿರುವವನಿಗೆ) ಅನಿಸುವುದು
29(ಸತ್ತವನ) ಮೊಣ ಕಾಲುಗಳನ್ನು ಸೇರಿಸಿ ಕಟ್ಟಲಾಗುವುದು
30ಅಂದು ನೀನು ನಿನ್ನ ಒಡೆಯನೆಡೆಗೆ ಹೊರಡ ಬೇಕಾಗುವುದು
31ಅವನು ಸತ್ಯವನ್ನು ಸಮರ್ಥಿಸಲಿಲ್ಲ ಮತ್ತು ನಮಾಝನ್ನು ಸಲ್ಲಿಸಲಿಲ್ಲ
32ಅವನು (ಸತ್ಯವನ್ನು) ತಿರಸ್ಕರಿಸಿದನು ಹಾಗೂ ಕಡೆಗಣಿಸಿದನು
33ಮತ್ತು ಹೆಮ್ಮೆಯಿಂದ ಬೀಗುತ್ತಾ ತನ್ನ ಮನೆಯವರ ಬಳಿಗೆ ಹೊರಟನು
34ಅಯ್ಯೋ ನಿನ್ನ ದುಸ್ಥಿತಿಯೇ
35ಅಯ್ಯೋ ನಿನ್ನ ದುಸ್ಥಿತಿಯೇ
36ಮನುಷ್ಯನೇನು, ತನ್ನನ್ನು ಹೀಗೆಯೇ ಬಿಟ್ಟು ಬಿಡಲಾಗುವುದೆಂದು ಕೊಂಡಿದ್ದಾನೆಯೇ
37ಅವನೇನು, ಕೇವಲ ಹರಿಸಿ ಬಿಡಲಾದ ಒಂದು ಹನಿ ವೀರ್ಯವಾಗಿರಲಿಲ್ಲವೇ
38ತರುವಾಯ ಅವನು ರಕ್ತ ಪಿಂಡವಾದನು. ಆ ಬಳಿಕ ಅವನು (ಅಲ್ಲಾಹನು) ಅವನನ್ನು ಸೃಷ್ಟಿಸಿದನು ಮತ್ತು ರೂಪಿಸಿದನು
39ಮುಂದೆ ಅದರಿಂದಲೇ ಪುರುಷ ಮತ್ತು ಸ್ತ್ರೀ ಎಂಬ ಇಬ್ಬರ ಜೋಡಿಯನ್ನುಂಟು ಮಾಡಿದನು
40ಅಂಥವನು (ಇಷ್ಟೆಲ್ಲಾ ಮಾಡಿದವನು) ಸತ್ತವರನ್ನು ಜೀವಂತಗೊಳಿಸಲು ಅಸಮರ್ಥನೇ
ಮೂಲ: Abdussalam Puthige
WEBREATH · 11:11
«If you are thankful, I will give you more» — Quran 14:7
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath