ಇಸ್ಲಾಂ
ಹಿಂದೆ

74. ಅಲ್-ಮುದ್ದತ್ಥಿರ್

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಹೊದ್ದುಕೊಂಡಿರುವವರೇ

2ಎದ್ದೇಳಿರಿ ಮತ್ತು ಎಚ್ಚರಿಸಿರಿ

3ನಿಮ್ಮ ಒಡೆಯನ ಹಿರಿಮೆಯನ್ನು ಕೊಂಡಾಡಿರಿ

4ನಿಮ್ಮ ವಸ್ತ್ರಗಳನ್ನು ಶುಚಿಯಾಗಿಡಿ

5ಮಾಲಿನ್ಯಗಳಿಂದ ದೂರ ಉಳಿಯಿರಿ

6(ಉಪಕೃತನಿಂದ) ಹೆಚ್ಚಿನದನ್ನು ಪಡೆಯಲಿಕ್ಕಾಗಿ ಉಪಕಾರ ಮಾಡಬೇಡಿರಿ

7ನಿಮ್ಮೊಡೆಯನಿಗಾಗಿ ಸಹನಶೀಲರಾಗಿರಿ

8(ಲೋಕಾಂತ್ಯದ) ಕಹಳೆಯನ್ನು ಊದಲಾದಾಗ

9ಆ ದಿನವು ಬಹಳ ಕಠಿಣ ದಿನವಾಗಿರುವುದು

10ಧಿಕ್ಕಾರಿಗಳ ಪಾಲಿಗೆ ಅದು ಸುಲಭವಾಗಿರಲಾರದು

11ಬಿಟ್ಟು ಬಿಡಿರಿ, ನನ್ನನ್ನು ಮತ್ತು ನಾನು ಸೃಷ್ಟಿಸುವಾಗ ಒಂಟಿಯಾಗಿದ್ದಾತನನ್ನು

12(ಮುಂದೆ) ನಾನು ಅವನಿಗೆ ಧಾರಾಳ ಸಂಪತ್ತನ್ನು ನೀಡಿದೆನು

13ಮತ್ತು ಸದಾ ಅವನ ಜೊತೆಗಿರುವ ಪುತ್ರರನ್ನು ನೀಡಿದೆನು

14ಮತ್ತು ಅವನಿಗೆ ಎಲ್ಲ ಬಗೆಯ ಸಾಧನಗಳನ್ನು ಒದಗಿಸಿದೆನು

15ಆದರೆ ಅವನು, ನಾನು ಮತ್ತಷ್ಟು ನೀಡಬೇಕೆಂದು ಆಸೆ ಪಡುತ್ತಿದ್ದಾನೆ

16ಹಾಗಾಗದು; ಅವನು ನಮ್ಮ ವಚನಗಳ ಶತ್ರುವಾಗಿರುವನು

17ನಾನು ಅವನನ್ನು (ನರಕದ) ದುರ್ಗಮ ಬೆಟ್ಟವನ್ನು ಹತ್ತಿಸಲಿರುವೆನು

18ಅವನು ಯೋಚಿಸಿದನು ಮತ್ತು ನಿರ್ಧರಿಸಿಕೊಂಡನು

19ನಾಶವಾಗಲಿ ಅವನು, ಎಂತಹ ನಿರ್ಧಾರ ಅವನದು

20ಮತ್ತೆ, ನಾಶವಾಗಲಿ ಅವನು, ಎಂತಹ ನಿರ್ಧಾರ ಅವನದು

21ಮತ್ತೆ ಅವನು ನೋಡಿದನು

22ಮತ್ತೆ ಅವನು ಹುಬ್ಬೇರಿಸಿ ಮುಖ ತಿರುಚಿಕೊಂಡನು

23ಮತ್ತೆ ಅವನು ತಿರುಗಿ ನಿಂತನು ಮತ್ತು ಅಹಂಕಾರ ತೋರಿದನು

24ಮತ್ತೆ ಅವನು ಹೇಳಿದನು; ‘‘ಇದು ಪರಂಪರಾಗತ ಮಾಟಗಾರಿಕೆಯೇ ಹೊರತು ಬೇರೇನಲ್ಲ’’

25‘‘ಇದು ಕೇವಲ ಮನುಷ್ಯನ ಮಾತೇ ಹೊರತು ಬೇರೇನಲ್ಲ’’

26ನಾವು ಅವನನ್ನು ‘ಸಕರ್’ಗೆ (ನರಕಕ್ಕೆ) ಎಸಯಲಿರುವೆವು

27ಸಕರ್ ಏನೆಂದು ನಿಮಗೇನು ಗೊತ್ತು

28ಅದು ಉಳಿಯಲೂ ಬಿಡದು ಅಳಿಯಲೂ ಬಿಡದು

29ಅದು ಮನುಷ್ಯನನ್ನು ಸುಟ್ಟು ಕರ್ರಗಾಗಿಸುವುದು

30ಅದರ ಮೇಲೆ ಹತ್ತೊಂಭತ್ತು ಮಂದಿ (ಕಾವಲುಗಾರರು) ಇರುವರು

31ನಾವು ಮಲಕ್‌ಗಳನ್ನೇ ನರಕದ ಕಾವಲುಗಾರರಾಗಿಸಿರುವೆವು ಮತ್ತು ಅವರ ಸಂಖ್ಯೆಯನ್ನು ಧಿಕ್ಕಾರಿಗಳ ಪಾಲಿಗೆ ಪರೀಕ್ಷೆಯಾಗಿಸಿರುವೆವು – ಗ್ರಂಥದವರು ನಂಬಲೆಂದು ಹಾಗೂ ವಿಶ್ವಾಸಿಗಳ ವಿಶ್ವಾಸವು ಹೆಚ್ಚಲೆಂದು ಮತ್ತು ಗ್ರಂಥದವರಾಗಲಿ ವಿಶ್ವಾಸಿಗಳಾಗಲಿ ಸಂಶಯಕ್ಕೆ ತುತ್ತಾಗಬಾರದೆಂದು ಮತ್ತು ಮನಸ್ಸಿನಲ್ಲಿ ರೋಗವಿರುವವರು ಹಾಗೂ ಧಿಕ್ಕಾರಿಗಳು ‘‘ಈ ಉದಾಹರಣೆಯ ಮೂಲಕ ಅಲ್ಲಾಹನು ಬಯಸುವುದೇನನ್ನು?’’ ಎಂದು ಕೇಳಲೆಂದು. ಈ ರೀತಿ ಅಲ್ಲಾಹನು ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ. ಹಾಗೂ ತಾನಿಚ್ಛಿಸಿದವರಿಗೆ ಸರಿದಾರಿಯನ್ನು ತೋರುತ್ತಾನೆ. ನಿಮ್ಮ ಒಡೆಯನ ಪಡೆಗಳ ಕುರಿತು ಅವನ ಹೊರತು ಬೇರೆ ಯಾರಿಗೂ ತಿಳಿಯದು. ಇದು ಮಾನವರಿಗಾಗಿರುವ ಉಪದೇಶ ಮಾತ್ರವಾಗಿದೆ

32ಹಾಗೇನೂ ಅಲ್ಲ, ಚಂದ್ರನಾಣೆ

33ಮತ್ತು ಇರುಳು ಮರಳುವಾಗಿನ ಆಣೆ

34ಮತ್ತು ಮುಂಜಾವು ಬೆಳಗುವಾಗಿನಾಣೆ

35ಅದು (ನರಕವು) ಒಂದು ಮಹಾ ವಿಪತ್ತಾಗಿದೆ

36ಜನರು ಅಂಜ ಬೇಕಾದ ವಸ್ತುವಾಗಿದೆ

37ನಿಮ್ಮ ಪೈಕಿ ಇಷ್ಟ ಉಳ್ಳವನು ಮುಂದೆ ಹೋಗಲಿ ಅಥವಾ ಹಿಂದೆ ಉಳಿಯಲಿ

38ಪ್ರತಿಯೊಬ್ಬನೂ ತನ್ನ ಕರ್ಮಗಳ ಬದಲಿಗೆ ಒತ್ತೆಯಾಳಾಗಿರುವನು

39ಬಲಭಾಗದವರ ಹೊರತು

40ಅವರು ಸ್ವರ್ಗ ತೋಟಗಳಲ್ಲಿ ಇರುವರು ಮತ್ತು ಪ್ರಶ್ನಿಸುವರು

41ಅಪರಾಧಿಗಳೊಡನೆ

42‘‘ನೀವೇಕೆ ನರಕಕ್ಕೆ ಹೋದಿರಿ?’’

43ಅವರು ಹೇಳುವರು; ‘‘ನಾವು ನಮಾಝ್ ಸಲ್ಲಿಸುವವರಾಗಿರಲಿಲ್ಲ’’

44‘‘ಮತ್ತು ನಾವು ಬಡವರಿಗೆ ಉಣಿಸುತ್ತಿರಲಿಲ್ಲ’’

45‘‘ನಿರರ್ಥಕ ಮಾತುಗಳನ್ನಾಡುವವರ ಜೊತೆಗಿದ್ದು ನಾವೂ ನಿರರ್ಥಕ ಮಾತುಗಳನ್ನಾಡುತ್ತಿದ್ದೆವು’’

46‘‘ಮತ್ತು ನಾವು ಅಂತಿಮ ವಿಚಾರಣೆಯ ದಿನವನ್ನು ಅಲ್ಲಗಳೆಯುತ್ತಿದ್ದೆವು’’

47‘‘ಕೊನೆಗೆ ಖಚಿತವಾದ ಆ ಸಂಭವವು (ಮರಣ) ನಮ್ಮ ಬಳಿಗೆ ಬಂದು ಬಿಟ್ಟಿತು’’

48ಶಿಫಾರಸುದಾರರ ಶಿಫಾರಸಿನಿಂದ ಅವರಿಗೆ ಯಾವ ಲಾಭವೂ ಆಗದು

49ಅವರಿಗೇನಾಗಿದೆ? ಉಪದೇಶವನ್ನು ಅವರೇಕೆ ಕಡೆಗಣಿಸುತ್ತಿದ್ದಾರೆ

50ಅವರು (ಸತ್ಯದ ಮುಂದೆ) ಕತ್ತೆಗಳಂತೆ ಬೆಚ್ಚಿ ಬೀಳುತ್ತಿದ್ದಾರೆ

51ಸಿಂಹಕ್ಕೆ ಅಂಜಿ ಓಡುತ್ತಿರುವ (ಕತ್ತೆಗಳಂತೆ)

52ನಿಜವಾಗಿ ಅವರ ಪೈಕಿ ಪ್ರತಿಯೊಬ್ಬರೂ, ತಮ್ಮ ಬಳಿಗೆ ತೆರೆದ ಗ್ರಂಥವೊಂದು (ಆಕಾಶದಿಂದ ಇಳಿದು) ಬರಬೇಕೆಂದು ಅಪೇಕ್ಷಿಸುತ್ತಿದ್ದಾರೆ

53ಹಾಗೇನೂ ಅಲ್ಲ. ನಿಜವಾಗಿ ಅವರಿಗೆ ಪರಲೋಕದ ಭಯವಿಲ್ಲ

54ಹಾಗೇನೂ ಅಲ್ಲ. ಇದು ಖಂಡಿತ ಒಂದು ಉಪದೇಶವಾಗಿದೆ

55ಇಷ್ಟವುಳ್ಳವನು ಇದನ್ನು ನೆನಪಿಡಲಿ

56ಅಲ್ಲಾಹನು ಇಚ್ಛಿಸುವವನು ಮಾತ್ರ ಇದನ್ನು ನೆನಪಿಡುವನು. ಅವನು (ಅಲ್ಲಾಹನು) ಭಕ್ತಿಗೆ ಅರ್ಹನು ಹಾಗೂ ಕ್ಷಮಿಸುವವನಾಗಿದ್ದಾನೆ

ಮೂಲ: Abdussalam Puthige

WEBREATH · 11:11

«If you are thankful, I will give you more» — Quran 14:7

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath