51. ಅಧ್-ಧಾರಿಯಾತ್
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಅವರು ಹೇಳುತ್ತಿರುವುದನ್ನೆಲ್ಲಾ ನಾವು ಚೆನ್ನಾಗಿ ಬಲ್ಲೆವು. ನೀವು ಅವರನ್ನು ಬಲವಂತ ಪಡಿಸುವವರಲ್ಲ. ನನ್ನ ಮುನ್ನೆಚ್ಚರಿಕೆಯನ್ನು ಅಂಜುವವರಿಗೆ ನೀವು ಕುರ್ಆನಿನ ಮೂಲಕ ಉಪದೇಶಿಸಿರಿ
2ಧೂಳೆಬ್ಬಿಸುವ ಸುಳಿಗಾಳಿಗಳಾಣೆ
3ಅವು (ಮೋಡಗಳ) ಹೊರೆಯನ್ನು ಹೊತ್ತಿರುತ್ತವೆ
4ತರುವಾಯ ಅವು, ಸೌಮ್ಯವಾಗಿ ಚಲಿಸತೊಡಗುತ್ತವೆ
5ಮತ್ತು ಆದೇಶಾನುಸಾರ (ಮಳೆಯನ್ನು) ವಿತರಿಸುತ್ತವೆ
6ನಿಮಗೆ ನೀಡಲಾಗಿರುವ ವಾಗ್ದಾನವು ಖಂಡಿತ ಸತ್ಯವಾಗಿದೆ
7ಪ್ರತಿಫಲದ ದಿನವು ಖಂಡಿತ ಬರಲಿದೆ
8ದಾರಿಗಳಿರುವ ಆಕಾಶದಾಣೆ
9ನೀವು ವಿವಿಧ ವಾದಗಳಲ್ಲಿ ತಲ್ಲೀನರಾಗಿರುವಿರಿ
10ದೂರಗೊಳಿಸಲ್ಪಟ್ಟವನು ಮಾತ್ರ ಇದರಿಂದ (ಸತ್ಯದಿಂದ) ದೂರವಾಗುತ್ತಾನೆ
11ನಾಶವಾದರು, ಊಹಾಪೋಹಗಳನ್ನು ನೆಚ್ಚಿ ಕೊಂಡವರು
12ಅವರು ಎಚ್ಚರವಿಲ್ಲದೆ, ಮೈ ಮರೆತ ಸ್ಥಿತಿಯಲ್ಲಿದ್ದಾರೆ
13ಪ್ರತಿಫಲದ ದಿನ ಯಾವಾಗ ಬಂದೀತೆಂದು ಅವರು ಕೇಳುತ್ತಾರೆ
14ಅಂದು ಅವರು ಬೆಂಕಿಯ ಮೇಲೆ ಹೊರಳಾಡಿಸಲ್ಪಡುವರು
15(ಅವರೊಡನೆ ಹೇಳಲಾಗುವುದು;) ಸವಿಯಿರಿ ನಿಮ್ಮ ಕಿಡಿಗೇಡಿತನವನ್ನು, ನೀವು ಆತುರ ಪಡುತ್ತಿದ್ದ ವಸ್ತು ಇದುವೇ
16ಖಂಡಿತ (ಸ್ವರ್ಗದ) ತೋಟಗಳಲ್ಲಿ ಹಾಗೂ ಚಿಲುಮೆಗಳಲ್ಲಿರುವರು
17ತಮ್ಮ ಒಡೆಯನು ನೀಡಿದ್ದನ್ನು ಸ್ವೀಕರಿಸುತ್ತಿರುವರು. ಈ ಹಿಂದೆ (ಇಹಲೋಕದಲ್ಲಿ) ಅವರು ಸತ್ಕರ್ಮಿಗಳಾಗಿದ್ದರು
18ಅವರು ರಾತ್ರಿಯಲ್ಲಿ ತುಸು ಹೊತ್ತು ಮಾತ್ರ ನಿದ್ರಿಸುತ್ತಿದ್ದರು
19ಮುಂಜಾವಿನಲ್ಲಿ ಅವರು (ಅಲ್ಲಾಹನೊಡನೆ) ಕ್ಷಮೆಯಾಚಿಸುತ್ತಿದ್ದರು
20ಅವರ ಸಂಪತ್ತಿನಲ್ಲಿ, ಬೇಡುವವರಿಗೆ ಹಾಗೂ ವಂಚಿತರಿಗೆ ಹಕ್ಕಿತ್ತು
21ಅಚಲ ನಂಬಿಕೆ ಉಳ್ಳವರಿಗೆ ಭೂಮಿಯಲ್ಲಿ (ಪಾಠದಾಯಕ) ಪುರಾವೆಗಳಿವೆ
22ಮತ್ತು ನೀವೇನು ಸ್ವತಃ ನಿಮ್ಮನ್ನೇ ನೋಡುವುದಿಲ್ಲವೇ
23ಮತ್ತು ಆಕಾಶದಲ್ಲಿ ನಿಮ್ಮ ಆಹಾರವಿದೆ ಮತ್ತು ನಿಮಗೆ ವಾಗ್ದಾನ ಮಾಡಲಾಗಿರುವ ವಸ್ತುವೂ ಇದೆ
24ಆಕಾಶ ಮತ್ತು ಭೂಮಿಯ ಒಡೆಯನಾಣೆ, ಅದು (ಪರಲೋಕ) ಸತ್ಯ. ನೀವು ಮಾತನಾಡಬಲ್ಲಿರೆಂಬುದು ಸತ್ಯವಾಗಿರುವಂತೆ
25ಇಬ್ರಾಹೀಮರ ಆದರಣೀಯ ಅತಿಥಿಗಳ ಸಮಾಚಾರ ನಿಮಗೆ ತಲುಪಿದೆಯೇ
26ಅವರು, ಅವರ (ಇಬ್ರಾಹೀಮರ) ಬಳಿಗೆ ಬಂದು ‘ಸಲಾಮ್’ ಎಂದರು. ಅವರು, ‘‘ಸಲಾಮ್, ಅಪರಿಚಿತರೇ’’ ಎಂದರು
27ಆ ಬಳಿಕ ಅವರು, ತಮ್ಮ ಮನೆಯವರ ಬಳಿಗೆ ಹೋಗಿ ಒಂದು ದಷ್ಟಪುಷ್ಟವಾದ (ಹುರಿದ) ಕರುವನ್ನು ತಂದರು
28ಅವರು (ಇಬ್ರಾಹೀಮರು), ಅವರ (ಅತಿಥಿಗಳ) ಬಳಿಗೆ ಹೋಗಿ, ನೀವು ಉಣ್ಣುವುದಿಲ್ಲವೇ? ಎಂದರು
29ಅವರಿಗೆ (ಇಬ್ರಾಹೀಮರಿಗೆ) ಅವರ ಕುರಿತು ಭಯವಾಯಿತು. ಅವರು (ಅತಿಥಿಗಳು), ‘‘ನೀವು ಅಂಜಬೇಡಿ’’ ಎಂದರು ಮತ್ತು ಅವರಿಗೆ ಒಬ್ಬ ಜ್ಞಾನವಂತ ಪುತ್ರನ ಶುಭವಾರ್ತೆ ನೀಡಿದರು
30ಅವರ ಪತ್ನಿಯು ಮುಂದೆ ಬಂದು ಅಚ್ಚರಿಯಿಂದ ತನ್ನ ಮುಖಕ್ಕೆ ಕೈ ಇಟ್ಟು, ‘‘ಬಂಜೆಯಾಗಿರುವ ವೃದ್ಧೆಗೆ (ಮಗುವಾಗುವುದೇ)?’’ ಎಂದರು
31ಅವರು (ಅತಿಥಿಗಳು) ಹೇಳಿದರು; ‘‘ಹಾಗೆಯೇ ಆಗುವುದು. (ಹಾಗೆಂದು) ನಿಮ್ಮ ಒಡೆಯನು ಹೇಳಿರುವನು. ಅವನು ಖಂಡಿತ ಯುಕ್ತಿವಂತನೂ ಜ್ಞಾನಿಯೂ ಆಗಿರುವನು’’
32ಅವರು (ಇಬ್ರಾಹೀಮ್) ಕೇಳಿದರು; ದೂತರೇ, ನಿಮ್ಮ ಗುರಿ ಏನು
33ಅವರು (ಮಲಕ್ಗಳು) ಹೇಳಿದರು; ‘‘ಒಂದು ಅಪರಾಧಿ ಜನಾಂಗದೆಡೆಗೆ ನಮ್ಮನ್ನು ಕಳಿಸಲಾಗಿದೆ’’
34‘‘ಅವರ ಮೇಲೆ ಮಣ್ಣಿನ ಕಲ್ಲುಗಳನ್ನು ಸುರಿಸಬೇಕೆಂದು ನಮಗೆ ಆದೇಶಿಸಲಾಗಿದೆ’’
35‘‘ನಿಮ್ಮ ಒಡೆಯನ ಬಳಿ ಅವುಗಳನ್ನು (ಆ ಕಲ್ಲುಗಳನ್ನು), ಅತಿರೇಕ ಎಸಗುವವರಿಗೆಂದೇ ಗುರುತಿಸಿಡಲಾಗಿದೆ’’
36ಕೊನೆಗೆ ನಾವು, ಅಲ್ಲಿದ್ದ ವಿಶ್ವಾಸಿಗಳನ್ನು ಹೊರತೆಗೆದೆವು
37ಅಲ್ಲಿ (ಆ ನಾಡಿನಲ್ಲಿ) ನಾವು ಮುಸ್ಲಿಮರ ಒಂದು ಮನೆಯನ್ನು ಮಾತ್ರ ಕಂಡೆವು
38ಮತ್ತು ಕಠಿಣ ಶಿಕ್ಷೆಯನ್ನು ಅಂಜುವವರಿಗಾಗಿ ಅಲ್ಲಿ ನಾವು ಒಂದು ಪಾಠದಾಯಕ ಸೂಚನೆಯನ್ನು ಬಿಟ್ಟಿರುವೆವು
39ಮತ್ತು ಮೂಸಾರಲ್ಲೂ (ಪಾಠವಿದೆ). ಅವರನ್ನು ನಾವು ಸ್ಪಷ್ಟವಾದ ಆಧಾರದೊಂದಿಗೆ ಫಿರ್ಔನನ ಕಡೆಗೆ ಕಳಿಸಿದಾಗ
40ಅವನು (ಫಿರ್ಔನನು) ತನ್ನ ಶಕ್ತಿಯ ಗುಂಗಿನಲ್ಲಿ ಬಂಡಾಯವೆದ್ದನು ಮತ್ತು (ಮೂಸಾರನ್ನು) ಜಾದೂಗಾರ ಹಾಗೂ ಹುಚ್ಚನೆಂದು ಕರೆದನು
41ನಾವು ಅವನನ್ನೂ ಅವನ ಪಡೆಗಳನ್ನೂ ಹಿಡಿದೆವು ಹಾಗೂ ಅವರನ್ನು ಕಡಲಿಗೆ ಎಸೆದು ಬಿಟ್ಟೆವು. ಅವನು ನಿಂದನೆಗೆ ಅರ್ಹನಾಗಿದ್ದನು
42ಮತ್ತು ಆದ್ ಜನಾಂಗದಲ್ಲೂ (ಪಾಠವಿದೆ). ನಾವು ಅವರ ಮೇಲೆ ಒಂದು ಮಾರಕ ಚಂಡಮಾರುತವನ್ನು ಹೇರಿದೆವು
43ಅದು ತನ್ನೆದುರು ಬಂದ ಪ್ರತಿಯೊಂದು ವಸ್ತುವನ್ನೂ ಕೊಳೆತ ಮೂಳೆಯಂತಾಗಿಸಿ ಬಿಡುತ್ತಿತ್ತು
44ಮತ್ತು ಸಮೂದ್ ಜನಾಂಗದಲ್ಲೂ (ಪಾಠವಿದೆ). ಒಂದು ನಿರ್ದಿಷ್ಟ ಅವಧಿಯ ತನಕ ಸುಖ ಅನುಭವಿಸಿರಿ ಎಂದು ಅವರೊಡನೆ ಹೇಳಲಾದಾಗ
45ಅವರು ತಮ್ಮ ಒಡೆಯನ ಆದೇಶದೆದುರು ಬಂಡಾಯವೆದ್ದರು. ಕೊನೆಗೆ, ಅವರು ನೋಡುತ್ತಿದ್ದಂತೆಯೇ ಸಿಡಿಲೊಂದು ಅವರ ಮೇಲೆರಗಿತು
46ಕೊನೆಗೆ ಅವರು ಎದ್ದು ನಿಲ್ಲಲಿಕ್ಕೂ ಅಶಕ್ತರಾದರು ಮತ್ತು ಪ್ರತೀಕಾರವೆಸಗಲಿಕ್ಕೂ ಅಸಮರ್ಥರಾದರು
47ಅವರಿಗಿಂತ ಹಿಂದಿನ ನೂಹರ ಜನಾಂಗದಲ್ಲೂ (ಪಾಠವಿದೆ). ಅವರು ಅವಿಧೇಯರಾಗಿದ್ದರು
48ನಾವು ಆಕಾಶವನ್ನು ಕೈಯಾರೆ ನಿರ್ಮಿಸಿರುವೆವು. ನಾವು ಖಂಡಿತ ವಿಶಾಲ ಸಾಮರ್ಥ್ಯ ಉಳ್ಳವರಾಗಿರುವೆವು
49ಮತ್ತು ಭೂಮಿಯನ್ನು ನಾವು ಹಾಸಿನಂತಾಗಿಸಿರುವೆವು. ನಾವಂತೂ ಅತ್ಯುತ್ತಮವಾಗಿ ಹಾಸುವವರಾಗಿರುವೆವು
50ನಾವು ಪ್ರತಿಯೊಂದು ವಸ್ತುವಿನಿಂದಲೂ ಎರಡು ಬಗೆಗಳನ್ನು (ಜೊತೆಗಳನ್ನು ) ಸೃಷ್ಟಿಸಿರುವೆವು. ನೀವು ಪಾಠ ಕಲಿಯಬೇಕೆಂದು
51ನೀವು ಅಲ್ಲಾಹನೆಡೆಗೆ ಧಾವಿಸಿರಿ. ನಾನು ಅವನ ಕಡೆಯಿಂದ ನಿಮ್ಮನ್ನು ಸ್ಪಷ್ಟವಾಗಿ ಎಚ್ಚರಿಸುವವನಾಗಿದ್ದೇನೆ
52ಮತ್ತು ನೀವು ಅಲ್ಲಾಹನ ಜೊತೆ ಬೇರೊಬ್ಬರನ್ನು ದೇವರಾಗಿಸಿಕೊಳ್ಳಬೇಡಿ. ನಾನು ಅವನ ಕಡೆಯಿಂದ ನಿಮ್ಮನ್ನು ಸ್ಪಷ್ಟವಾಗಿ ಎಚ್ಚರಿಸುವವನಾಗಿದ್ದೇನೆ
53ಇದೇ ರೀತಿ, ಅವರಿಗಿಂತ ಹಿಂದಿನವರು ತಮ್ಮ ಬಳಿಗೆ ಬಂದಿದ್ದ ಯಾವ ದೂತರನ್ನೂ ಜಾದೂಗಾರ ಅಥವಾ ಹುಚ್ಚ ಎಂದು ಕರೆಯದೆ ಬಿಟ್ಟಿರಲಿಲ್ಲ
54ಅವರೇನು ಪರಸ್ಪರರಿಗೆ ಇದನ್ನೇ ಬೋಧಿಸಿರುವರೇ? ನಿಜವಾಗಿ ಅವರು ವಿದ್ರೋಹಿಗಳಾಗಿದ್ದಾರೆ
55ನೀವು ಅವರನ್ನು ಕಡೆಗಣಿಸಿರಿ. ನಿಮ್ಮ ಮೇಲೆ ಯಾವ ದೋಷವೂ ಇಲ್ಲ
56ನೀವು ಉಪದೇಶಿಸಿರಿ. ಖಂಡಿತವಾಗಿಯೂ ಉಪದೇಶವು ವಿಶ್ವಾಸಿಗಳ ಪಾಲಿಗೆ ಲಾಭದಾಯಕವಾಗಿರುತ್ತದೆ
57ನಾನು ಜಿನ್ನ್ಗಳನ್ನು ಹಾಗೂ ಮಾನವರನ್ನು ನನ್ನ ಆರಾಧನೆಗೆಂದೇ ಸೃಷ್ಟಿಸಿರುವೆನು
58ನಾನು ಅವರಿಂದ ಯಾವುದೇ ಆಹಾರವನ್ನು ಬಯಸುವುದಿಲ್ಲ ಮತ್ತು ಅವರು ನನಗೆ ಉಣಿಸಬೇಕೆಂದೂ ನಾನು ಅಪೇಕ್ಷಿಸುವುದಿಲ್ಲ
59ಖಂಡಿತವಾಗಿಯೂ ಅಲ್ಲಾಹನೇ ಎಲ್ಲರ ಅನ್ನದಾತನೂ ಭಾರೀ ಶಕ್ತಿ ಶಾಲಿಯೂ ಪರಮ ಸಮರ್ಥನೂ ಆಗಿದ್ದಾನೆ
60ಅಕ್ರಮವೆಸಗಿದವರಿಗಾಗಿ (ಅವರ ಶಿಕ್ಷೆಗಾಗಿ), ಅವರ ಸಂಗಾತಿಗಳಿಗೆ ನಿಶ್ಚಿತವಾಗಿದ್ದಂತಹದೇ ಕಾಲವೊಂದು ನಿಶ್ಚಿತವಾಗಿದೆ. ಆದ್ದರಿಂದ ಅವರು ಆತುರ ಪಡದಿರಲಿ
ಮೂಲ: Abdussalam Puthige
WEBREATH · 11:11
«If you are thankful, I will give you more» — Quran 14:7
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath