ಇಸ್ಲಾಂ
ಹಿಂದೆ

52. ಅಟ್-ತೂರ್

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ತಮಗೆ ವಾಗ್ದಾನ ಮಾಡಲಾದ (ಪುನರುತ್ಥಾನ) ದಿನವನ್ನು ಧಿಕ್ಕರಿಸಿದವರಿಗೆ ವಿನಾಶ ಕಾದಿದೆ

2ತೂರ್ ಪರ್ವತದಾಣೆ

3ಲಿಖಿತ ಗ್ರಂಥದಾಣೆ

4ಅದು ತೆರೆದ ಪುಟದಲ್ಲಿದೆ

5ಮತ್ತು ಜನ ಸಂಪನ್ನ ಆಲಯದಾಣೆ

6ಎತ್ತರಗೊಳಿಸಲಾಗಿರುವ ಚಪ್ಪರದಾಣೆ

7ಮತ್ತು ಭೋರ್ಗರೆಯುವ ಸಮುದ್ರದಾಣೆ

8ನಿಮ್ಮ ಒಡೆಯನ ಶಿಕ್ಷೆಯು ಖಂಡಿತ ಬರಲಿದೆ

9ಅದನ್ನು ತಡೆಯ ಬಲ್ಲವರು ಯಾರೂ ಇಲ್ಲ

10ಆಕಾಶವು ಭೀಕರವಾಗಿ ತಲ್ಲಣಿಸುವ ದಿನ

11ಮತ್ತು ಪರ್ವತಗಳು ಛಿದ್ರವಾಗುವ ದಿನ

12(ಸತ್ಯವನ್ನು) ತಿರಸ್ಕರಿಸಿದವರಿಗೆ ಆ ದಿನ ವಿನಾಶವಿದೆ

13(ಇಂದು) ಅವರು ಮೋಜಾಟಗಳಲ್ಲಿ ತಲ್ಲೀನರಾಗಿದ್ದಾರೆ

14ಆ ದಿನ ಅವರನ್ನು ತಳ್ಳುತ್ತಾ ನರಕದೆಡೆಗೆ ಒಯ್ಯಲಾಗುವುದು

15(ಮತ್ತು ಹೇಳಲಾಗುವುದು;) ಇದುವೇ, ನೀವು ತಿರಸ್ಕರಿಸುತ್ತಿದ್ದ ನರಕಾಗ್ನಿ

16ಇದೇನು ಇಂದ್ರಜಾಲವೇ? ಅಥವಾ ನಿಮಗೇನೂ ಕಾಣಿಸುತ್ತಿಲ್ಲವೇ

17ಇದರೊಳಗೆ ಪ್ರವೇಶಿಸಿರಿ. ನೀವಿನ್ನು ಸಹನೆ ತೋರಿದರೂ ಸಹನೆ ತೋರದಿದ್ದರೂ ನಿಮ್ಮ ಪಾಲಿಗೆ ಸಮಾನವಾಗಿರುತ್ತದೆ. ನಿಮಗಂತು, ನೀವು ಮಾಡುತ್ತಿದ್ದ ಕೃತ್ಯಗಳ ಪ್ರತಿಫಲವನ್ನಷ್ಟೇ ನೀಡಲಾಗುತ್ತಿದೆ

18(ಅಂದು) ಧರ್ಮ ನಿಷ್ಠರು ಉದ್ಯಾನಗಳಲ್ಲಿ ಹಾಗೂ ಅನುಗ್ರಹದಲ್ಲಿರುವರು

19ತಮಗೆ ತಮ್ಮ ಒಡೆಯನು ನೀಡಿದ್ದರಲ್ಲಿ ಸಂತುಷ್ಟರಾಗಿರುವರು. ಮತ್ತು ಅವರನ್ನು ಅವರ ಒಡೆಯನು ನರಕದ ಹಿಂಸೆಯಿಂದ ಸುರಕ್ಷಿತರಾಗಿಟ್ಟಿರುವನು

20ನೀವು ಮಾಡಿದ್ದ ಕರ್ಮಗಳ ಫಲವಾಗಿ, (ಇಂದು) ಮನ ತುಂಬಾ ಉಣ್ಣಿರಿ ಮತ್ತು ಕುಡಿಯಿರಿ (ಎಂದು ಅವರೊಡನೆ ಹೇಳಲಾಗುವುದು)

21ಅವರು ಸಾಲು ಸಾಲಾಗಿ ದಿಂಬುಗಳಿಗೆ ಒರಗಿ ವಿರಮಿಸುತ್ತಿರುವರು ಮತ್ತು ನಾವು ವಿಶಾಲ ಕಣ್ಣಿನ ‘ಹೂರ್’ಗಳನ್ನು ಅವರ ಜೊತೆಗಳಾಗಿಸಿರುವೆವು

22ವಿಶ್ವಾಸಿಗಳಾಗಿದ್ದವರು ಮತ್ತು ವಿಶ್ವಾಸಿಗಳಾಗಿ ಅವರನ್ನು ಅನುಸರಿಸಿದ, ಅವರ ಸಂತತಿಗಳು – ಅವರನ್ನು ನಾವು ಅವರ ಸಂತತಿಗಳೊಂದಿಗೆ ಸೇರಿಸಿರುವೆವು – ಮತ್ತು ನಾವು ಅವರ ಕರ್ಮಗಳಲ್ಲಿ ಏನನ್ನೂ ಕಡಿತಗೊಳಿಸಲಾರೆವು. ಪ್ರತಿಯೊಬ್ಬನೂ ತನ್ನ ಕರ್ಮಗಳಿಗೆ ಪ್ರತಿಯಾಗಿ ಒತ್ತೆಯಾಳಾಗಿದ್ದಾನೆ

23ನಾವು ಹಣ್ಣು ಹಂಪಲುಗಳನ್ನು ಮತ್ತು ಅವರು ಮೆಚ್ಚುವ ಮಾಂಸಾಹಾರವನ್ನು ಅವರಿಗೆ ಒದಗಿಸುತ್ತಿರುವೆವು

24ಅಲ್ಲಿ ಅವರು (ಮೋಜಿಗಾಗಿ) ಪಾನಪಾತ್ರೆಗಳನ್ನು ಎಳೆದಾಡುವರು. ಯಾವುದೇ ಅನಗತ್ಯದ ಸಂಭಾಷಣೆಯಾಗಲಿ, ಪಾಪದ ಮಾತಾಗಲಿ ಅಲ್ಲಿ ಇರಲಾರದು

25ಅವರ ಸೇವೆಗಾಗಿ, ಸುರಕ್ಷಿತ ಮುತ್ತುಗಳೋ ಎಂಬಂತಿರುವ ಬಾಲಕರು ಅವರ ಸುತ್ತ ತಿರುಗಾಡುತ್ತಿರುವರು

26ಅವರು (ಸ್ವರ್ಗವಾಸಿಗಳು) ಪರಸ್ಪರರನ್ನು ಉದ್ದೇಶಿಸಿ ವಿಚಾರಿಸುವರು

27ಅವರು ಹೇಳುವರು; ಹಿಂದೆ ನಾವು ನಮ್ಮವರ ನಡುವೆ ಭೀತರಾಗಿದ್ದೆವು

28ಕೊನೆಗೆ, ಅಲ್ಲಾಹನು ನಮ್ಮ ಮೇಲೆ ದಯೆ ತೋರಿದನು ಮತ್ತು ನಮ್ಮನ್ನು ನರಕಾಗ್ನಿಯ ಶಿಕ್ಷೆಯಿಂದ ರಕ್ಷಿಸಿದನು

29ನಾವು ಈ ಹಿಂದೆ ಅವನನ್ನೇ ಕರೆದು ಪ್ರಾರ್ಥಿಸುತ್ತಿದ್ದೆವು. ಖಂಡಿತವಾಗಿಯೂ ಅವನು ಮಹಾ ಉಪಕಾರಿ ಹಾಗೂ ಕರುಣಾಮಯಿಯಾಗಿದ್ದಾನೆ

30(ದೂತರೇ,) ನೀವು ಉಪದೇಶಿಸಿರಿ. ನಿಮ್ಮ ಒಡೆಯನ ಅನುಗ್ರಹದಿಂದ ನೀವು ಮಾಂತ್ರಿಕರೂ ಅಲ್ಲ, ಮನೋರೋಗಿಯೂ ಅಲ್ಲ

31‘‘ಅವನೊಬ್ಬ ಕವಿ. ಅವನು ಕಾಲದ ಪ್ರಹಾರಕ್ಕೆ ತುತ್ತಾಗುವುದನ್ನು ಕಾಣಲು ನಾವು ಕಾಯುತ್ತಿದ್ದೇವೆ’’ ಎಂದು ಅವರು ಹೇಳುತ್ತಿದ್ದಾರೆಯೇ

32ನೀವು ಹೇಳಿರಿ; ನೀವು ಕಾಯುತ್ತಲೇ ಇರಿ. ನಿಮ್ಮ ಜೊತೆ ನಾನೂ ಕಾದಿರುತ್ತೇನೆ

33ಅವರ ಬುದ್ಧಿಗಳು ಅವರಿಗೆ ಇದನ್ನೇ ಕಲಿಸುತ್ತಿವೆಯೇ? ಅಥವಾ ಅವರೇನು ವಿದ್ರೋಹಿಗಳಾಗಿ ಬಿಟ್ಟಿರುವರೇ

34‘‘ಅವನು ಇದನ್ನು (ಕುರ್‌ಆನನ್ನು) ತಾನೇ ರಚಿಸಿಕೊಂಡಿದ್ದಾನೆ’’ ಎಂದವರು ಹೇಳುತ್ತಿದ್ದಾರೆಯೇ? ನಿಜವಾಗಿ ಅವರು ನಂಬುತ್ತಿಲ್ಲ

35ಅವರು ಸತ್ಯವಂತರಾಗಿದ್ದರೆ, ಇಂತಹ ಒಂದು ವಚನವನ್ನು ಅವರು ರಚಿಸಿ ತರಲಿ

36ಅವರೇನು ಶೂನ್ಯದಿಂದ ಸೃಷ್ಟಿಸಲ್ಪಟ್ಟಿರುವರೇ ಅಥವಾ ಸ್ವತಃ ಅವರು ಸೃಷ್ಟಿಕರ್ತರಾಗಿರುವರೇ

37ಆಕಾಶಗಳನ್ನು ಹಾಗೂ ಭೂಮಿಯನ್ನೇನು ಅವರು ಸೃಷ್ಟಿಸಿರುವರೇ? ನಿಜವಾಗಿ ಅವರಿಗೆ ದೃಢ ನಂಬಿಕೆ ಇಲ್ಲ

38ನಿಮ್ಮೊಡೆಯನ ಭಂಡಾರಗಳೇನು ಅವರ ಬಳಿ ಇವೆಯೇ? ಅಥವಾ ಅವರೇನು (ನಾಡಿನ) ಕಾವಲುಗಾರರೇ

39ಅವರ ಬಳಿಯೇನು ಏಣಿ ಇದೆಯೇ? ಅವರೇನು ಅದರ ಮೇಲೇರಿ (ಆಕಾಶ ಲೋಕದ ಸಮಾಚಾರಗಳಿಗೆ) ಕಿವಿ ಗೊಡುತ್ತಿದ್ದಾರೆಯೇ? ಹಾಗಾದರೆ (ಆ ರೀತಿ) ಕಿವಿ ಗೊಡುವ ಅವರ ವ್ಯಕ್ತಿಯು ಸ್ಪಷ್ಟವಾದ ಪುರಾವೆಯನ್ನು ತರಲಿ

40ಅವನಿಗೆ (ಅಲ್ಲಾಹನಿಗೆ) ಪುತ್ರಿಯರು ಮತ್ತು ಅವರಿಗೆ ಪುತ್ರರೇ

41(ದೂತರೇ,) ನೀವೇನು ಅವರಿಂದ ಏನಾದರೂ ಪ್ರತಿಫಲವನ್ನು ಅಪೇಕ್ಷಿಸಿರುವಿರಾ ಮತ್ತು ಅವರು ತಲೆದಂಡದ ಭಾರದಡಿ ನರಳುತ್ತಿರುವರೇ

42ಅಥವಾ ಅವರ ಬಳಿ, ಅವರು ಬರೆದಿಡುತ್ತಿರುವ ಗುಪ್ತಲೋಕದ ಜ್ಞಾನವೇನಾದರೂ ಇದೆಯೇ

43ಅವರೇನು, ಯಾವುದಾದರೂ ಸಂಚು ಹೂಡ ಬಯಸುತ್ತಾರೆಯೇ? ಕೊನೆಗೆ ಧಿಕ್ಕಾರಿಗಳೇ ಸಂಚಿಗೆ ತುತ್ತಾಗುವರು

44ಅವರಿಗೇನು ಅಲ್ಲಾಹನ ಹೊರತು ಬೇರೆ ದೇವರಿದ್ದಾನೆಯೇ? ಅಲ್ಲಾಹನಂತು, ಅವರು ಪಾಲುಗೊಳಿಸುವ ಎಲ್ಲವುಗಳಿಂದ ಮುಕ್ತನಾಗಿದ್ದಾನೆ

45ಅವರು, ಆಕಾಶದ ಒಂದು ತುಂಡು ಮುರಿದು ಬೀಳುವುದನ್ನು ಕಂಡರೂ, ಅದು ಗಟ್ಟಿಯಾಗಿದ್ದ ಮೋಡ ಎಂದಷ್ಟೇ ಹೇಳುವರು

46ಅವರು ತಮ್ಮನ್ನು ಮೂರ್ಛೆ ಹೋಗಿಸುವ ದಿನವನ್ನು ಕಾಣುವ ತನಕ, ನೀವು ಅವರನ್ನು ಬಿಟ್ಟು ಬಿಡಿರಿ

47ಆ ದಿನ ಅವರ ಸಂಚು ಅವರ ಯಾವ ಕೆಲಸಕ್ಕೂ ಬಾರದು ಮತ್ತು ಅವರಿಗೆ ಯಾವ ನೆರವೂ ಸಿಗದು

48ಮತ್ತು ಅಕ್ರಮಿಗಳಿಗೆ ಇದಲ್ಲದೆ ಇನ್ನೂ ಹೆಚ್ಚಿನ ಶಿಕ್ಷೆಯೂ ಖಂಡಿತ ಸಿಗುವುದು. ಅದರೆ ಅವರಲ್ಲಿ ಹೆಚ್ಚಿನವರು ತಿಳಿದಿಲ್ಲ

49(ದೂತರೇ,) ನೀವು ನಿಮ್ಮ ಪ್ರಭುವಿನ ಆದೇಶದಂತೆ ಸಹನಶೀಲರಾಗಿರಿ. ನೀವು ಖಂಡಿತ ನಮ್ಮ ಕಣ್ಣ ಮುಂದಿರುವಿರಿ. ನೀವು ಎದ್ದೇಳುವಾಗ, ನಿಮ್ಮ ಒಡೆಯನ ಪಾವಿತ್ರವನ್ನು ಜಪಿಸಿರಿ

ಮೂಲ: Abdussalam Puthige

WEBREATH · 11:11

«If you are thankful, I will give you more» — Quran 14:7

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath