ಕ್ರಿಶ್ಚಿಯನ್ ಧರ್ಮ
ಹಿಂದೆ

ಕೀರ್ತನೆಗಳು 80

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಇಸ್ರಾಯೇಲರನ್ನು ಕಾಯುವ ಕುರುಬನೇ, ಕಿವಿಗೊಡು; ಯೋಸೇಫನ ವಂಶದವರನ್ನು ಕುರಿಹಿಂಡಿನಂತೆ ಕರೆತಂದವನೇ, ಕೆರೂಬಿಯರ ಮಧ್ಯದಲ್ಲಿ ಆಸೀನನಾಗಿರುವಾತನೇ, ಪ್ರಕಾಶಿಸು.

2ಎಫ್ರಾಯೀಮ್, ಬೆನ್ಯಾಮೀನ್ ಮತ್ತು ಮನಸ್ಸೆ ಕುಲಗಳ ಮುಂದೆ ಹೋಗುವವನಾಗಿ, ನಿನ್ನ ಶೌರ್ಯವನ್ನು ತೋರ್ಪಡಿಸು; ಬಂದು ನಮಗೆ ಜಯಪ್ರದನಾಗು.

3ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.

4ಸೇನಾಧೀಶ್ವರನಾದ ಯೆಹೋವ ದೇವರೇ, ನಿನ್ನ ಪ್ರಜೆಗಳು ಪ್ರಾರ್ಥಿಸುವಾಗ ನೀನು ಇನ್ನೆಷ್ಟರವರೆಗೆ ಕೋಪಿಸಿಕೊಳ್ಳುವಿ?

5ರೋದನವೇ ಅವರ ಆಹಾರವಾಗುವಂತೆಯೂ, ಅಶ್ರುಧಾರೆಯೇ ಅವರ ಪಾನವಾಗುವಂತೆಯೂ ಮಾಡಿದಿ.

6ನಮ್ಮನ್ನು ಸುತ್ತಣ ಜನಾಂಗಗಳ ದಿಕ್ಕಾರಕ್ಕೂ, ಶತ್ರುಗಳ ನಿಂದೆಗೂ ಗುರಿಯನ್ನಾಗಿ ಮಾಡಿದಿ.

7ಸೇನಾಧೀಶ್ವರನಾದ ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.

8ನೀನು ಐಗುಪ್ತ ದೇಶದಿಂದ ಒಂದು ದ್ರಾಕ್ಷಾಲತೆಯನ್ನು ತಂದು, ಜನಾಂಗಗಳನ್ನು ಹೊರಗೆ ಹಾಕಿ, ಅದನ್ನು ನೆಟ್ಟಿದ್ದಿ.

9ಅದಕ್ಕೋಸ್ಕರ ನೆಲವನ್ನು ಹಸನುಮಾಡಿದ ಮೇಲೆ, ಅದು ಬೇರುಬಿಟ್ಟು ದೇಶದಲ್ಲೆಲ್ಲಾ ಹಬ್ಬಿಕೊಂಡಿತು.

10ಅದರ ನೆರಳಿನಿಂದ ಗುಡ್ಡಗಳೆಲ್ಲಾ ಕವಿಯಲ್ಪಟ್ಟವು. ಅದರ ಕುಡಿಗಳು ದೇವದಾರುವೃಕ್ಷಗಳ ಮೇಲೆ ಹಬ್ಬಿ ಅವುಗಳನ್ನು ಮುಚ್ಚಿಬಿಟ್ಟವು.

11ಅದರ ಕೊಂಬೆಗಳು ಸಮುದ್ರದವರೆಗೂ, ಅದರ ಚಿಗುರುಗಳು ಮಹಾನದಿಯವರೆಗೂ ಹರಡಿಕೊಂಡವು.

12ನೀನು ಅದರ ಬೇಲಿಯನ್ನೇಕೆ ಮುರಿದುಹಾಕಿದಿ? ದಾರಿಗರೆಲ್ಲರು ಅದರ ಫಲವನ್ನು ಕಿತ್ತುಬಿಡುತ್ತಾರೆ.

13ಕಾಡುಹಂದಿಯು ಅದನ್ನು ನಿರ್ಮೂಲಮಾಡುತ್ತದೆ; ಅರಣ್ಯಮೃಗಗಳು ಅದನ್ನು ತಿಂದುಹಾಕುತ್ತವೆ.

14ಸೇನಾಧೀಶ್ವರನಾದ ದೇವರೇ, ಅಭಿಮುಖನಾಗಬೇಕು; ನೀನು ಪರಲೋಕದಿಂದ ಕಟಾಕ್ಷಿಸಿ, ಈ ದ್ರಾಕ್ಷಾಲತೆಯನ್ನು ಪರಾಂಬರಿಸು.

15ನಿನ್ನ ಬಲಗೈ ನೆಟ್ಟು, ಸಾಕಿ, ಬೆಳೆಸಿದ ಸಸಿಯನ್ನು ಕಾಪಾಡು.

16ಅದು ಕಡಿದು ಬೆಂಕಿಯಿಂದ ಸುಡಲ್ಪಟ್ಟಿದೆ. ಅವರು ನಿನ್ನ ಗದರಿಕೆಯಿಂದ ನಾಶವಾಗುತ್ತಾರೆ.

17ನಿನ್ನ ಬಲಗೈ ಉದ್ಧರಿಸಿದ ಪುರುಷನೂ, ನೀನು ನಿನಗೋಸ್ಕರ ಸಾಕಿ ಬೆಳೆಸಿದ ನರಪುತ್ರನೂ ಆಗಿರುವವನನ್ನು, ನಿನ್ನ ಹಸ್ತದಿಂದ ಹಿಡಿದಿರು.

18ಆಗ ನಾವು ನಿನ್ನಿಂದ ಅಗಲುವುದಿಲ್ಲ. ನಿನ್ನ ಹೆಸರನ್ನು ಹೇಳಿಕೊಂಡು ಆರಾಧಿಸುವಂತೆ ನಮ್ಮನ್ನು ಚೈತನ್ಯಗೊಳಿಸು.

19ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath