ಇಸ್ಲಾಂ
ಹಿಂದೆ

69. ಅಲ್-ಹಕ್ಕಾ

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ನಿಜವಾಗಿ, ಇದು ಸರ್ವಲೋಕಗಳಿಗಾಗಿ ಇರುವ ಒಂದು ಉಪದೇಶವಾಗಿದೆ

2ನೈಜ ಸಂಭವ

3ಏನದು ನೈಜ ಸಂಭವ

4ನಿಮಗೇನು ಗೊತ್ತು, ಆ ನೈಜ ಸಂಭವದ ಕುರಿತು

5ಸಮೂದ್ ಮತ್ತು ಆದ್ ಜನಾಂಗದವರು ಆ ಹಠಾತ್ ಸಂಭವವನ್ನು ಅಲ್ಲಗಳೆದರು

6ಕೊನೆಗೆ ಸಮೂದರನ್ನು ಸಿಡಿಲಿಗೆ ತುತ್ತಾಗಿಸಿ ನಾಶ ಮಾಡಲಾಯಿತು

7ಇನ್ನು, ಆದ್‌ರನ್ನು ತೀವ್ರ ವೇಗದ ಬಿರುಗಾಳಿಯೊಂದರ ಮೂಲಕ ನಾಶ ಮಾಡಲಾಯಿತು

8ಅದನ್ನು ಸತತ ಏಳು ರಾತ್ರಿ ಹಾಗೂ ಎಂಟು ದಿನಗಳ ಕಾಲ ಅವರ ಮೇಲೆ ಹೇರಲಾಯಿತು. ಮತ್ತು ಅಲ್ಲಿದ್ದವರೆಲ್ಲರೂ ಟೊಳ್ಳಾದ ಖರ್ಜೂರದ ಕಾಂಡಗಳೋ ಎಂಬಂತೆ ಸತ್ತು ಬಿದ್ದಿರುವುದು ನಿಮಗೆ ಕಾಣಿಸುತ್ತಿತ್ತು

9ಅವರ ಪೈಕಿ ಉಳಿದಿರುವ ಯಾರಾದರೂ ನಿಮಗೆ ಕಾಣಿಸುತ್ತಿದ್ದಾರೆಯೇ

10ಫಿರ್‌ಔನ್ ಹಾಗೂ ಅವನಿಗಿಂತ ಹಿಂದಿನವರು ಮತ್ತು ಬುಡಮೇಲಾದ ನಾಡಿನವರು ಅಪರಾಧಗಳನ್ನು ಎಸಗಿದ್ದರು

11ಅವರು ತಮ್ಮ ಒಡೆಯನ (ಅಲ್ಲಾಹನ) ದೂತರ ಆದೇಶಗಳನ್ನು ಮೀರಿ ನಡೆದಾಗ ಅವನು ಅವರನ್ನು ಬಹಳ ಕಠೋರವಾಗಿ ದಂಡಿಸಿದನು

12ಪ್ರವಾಹವು ಮಿತಿಮೀರಿದಾಗ ನಾವು ನಿಮ್ಮನ್ನು ಹಡಗಿಗೆ ಹತ್ತಿಸಿದೆವು

13ಅದನ್ನು ನಿಮ್ಮ ಪಾಲಿಗೆ ಸ್ಮಾರಕವಾಗಿಸಲಿಕ್ಕಾಗಿ ಮತ್ತು ನೆನಪಿಡುವ ಕಿವಿಗಳು ಅದನ್ನು ನೆನಪಿಡಲೆಂದು

14ಕಹಳೆಯನ್ನು ಒಂದು ಬಾರಿ ಊದಿದಾಗ

15ಭೂಮಿಯನ್ನೂ ಪರ್ವತಗಳನ್ನೂ ಮೇಲಕ್ಕೆತ್ತಲಾಗುವುದು ಮತ್ತು ಅವೆರಡನ್ನೂ ಪುಡಿಗಟ್ಟಿ ಒಮ್ಮೆಗೇ ನೆಲಸಮಗೊಳಿಸಲಾಗುವುದು

16ಅಂದು ಸಂಭವಿಸಲಿದೆ, ಆ ನೈಜ ಸಂಭವ

17ಆಕಾಶವು ಬಿರಿದು ಬಿಡುವುದು ಮತ್ತು ಅಂದು ಅದು ತೀರಾ ದುರ್ಬಲ ವಾಗಿರುವುದು

18ಮಲಕ್‌ಗಳು ಅದರ ಸುತ್ತಲೂ ಇರುವರು, ಮತ್ತು ಆ ದಿನ ಎಂಟು ಮಂದಿ (ಮಲಕ್‌ಗಳು) ನಿಮ್ಮೊಡೆಯನ ಪೀಠವನ್ನು ತಮ್ಮ ಮೇಲೆ ಹೊತ್ತಿರುವರು

19ಅಂದು ನಿಮ್ಮನ್ನು (ಎಲ್ಲರ ಮುಂದೆ) ಹಾಜರುಪಡಿಸಲಾಗುವುದು ಮತ್ತು ನಿಮ್ಮ ಯಾವ ವಿಷಯವೂ ಗುಪ್ತವಾಗಿ ಉಳಿಯದು

20ಕರ್ಮಪತ್ರವನ್ನು ಬಲಗೈಯಲ್ಲಿ ನೀಡಲಾದವನು (ಇತರರೊಡನೆ) ಹೇಳುವನು; ‘‘ಇದೋ ನನ್ನ ಕರ್ಮಪತ್ರವನ್ನು ಓದಿರಿ’’

21‘‘ನಾನು ನನ್ನ ವಿಚಾರಣೆಯನ್ನು ಖಂಡಿತ ಎದುರಿಸಬೇಕಾಗುವುದು ಎಂದು ನಾನು ಮೊದಲೇ ನಂಬಿದ್ದೆ’’

22ಅವನು ಧಾರಾಳ ಸುಖಃದಲ್ಲಿರುವವನು

23ಎತ್ತರವಾದ ಸ್ವರ್ಗ ತೋಟಗಳಲ್ಲಿ

24ಅಲ್ಲಿಯ ಹಣ್ಣಿನ ಗೊಂಚಲುಗಳು ಬಾಗಿರುವವು

25(ಅವರೊಡನೆ ಹೇಳಲಾಗುವುದು;) ಕಳೆದು ಹೋದ ದಿನಗಳಲ್ಲಿ ನೀವು ಮಾಡಿದ್ದ ಕರ್ಮಗಳ ಫಲವಾಗಿ (ಇಂದು) ಮೋಜು ಮಾಡುತ್ತಾ ತಿನ್ನಿರಿ ಹಾಗೂ ಕುಡಿಯಿರಿ

26ಕರ್ಮ ಪತ್ರವನ್ನು ಎಡಗೈಯಲ್ಲಿ ನೀಡಲಾದವನು ಹೇಳುವನು; ‘‘ಅಯ್ಯೋ, ನನಗೆ ನನ್ನ ಕರ್ಮಪತ್ರವು ಸಿಗದೆ ಇದ್ದಿದ್ದರೆ ಚೆನ್ನಾಗಿತ್ತು!’’

27‘‘ಮತ್ತು ನನ್ನ ಫಲಿತಾಂಶ ಏನೆಂಬುದು ನನಗೆ ತಿಳಿಯದೆ ಇದ್ದಿದ್ದರೆ ಚೆನ್ನಾಗಿತ್ತು’’

28‘‘ಅಯ್ಯೋ, ಆ ನನ್ನ ಮರಣವೇ ಅಂತಿಮವಾಗಿದ್ದರೆ ಚೆನ್ನಾಗಿತ್ತು’’

29‘‘ಇಂದು ನನ್ನ ಸಂಪತ್ತಿನಿಂದ ನನಗೆ ಯಾವ ಲಾಭವೂ ಇಲ್ಲ’’

30‘‘ನನ್ನ ಅಧಿಕಾರವೆಲ್ಲವೂ ನನ್ನಿಂದ ಕಳೆದು ಹೋಗಿದೆ’’

31ಆಗ ಆದೇಶಿಸಲಾಗುವುದು; ಅವನನ್ನು ಹಿಡಿಯಿರಿ ಮತ್ತು ನೊಗವನ್ನು ತೊಡಿಸಿರಿ

32ಮತ್ತು ಅವನನ್ನು ನರಕದ ಬೆಂಕಿಗೆ ಎಸೆದು ಬಿಡಿರಿ

33ಮತ್ತು ಅವನನ್ನು ಎಪ್ಪತ್ತು ಗಜ ಉದ್ದದ ಸಂಕೋಲೆಯಲ್ಲಿ ಬಿಗಿದು ಕಟ್ಟಿರಿ

34ಅವನು ಮಹೋನ್ನತನಾದ ಅಲ್ಲಾಹನಲ್ಲಿ ನಂಬಿಕೆ ಇಟ್ಟಿರಲಿಲ್ಲ

35ಮತ್ತು ಅವನು ಬಡವರಿಗೆ ಉಣಿಸುವುದಕ್ಕೆ ಯಾರನ್ನೂ ಪ್ರೇರೇಪಿಸುತ್ತಿರಲಿಲ್ಲ

36ಇಂದು, ಅವನಿಗಿಲ್ಲಿ ಮಿತ್ರರು ಯಾರೂ ಇಲ್ಲ

37ಕೀವಿನ ಹೊರತು ಬೇರೆ ಯಾವ ಆಹಾರವೂ ಅವನಿಗೆ ದಕ್ಕದು

38ಮತ್ತು ಅದನ್ನು ಅಪರಾಧಿಗಳ ಹೊರತು ಬೇರೆ ಯಾರೂ ತಿನ್ನಲಾರರು

39ನಾನು ನಿಮಗೆ ಕಾಣುವ ವಸ್ತುಗಳ ಆಣೆ ಹಾಕಿ ಹೇಳುತ್ತಿದ್ದೇನೆ

40ಮತ್ತು ನಾನು ನಿಮಗೆ ಕಾಣದ ವಸ್ತುಗಳ ಆಣೆ ಹಾಕಿ ಹೇಳುತ್ತಿದ್ದೇನೆ

41ಖಂಡಿತವಾಗಿಯೂ ಇದು ಒಬ್ಬ ಗೌರವಾನ್ವಿತ ದೂತನ ಮಾತು

42ಇದು ಯಾವುದೇ ಕವಿಯ ಮಾತಲ್ಲ. ಅದರೆ ನೀವು ನಂಬುವುದು ಮಾತ್ರ ಕಡಿಮೆ

43ಇದು ಯಾವುದೇ ಮಾಂತ್ರಿಕನ ಮಾತಲ್ಲ. ನೀವು ಪಾಠ ಕಲಿಯುವುದು ತುಂಬಾ ಕಡಿಮೆ

44ಇದು ಸಕಲ ಲೋಕಗಳ ಒಡೆಯನು ಇಳಿಸಿ ಕೊಟ್ಟಿರುವ ಸಂದೇಶ

45ಒಂದು ವೇಳೆ ಅವರು (ದೂತರು) ನಮ್ಮ ಕುರಿತು ಏನಾದರೂ ಸುಳ್ಳು ಹೇಳುತ್ತಿದ್ದರೆ

46ನಾವು ಅವರ ಬಲಗೈಯನ್ನು ಹಿಡಿಯುತ್ತಿದ್ದೆವು

47ಮತ್ತು ನಾವು ಅವರ ಜೀವನಾಡಿಯನ್ನು ಕತ್ತರಿಸಿ ಬಿಡುತ್ತಿದ್ದೆವು

48ನಿಮ್ಮ ಪೈಕಿ ಯಾರಿಗೂ ನಮ್ಮನ್ನು ತಡೆಯಲು ಸಾಧ್ಯವಿರಲಿಲ್ಲ

49ಇದು (ಈ ಗ್ರಂಥವು) ಖಂಡಿತ ಧರ್ಮನಿಷ್ಠರ ಪಾಲಿಗೆ ಒಂದು ಉಪದೇಶವಾಗಿದೆ

50ನಿಮ್ಮ ನಡುವೆ ಸುಳ್ಳುಗಾರರು ಇರುವ ಕುರಿತು ನಮಗೆ ತಿಳಿದಿದೆ

51ಖಂಡಿತವಾಗಿಯೂ ಇದು, ಧಿಕ್ಕಾರಿಗಳು ಪರಿತಪಿಸುವುದಕ್ಕೆ ಕಾರಣವಾಗಲಿದೆ

52ಇದು ನಿಸ್ಸಂದೇಹವಾಗಿಯೂ ನಂಬಲರ್ಹ ಸತ್ಯವಾಗಿದೆ

ಮೂಲ: Abdussalam Puthige

WEBREATH · 11:11

«If you are thankful, I will give you more» — Quran 14:7

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath