ಜ್ಞಾನೋಕ್ತಿಗಳು 9
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಜ್ಞಾನವೆಂಬಾಕೆಯು ಏಳು ಕಂಬಗಳನ್ನು ಕಡಿದು, ತನ್ನ ಮನೆಯನ್ನು ಕಟ್ಟಿಕೊಂಡಿದ್ದಾಳೆ.
2ಆಕೆ ಪಶುಗಳನ್ನು ಕೊಯಿಸಿ ಪಾನದ್ರವ್ಯಗಳೊಡನೆ ದ್ರಾಕ್ಷಾರಸವನ್ನು ಬೆರಸಿ, ಔತಣವನ್ನು ಸಿದ್ಧಪಡಿಸಿದ್ದಾಳೆ.
3ಆಕೆಯು ತನ್ನ ದಾಸಿಯರನ್ನು ಕಳುಹಿಸಿ, ಪಟ್ಟಣದ ರಾಜಮಾರ್ಗಗಳ ಮುಖ್ಯಸ್ಥಾನಗಳಲ್ಲಿ ಪ್ರಕಟಿಸುತ್ತಾಳೆ.
4ಆಕೆಯು ಬುದ್ಧಿಹೀನರಿಗೆ, “ಮೂಢನಾಗಿರುವವನು ಈ ಕಡೆಗೆ ತಿರುಗಲಿ,
5ಬನ್ನಿರಿ, ನಾನು ಬಡಿಸುವ ಆಹಾರವನ್ನು ಉಣ್ಣಿರಿ, ನಾನು ಬೆರೆಸಿರುವ ದ್ರಾಕ್ಷಾರಸವನ್ನು ಕುಡಿಯಿರಿ.
6ಮೂಢರೇ ಮೂಢತ್ವವನ್ನು ಬಿಟ್ಟು ಬಾಳಿರಿ, ವಿವೇಕಮಾರ್ಗದಲ್ಲಿ ನೆಟ್ಟಗೆ ನಡೆಯಿರಿ” ಎಂದು ಪ್ರಬೋಧಿಸುತ್ತಾಳೆ.
7ಧರ್ಮನಿಂದಕನನ್ನು ಶಿಕ್ಷಿಸುವವನು ತನ್ನನ್ನು ಅವಮಾನಕ್ಕೆ ಗುರಿಮಾಡಿಕೊಳ್ಳುವನು, ಕೆಟ್ಟವನನ್ನು ಗದರಿಸುವವನಿಗೇ ಕಳಂಕವಾಗುವುದು.
8ಧರ್ಮನಿಂದಕನನ್ನು ಗದರಿಸಬೇಡ, ನಿನ್ನನ್ನು ಹಗೆಮಾಡುವನು. ಜ್ಞಾನವಂತನನ್ನು ಗದರಿಸಿದರೆ ನಿನ್ನನ್ನು ಪ್ರೀತಿಸುವನು.
9ಜ್ಞಾನಿಗೆ ಉಪದೇಶಿಸಿದರೆ ಹೆಚ್ಚು ಜ್ಞಾನವನ್ನು ಹೊಂದುವನು, ನೀತಿವಂತನಿಗೆ ಬೋಧಿಸಿದರೆ ಹೆಚ್ಚು ತಿಳಿವಳಿಕೆಯನ್ನು ಪಡೆಯುವನು.
10ಯೆಹೋವನ ಭಯವೇ ಜ್ಞಾನಕ್ಕೆ ಮೂಲವು, ಪರಿಶುದ್ಧ ದೇವರ ತಿಳಿವಳಿಕೆಯೇ ವಿವೇಕವು.
11ನನ್ನಿಂದ ನಿನ್ನ ದಿನಗಳು ಹೆಚ್ಚುವವು, ನಿನ್ನ ಆಯುಷ್ಯದ ವರ್ಷಗಳು ವೃದ್ಧಿಯಾಗುವವು.
12ನೀನು ಜ್ಞಾನವಂತನಾದರೆ ನಿನ್ನ ಜ್ಞಾನವು ನಿನಗೇ ಲಾಭಕರ, ಧರ್ಮನಿಂದಕನಾದರೆ ನೀನೇ ಅದರ ಫಲವನ್ನು ಅನುಭವಿಸುವಿ.
13ಅಜ್ಞಾನವೆಂಬವಳಾದರೋ ಕೂಗಾಟದವಳು, ಮೂಢಳು, ಏನೂ ತಿಳಿಯದವಳು.
14ಅವಳು ತನ್ನ ಮನೆಯ ಬಾಗಿಲಿನಲ್ಲಿ, ಪಟ್ಟಣದ ರಾಜಮಾರ್ಗಗಳಲ್ಲಿ ಪೀಠದ ಮೇಲೆ ಕುಳಿತುಕೊಂಡವಳಾಗಿ,
15ತಮ್ಮ ಮಾರ್ಗವನ್ನು ಹಿಡಿದು, ಹೋಗಿ ಬರುವವರನ್ನು ನೋಡಿ,
16“ಮೂಢನಾಗಿರುವವನು ಈ ಕಡೆಗೆ ತಿರುಗಲಿ” ಎಂದು ಕೂಗಿ,
17“ಕದ್ದ ನೀರು ಸಿಹಿಯಾಗಿದೆ, ಗುಟ್ಟಾಗಿ ತಿನ್ನುವ ತಿಂಡಿಯು ರುಚಿಯಾಗಿದೆ” ಎಂದು ಬುದ್ಧಿಹೀನನಿಗೆ ಹೇಳುತ್ತಾಳೆ.
18ಆ ಮನೆಯು ಪ್ರೇತ ನಿವಾಸವೆಂದೂ ಅವಳ ಅತಿಥಿಗಳು ಅಗಾಧಪಾತಾಳದಲ್ಲಿ ಬಿದ್ದಿರುವರೆಂದೂ ಅವನಿಗೆ ತಿಳಿಯದು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath