ಇಸ್ಲಾಂ
ಹಿಂದೆ

68. ಅಲ್-ಕಲಾಮ್

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಹೇಳಿರಿ; ನೀವು ಚಿಂತಿಸಿ ನೋಡಿದಿರಾ? ನೀವು ಬಳಸುವ ನೀರು ಇಂಗಿ ಹೋದರೆ ಯಾರಿದ್ದಾರೆ, ನಿಮಗೆ ಸಿಹಿ ನೀರಿನ ಚಿಲುಮೆಗಳನ್ನು ತಂದು ಕೊಡುವವರು

2ನೂನ್ – ಲೇಖನಿಯ ಮತ್ತು ಅವರ (ಮಲಕ್‌ಗಳ) ಬರಹದ ಆಣೆ

3(ದೂತರೇ,) ನಿಮ್ಮ ಒಡೆಯನ ಅನುಗ್ರಹದಿಂದ ನೀವು ಹುಚ್ಚರೇನಲ್ಲ

4ನಿಮಗೆ, ಎಂದೂ ಮುಗಿಯದ ಪ್ರತಿಫಲವು ಸಿಗಲಿದೆ

5ನೀವು ಖಂಡಿತ ಅತ್ಯುನ್ನತ ಮಟ್ಟದ ಚಾರಿತ್ರವಂತರು

6ಶೀಘ್ರವೇ ನೀವು ನೋಡುವಿರಿ ಮತ್ತು ಅವರೂ ನೋಡುವರು –

7– ನಿಮ್ಮ ಪೈಕಿ ಹುಚ್ಚನು ಯಾರೆಂದು

8ತನ್ನ ದಾರಿಯಿಂದ ದೂರ ಸರಿದವನು ಯಾರೆಂಬುದನ್ನು ಚೆನ್ನಾಗಿ ಬಲ್ಲವನು ಆ ನಿಮ್ಮ ಒಡೆಯನು. ಯಾರು ಸರಿ ದಾರಿಯಲ್ಲಿದ್ದಾರೆ ಎಂಬುದನ್ನೂ ಅವನೇ ಬಲ್ಲನು

9ನೀವು ಸುಳ್ಳುಗಾರರನ್ನು ಅನುಸರಿಸಬೇಡಿರಿ

10ನೀವು ತುಸು ಮೃದು ಧೋರಣೆ ತಾಳಿದರೆ ತಾವೂ ಮೃದುವಾಗಬೇಕೆಂದು ಅವರು ಅಪೇಕ್ಷಿಸುತ್ತಿದ್ದಾರೆ

11ನೀವು ಖಂಡಿತ ಅನುಸರಿಸಬೇಡಿ – ಪದೇ ಪದೇ ಪ್ರಮಾಣ ಮಾಡುವ ನೀಚನನ್ನು

12ದೂಷಿಸುತ್ತಾ ನಿಂದಿಸುತ್ತಾ ತಿರುಗಾಡುವಾತನನ್ನು

13ಸತ್ಕಾರ್ಯಕ್ಕೆ ಖರ್ಚು ಮಾಡದವನನ್ನು, ಅತಿರೇಕ ವೆಸಗುವ ಪಾಪಿಯನ್ನು

14ಉಗ್ರ ಸ್ವಭಾವದವನನ್ನು, ಚಾರಿತ್ರಹೀನನನ್ನು

15ತನ್ನ ಬಳಿ ಸಂಪತ್ತಿದೆ ಮತ್ತು ಪುತ್ರರಿದ್ದಾರೆಂದು (ಅವನು ಅಹಂಕರಿಸುತ್ತಾನೆ)

16ಅವನಿಗೆ ನಮ್ಮ ವಚನಗಳನ್ನು ಓದಿ ಕೇಳಿಸಲಾದಾಗ ‘‘ಅವೆಲ್ಲಾ ಗತಕಾಲದ ಕಥೆಗಳು’’ ಎನ್ನುತ್ತಾನೆ

17ಶೀಘ್ರವೇ ನಾವು ಅವನ ಮೂಗಿನ ಮೇಲೆ ಬರೆ ಎಳೆಯಲಿದ್ದೇವೆ

18ಹಿಂದೆ ತೋಟದವರನ್ನು ಪರೀಕ್ಷಿಸಿದಂತೆ ನಾವು ಅವರನ್ನು ಪರೀಕ್ಷಿಸಿದ್ದೇವಷ್ಟೆ. ‘‘ನಾವು ಅದರ (ಆ ತೋಟದ) ಬೆಳೆಯನ್ನು ನಾಳೆ ಮುಂಜಾನೆ ಖಂಡಿತ ಕೊಯ್ಯುವೆವು’’ ಎಂದು ಅವರು ಪ್ರಮಾಣ ಮಾಡಿ ಘೋಷಿಸಿದ್ದರು

19ಇನ್ನೊಂದು ಸಾಧ್ಯತೆಯನ್ನು ಅವರು ಪ್ರಸ್ತಾಪಿಸಲಿಲ್ಲ. (‘ಅಲ್ಲಾಹನಿಚ್ಛಿಸಿದರೆ’ ಎನ್ನಲಿಲ್ಲ)

20ಅವರು ನಿದ್ರಿಸುತ್ತಿದ್ದಾಗಲೇ ನಿಮ್ಮೊಡೆಯನ ಕಡೆಯಿಂದ ಅದರ (ಆ ತೋಟದ) ಮೇಲೊಂದು ವಿಪತ್ತು ಬಂದೆರಗಿತು

21ಬೆಳಗಾಗುವ ಹೊತ್ತಿಗೆ ಅದು ಬೆಳೆ ಕೊಯ್ದ ಹೊಲದಂತಾಗಿ ಬಿಟ್ಟಿತು

22ಬೆಳಿಗ್ಗೆ ಅವರು ಪರಸ್ಪರರನ್ನು ಕೂಗಿ ಕರೆಯಲಾರಂಭಿಸಿದರು

23‘‘ನಿಮಗೆ ಫಲ ಕೊಯ್ಯಲಿಕ್ಕಿದ್ದರೆ ಮುಂಜಾವಿನಲ್ಲೇ ನಿಮ್ಮ ತೋಟವನ್ನು ತಲುಪಿರಿ’’ (ಎನ್ನ ತೊಡಗಿದರು)

24ಹೀಗೆ, ಅವರು ಹೊರಟರು ಮತ್ತು ಅವರು ಗುಟ್ಟಾಗಿ ಮಾತನಾಡಿಕೊಳ್ಳುತ್ತಿದ್ದರು

25‘‘ಇಂದು ಯಾವ ಬಡ ವ್ಯಕ್ತಿಯೂ ನಿಮ್ಮ ಬಳಿಗೆ ಬರದಂತೆ ನೋಡಿಕೊಳ್ಳಿ’’ (ಎಂದು)

26ಅವರು, ತಾವು ಭಾರೀ ಶಕ್ತರೆಂದು ಬೀಗುತ್ತಾ ಹೊರಟರು

27ಕೊನೆಗೆ ಅವರು, ಅದನ್ನು (ತೋಟವನ್ನು) ಕಂಡಾಗ, ‘‘ನಾವು ದಾರಿ ತಪ್ಪಿದ್ದೇವೆ’’ ಎನ್ನತೊಡಗಿದರು

28‘‘ನಿಜವಾಗಿ, ನಾವು ಭಾಗ್ಯಹೀನರು’’ (ಎಂದು ಕೆಲವರು ಹೇಳಿದರು)

29ಅವರಲ್ಲಿನ ಸಂತುಲಿತ ವ್ಯಕ್ತಿಯೊಬ್ಬನು ಹೇಳಿದನು; ‘‘(ಹೀಗಾದೀತೆಂದು) ನಾನು ನಿಮಗೆ ಹೇಳಿರಲಿಲ್ಲವೇ? ನೀವೇಕೆ (ಅಲ್ಲಾಹನ) ಪಾವಿತ್ರವನ್ನು ಜಪಿಸುವುದಿಲ್ಲ?’’

30ಮರುದಿನ (ಮುಂಜಾನೆ) ಅವರು ಹೇಳಿದರು; ‘‘ನಮ್ಮ ಒಡೆಯನು ಪಾವನನು. ನಾವು ಖಂಡಿತಾ ಅಕ್ರಮಿಗಳಾಗಿದ್ದೆವು’’

31ಆ ಬಳಿಕ ಅವರು ಪರಸ್ಪರರನ್ನು ದೂಷಿಸಲು ಆರಂಭಿಸಿದರು

32ಅವರು ಹೇಳಿದರು; ‘‘ಅಯ್ಯೋ ನಮ್ಮ ದೌರ್ಭಾಗ್ಯವೇ, ನಾವು ಎಲ್ಲೆ ಮೀರಿ ಬಿಟ್ಟಿದ್ದೆವು’’

33‘‘ನಮ್ಮ ಒಡೆಯನು ನಮಗೆ ಇದಕ್ಕಿಂತ ಉತ್ತಮವಾದುದನ್ನು ನೀಡಬಹುದು. ನಾವು ನಮ್ಮೊಡೆಯನೆಡೆಗೆ ಒಲಿಯುತ್ತಿದ್ದೇವೆ’’

34ಹೀಗಿರುತ್ತದೆ, ನಮ್ಮ ಶಿಕ್ಷೆ. ಪರಲೋಕದ ಶಿಕ್ಷೆಯಂತೂ ಇದಕ್ಕಿಂತ ಹಿರಿದಾಗಿರುತ್ತದೆ. ಅದನ್ನು ಅವರು ಅರಿತಿದ್ದರೆ ಚೆನ್ನಾಗಿತ್ತು

35ಧರ್ಮನಿಷ್ಠರಿಗಾಗಿ, ಅವರ ಒಡೆಯನ ಬಳಿ ಅನುಗ್ರಹಗಳು ತುಂಬಿದ ಉದ್ಯಾನಗಳಿವೆ

36ನಾವೇನು, ಮುಸ್ಲಿಮರಿಗೆ (ಶರಣಾದವರಿಗೆ) ಮತ್ತು ಅಪರಾಧಿಗಳಿಗೆ ಒಂದೇ ಗತಿಯನ್ನು ಒದಗಿಸುವೆವೇ

37ನಿಮಗೇನಾಗಿದೆ? ನೀವು ಅದೆಂತಹ ತೀರ್ಮಾನಗಳನ್ನು ಕೈಗೊಳ್ಳುತ್ತೀರಿ

38ನಿಮ್ಮ ಬಳಿ ನೀವು ಓದುವ ದಿವ್ಯ ಗ್ರಂಥವೇನಾದರೂ ಇದೆಯೇ

39ಅದರಲ್ಲಿ ನಿಮಗೆ ಇಷ್ಟವಿರುವ ಎಲ್ಲವೂ ಸಿಗುತ್ತಿದೆಯೇ

40ಅಥವಾ ನೀವು ತೀರ್ಮಾನಿಸಿದ್ದನ್ನೆಲ್ಲಾ ನಾವು ನಿಮಗೆ ಕೊಟ್ಟು ಬಿಡಬೇಕೆಂದು, ಪುನರುತ್ಥಾನದ ದಿನದವರೆಗೂ ನಾವು ಪಾಲಿಸಲೇ ಬೇಕಾದ ಕರಾರನ್ನು ನೀವು ನಮ್ಮಿಂದ ಪಡೆದಿರುವಿರಾ

41ಅವರ ಪೈಕಿ ಅದರ ಹೊಣೆಯನ್ನು ವಹಿಸಿಕೊಂಡವರು ಯಾರೆಂದು ಅವರೊಡನೆ ಕೇಳಿರಿ

42ಅಥವಾ ಅವರ ಬಳಿ (ದೇವತ್ವದ) ಪಾಲುದಾರರು ಇದ್ದಾರೆಯೇ? ಅವರು ಸತ್ಯವಂತರಾಗಿದ್ದರೆ ಆ ತಮ್ಮ ಪಾಲುದಾರರನ್ನು ಹಾಜರುಪಡಿಸಲಿ

43ಹಾಲಾಹಲ ಮೆರೆದಿರುವ (ಪುನರುತ್ಥಾನದ) ದಿನ, ಸಾಷ್ಟಾಂಗವೆರಗಲು ಅವರನ್ನು ಕರೆಯಲಾಗುವುದು. ಆದರೆ ಅವರಿಗೆ ಅದು ಸಾಧ್ಯವಾಗದು

44ಭಯದಿಂದ ಅವರ ದೃಷ್ಟಿಗಳು ತಗ್ಗಿರುವವು ಮತ್ತು ಅಪಮಾನವು ಅವರನ್ನು ಆವರಿಸಿರುವುದು. ಈ ಹಿಂದೆ ಅವರು ಸ್ವಸ್ಥರಾಗಿದ್ದಾಗ ಸಾಷ್ಟಾಂಗವೆರಗಲು ಅವರನ್ನು ಕರೆಯಲಾಗಿತ್ತು. (ಅವರು ಅದನ್ನು ಕಡೆಗಣಿಸಿದ್ದರು)

45ನನ್ನನ್ನು ಬಿಟ್ಟು ಬಿಡಿ. ಈ ಸಂದೇಶವನ್ನು ತಿರಸ್ಕರಿಸಿದವನನ್ನು ನಾನು (ಅಲ್ಲಾಹ್) ನೋಡಿಕೊಳ್ಳುವೆನು. ಅವರಿಗೆ ಅರಿವೇ ಇಲ್ಲದಂತೆ ನಾವು ಕ್ರಮೇಣ ಅವರನ್ನು ಹಿಡಿದುಕೊಳ್ಳುವೆವು

46ಸದ್ಯ ನಾನು ಅವರಿಗೆ ಕಾಲಾವಕಾಶ ಕೊಡುತ್ತಿದ್ದೇನೆ. ನನ್ನ ಯೋಜನೆಯು ಖಂಡಿತ ಬಲಿಷ್ಠವಾಗಿರುತ್ತದೆ

47(ದೂತರೇ,) ನೀವೇನು ಅವರೊಡನೆ ಏನಾದರೂ ಸಂಭಾವನೆಯನ್ನು ಕೇಳಿರುವಿರಾ? ಮತ್ತು ಅವರು ಅದರ ಭಾರದಡಿಯಲ್ಲಿ ನರಳುತ್ತಿದ್ದಾರೆಯೇ

48ಅಥವಾ ಅವರ ಬಳಿ, ಅವರು ಬರೆದಿಡುತ್ತಿರುವ ಗುಪ್ತ ಜ್ಞಾನವೇನಾದರೂ ಇದೆಯೇ

49(ದೂತರೇ,) ನೀವು ನಿಮ್ಮೊಡೆಯನ ಆದೇಶ ಬರುವ ತನಕ ಸಹನಶೀಲರಾಗಿರಿ. ಮತ್ತು ನೀವು ಮೀನಿನವರಂತೆ (ಯೂನುಸರಂತೆ) ಆಗದಿರಿ. ಅವರು ಬಹಳ ನೊಂದ ಸ್ಥಿತಿಯಲ್ಲಿ (ಅಲ್ಲಾಹನಿಗೆ) ಮೊರೆ ಇಟ್ಟಿದ್ದರು

50ಅವರ ಒಡೆಯನ ಅನುಗ್ರಹವು ಅವರಿಗೆ ನೆರವಾಗದೆ ಇದ್ದಿದ್ದರೆ ಅವರು ತೀರಾ ಕೆಟ್ಟ ಸ್ಥಿತಿಯಲ್ಲಿ ಒಂದು ಬಟ್ಟ ಬಯಲಿಗೆ ಎಸೆಯಲ್ಪಡುತ್ತಿದ್ದರು

51ಅವರ ಒಡೆಯನು ಅವರನ್ನು ಆಯ್ದುಕೊಂಡನು ಮತ್ತು ಅವರನ್ನು ಸಜ್ಜನರ ಸಾಲಿಗೆ ಸೇರಿಸಿದನು

52(ದೂತರೇ,) ಧಿಕ್ಕಾರಿಗಳು ಉಪದೇಶವನ್ನು ಕೇಳಿದಾಗ ತಮ್ಮ ದೃಷ್ಟಿಯಿಂದಲೇ ನಿಮ್ಮನ್ನು ನುಚ್ಚುನೂರು ಮಾಡುವರೋ ಎಂಬಂತೆ ನಿಮ್ಮೆಡೆಗೆ ನೋಡುತ್ತಾರೆ ಮತ್ತು ‘‘ಅವನು ಖಂಡಿತ ಹುಚ್ಚ’’ ಎನ್ನುತ್ತಾರೆ

ಮೂಲ: Abdussalam Puthige

WEBREATH · 11:11

«If you are thankful, I will give you more» — Quran 14:7

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath