ಇಸ್ಲಾಂ
ಹಿಂದೆ

55. ಅರ್-ರಹಮಾನ್

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ನಿರ್ಮಲ ಸ್ಥಾನದಲ್ಲಿ, ಸರ್ವಶಕ್ತನಾದ ದೊರೆಯ (ಅಲ್ಲಾಹನ) ಸಮೀಪ

2ಅಪಾರ ದಯಾಳು

3(ಅವನೇ) ಕುರ್‌ಆನನ್ನು ಕಲಿಸಿರುವನು

4ಮನುಷ್ಯನನ್ನು ಸೃಷ್ಟಿಸಿರುವನು

5ಅವನಿಗೆ ಮಾತನಾಡಲು ಕಲಿಸಿರುವನು

6ಸೂರ್ಯ ಮತ್ತು ಚಂದ್ರ ಒಂದು ನಿರ್ದಿಷ್ಟ ಸೂತ್ರಕ್ಕೆ ಬದ್ಧವಾಗಿವೆ

7ಗಿಡಗಳು ಹಾಗೂ ಮರಗಳು ಸಾಷ್ಟಾಂಗವೆರಗುತ್ತವೆ

8ಅವನು ಆಕಾಶಗಳನ್ನು ಎತ್ತರಿಸಿರುವನು ಹಾಗೂ ಸಮತೋಲನವನ್ನು ಸ್ಥಾಪಿಸಿರುವನು –

9– ನೀವು ಸಮತೋಲನವನ್ನು ಮೀರಬಾರದೆಂದು

10ಮತ್ತು ನೀವು ನ್ಯಾಯೋಚಿತವಾಗಿ ತೂಗಿರಿ ಮತ್ತು ತೂಕದಲ್ಲಿ ಕಡಿತ ಮಾಡಬೇಡಿ

11ಮತ್ತು ಅವನು ಭೂಮಿಯನ್ನು ಜೀವಿಗಳಿಗಾಗಿ ಹಾಸಿರುವನು

12ಅದರಲ್ಲಿ ಹಣ್ಣು ಹಂಪಲುಗಳಿವೆ ಹಾಗೂ ಕವಚವಿರುವ ಖರ್ಜೂರಗಳಿವೆ

13ಹೊಟ್ಟು ಹಾಗೂ ಪರಿಮಳದ ಪುಷ್ಪವಿರುವ ಧಾನ್ಯಗಳಿವೆ

14ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲಾ ಕೊಡುಗೆಗಳನ್ನು ಅಲ್ಲಗಳೆಯುವಿರಿ

15ಅವನು ಮನುಷ್ಯನನ್ನು ಹಂಚಿನಂತಹ ಗಾರೆಮಣ್ಣಿನಿಂದ ಸೃಷ್ಟಿಸಿರುವನು

16ಮತ್ತು ಅವನು ಜಿನ್ನ್‌ಗಳನ್ನು ಬೆಂಕಿಯ ಜ್ವಾಲೆಯಿಂದ ಸೃಷ್ಟಿಸಿರುವನು

17ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲಾ ಕೊಡುಗೆಗಳನ್ನು ಅಲ್ಲಗಳೆಯುವಿರಿ

18ಅವನು ಎರಡು ಪೂರ್ವಗಳ ಹಾಗೂ ಎರಡು ಪಶ್ಚಿಮಗಳ ಒಡೆಯನು

19ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲಾ ಕೊಡುಗೆಗಳನ್ನು ಅಲ್ಲಗಳೆಯುವಿರಿ

20ಅವನು ಎರಡು ಸಮುದ್ರಗಳನ್ನು ಪರಸ್ಪರ ಒಂದು ಗೂಡಿಸಿರುವನು

21ಅವುಗಳ ನಡುವೆ ಒಂದು ತೆರೆ ಇದೆ. ಅವು ಅದನ್ನು ಮೀರುವುದಿಲ್ಲ

22ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

23ಅವೆರಡರಿಂದಲೂ ಮುತ್ತು ಹಾಗೂ ಹವಳಗಳು ಹೊರಡುತ್ತವೆ

24ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

25ಕಡಲಲ್ಲಿ ಪರ್ವತಗಳಂತೆ ಚಲಿಸುವ ಹಡಗುಗಳ ನಿಯಂತ್ರಣವು ಅವನಿಗೇ ಸೇರಿವೆ

26ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

27ಅದರಲ್ಲಿ (ಭೂಮಿಯಲ್ಲಿ) ಇರುವ ಎಲ್ಲವೂ ನಾಶವಾಗಲಿದೆ

28ಮತ್ತು ವೈಭವಪೂರ್ಣ ಹಾಗೂ ಮಾನ್ಯನಾದ ನಿಮ್ಮ ಒಡೆಯನು ಮಾತ್ರ ಉಳಿಯುವನು

29ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

30ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಪ್ರತಿಯೊಬ್ಬರೂ ಅವನೊಡನೆಯೇ ಬೇಡುತ್ತಾರೆ. ಅವನು ನಿತ್ಯವೂ ಸಕ್ರಿಯನಾಗಿರುತ್ತಾನೆ

31ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲಾ ಅನುಗ್ರಹಗಳನ್ನು ಅಲ್ಲಗಳೆಯುವಿರಿ

32ಎರಡು ಭಾರಗಳೇ (ಮಾನವರೇ ಹಾಗೂ ಜಿನ್ನ್‌ಗಳೇ), ಬಹು ಬೇಗನೇ ನಾವು ನಿಮ್ಮತ್ತ ಗಮನ ಹರಿಸಲಿದ್ದೇವೆ

33ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

34ಜಿನ್ನ್‌ಗಳೇ ಮತ್ತು ಮಾನವರೇ, ಆಕಾಶಗಳ ಹಾಗೂ ಭೂಮಿಯ ಗಡಿಗಳನ್ನು ಮೀರಿ ಹೋಗಲು ನಿಮಗೆ ಸಾಧ್ಯವಿದ್ದರೆ ಮೀರಿ ಹೋಗಿರಿ. (ಅಲ್ಲಾಹನ) ಆದೇಶವಿಲ್ಲದೆ ಮೀರಿ ಹೋಗಲು ನಿಮಗೆ ಸಾಧ್ಯವಾಗದು

35ಹೀಗಿರುತ್ತಾ, ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ನೀವು ಅಲ್ಲಗಳೆಯುವಿರಿ

36ನಿಮ್ಮ ಮೇಲೆ ಬೆಂಕಿಯ ಜ್ವಾಲೆಯನ್ನು ಹಾಗೂ ಹೊಗೆಯನ್ನು ಎರಗಿಸಲಾಗುವುದು ಮತ್ತು (ಅವುಗಳನ್ನು) ಎದುರಿಸಲು ನಿಮಗೆ ಸಾಧ್ಯವಾಗದು

37ಹೀಗಿರುತ್ತಾ, ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ನೀವು ಅಲ್ಲಗಳೆಯುವಿರಿ

38ಮತ್ತು ಆಕಾಶವು ಬಿರಿದು ಬಿಡುವಾಗ, ಅದು ಬೆಂದ ಚರ್ಮದಂತೆ ಕೆಂಪಾಗಿ ಬಿಡುವುದು

39ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

40ಆ ದಿನ ಯಾವ ಮಾನವನೊಡನೆಯೂ ಯಾವ ಜಿನ್ನಿನೊಡನೆಯೂ ಅವನ ಪಾಪಗಳ ಕುರಿತು ಪ್ರಶ್ನಿಸಲಾಗುವುದು

41ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

42(ಅಂದು) ಅಪರಾಧಿಗಳು ತಮ್ಮ ಮುಖಗಳಿಂದಲೇ ಗುರುತಿಸಲ್ಪಡುವರು ಮತ್ತು ಅವರನ್ನು (ಎಳೆದೊಯ್ಯಲು) ಅವರ ಹಣೆ ಹಾಗೂ ಕಾಲುಗಳಿಂದಲೇ ಹಿಡಿಯಲಾಗುವುದು

43ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

44ಇದುವೇ, ಅಪರಾಧಿಗಳು ಅಲ್ಲಗಳೆಯುತ್ತಿದ್ದ ನರಕ

45(ಅಂದು) ಅವರು ಅದರ (ನರಕಾಗ್ನಿಯ) ಹಾಗೂ ಕುದಿಯುವ ನೀರಿನ ನಡುವೆ ಅಲೆದಾಡುತ್ತಿರುವರು

46ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

47ತನ್ನೊಡೆಯನ ಮುಂದೆ ನಿಲ್ಲಲಿಕ್ಕಿದೆ ಎಂದು ಅಂಜುತ್ತಿದ್ದವನಿಗೆ (ಅಂದು) ಎರಡೆರಡು ತೋಟಗಳಿರುವವು

48ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

49ಅವು ಧಾರಾಳ ಶಾಖೆಗಳಿರುವ (ತೋಟಗಳಾಗಿರುವವು)

50ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

51ಅವುಗಳಲ್ಲಿ ಎರಡೆರಡು ಝರಿಗಳು ಹರಿಯುತ್ತಿರುವವು

52ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

53ಅವುಗಳಲ್ಲಿ ಎಲ್ಲ ಜಾತಿಯ ಹಣ್ಣುಗಳ ಎರಡೆರಡು ಬಗೆಗಳಿರುವವು

54ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

55ಅವರು ರೇಶ್ಮೆ ಹೊದಿಸಿದ ನೆಲದಲ್ಲಿ ದಿಂಬುಗಳಿಗೆ ಒರಗಿಕೊಂಡಿರುವರು ಮತ್ತು ಎರಡೂ ತೋಟಗಳ ಹಣ್ಣುಗಳು ಅವರಿಗೆ ಸಮೀಪವಾಗಿರುವವು

56ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

57ಅವುಗಳಲ್ಲಿ, ದೃಷ್ಟಿ ತಗ್ಗಿಸಿರುವ ಸ್ತ್ರೀಯರಿರುವರು. ಇವರಿಗಿಂತ ಮುನ್ನ ಅವರನ್ನು ಮಾನವರಾಗಲಿ ಜಿನ್ನ್‌ಗಳಾಗಲಿ ಮುಟ್ಟಿರಲಾರರು

58ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

59ಅವರೆಲ್ಲ ಮಾಣಿಕ್ಯ ಹಾಗೂ ಹವಳಗಳೋ ಎಂಬಂತಿರುವರು

60ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

61ಸೌಜನ್ಯದ ಪ್ರತಿಫಲ ಸೌಜನ್ಯವಲ್ಲದೆ ಮತ್ತೇನು

62ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

63ಅವೆರಡಲ್ಲದೆ ಇನ್ನೂ ಎರಡು ತೋಟಗಳಿವೆ

64ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡೆಗೆಗಳನ್ನು ಅಲ್ಲಗಳೆಯುವಿರಿ

65ಹಚ್ಚ ಹಸಿರು ವರ್ಣದವುಗಳು

66ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

67ಅವುಗಳಲ್ಲಿ ಉತ್ಸಾಹದಿಂದ ಉಕ್ಕಿ ಹರಿಯುವ ಎರಡು ಚಿಲುಮೆಗಳಿವೆ

68ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

69ಅವುಗಳಲ್ಲಿ, ಹಣ್ಣು ಹಂಪಲುಗಳು, ಖರ್ಜೂರದ ಗಿಡಗಳು ಹಾಗೂ ದಾಳಿಂಬೆ ಹಣ್ಣುಗಳಿವೆ

70ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಅನುಗ್ರಹಗಳನ್ನು ಅಲ್ಲಗಳೆಯುವಿರಿ

71ಅವುಗಳಲ್ಲಿ ಸುಶೀಲೆಯರಾದ ಸುಂದರಿಯರಿರುವರು

72ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

73ಆ ಸ್ವರ್ಗ ಕನ್ಯೆಯರು ಶಿಬಿರಗಳಲ್ಲಿ ಅವಿತಿರುವರು

74ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

75ಇವರಿಗಿಂತ ಮುನ್ನ ಅವರನ್ನು ಮಾನವರಾಗಲಿ ಜಿನ್ನ್‌ಗಳಾಗಲಿ ಮುಟ್ಟಿರಲಾರರು

76ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

77ಅವರು ಹಸಿರು ಹೊದಿಕೆ ಹಾಗೂ ನುಣುಪಾದ ದಿಂಬುಗಳ ಮೇಲೆ ಒರಗಿರುವರು

78ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

ಮೂಲ: Abdussalam Puthige

WEBREATH · 11:11

«If you are thankful, I will give you more» — Quran 14:7

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath