ಕ್ರಿಶ್ಚಿಯನ್ ಧರ್ಮ
ಹಿಂದೆ

ಅರಣ್ಯಕಾಂಡ 30

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಮೋಶೆಯು ಇಸ್ರಾಯೇಲರ ಕುಲಾಧಿಪತಿಗಳಿಗೆ ಹೇಳಿದ್ದೇನೆಂದರೆ, “ಯೆಹೋವನು ಹೀಗೆ ಆಜ್ಞಾಪಿಸಿದ್ದಾನೆ,

2ಯಾವನಾದರೂ ಯೆಹೋವನಿಗೆ ಹರಕೆ ಮಾಡಿದರೆ ಇಲ್ಲವೆ ತಾನು ಅಶುದ್ಧವಾದುದನ್ನು ಮುಟ್ಟದೆ ಇರುವೆನೆಂದು ಆಣೆಯಿಟ್ಟುಕೊಂಡರೆ ಅವನು ತನ್ನ ಮಾತನ್ನು ಮೀರದೆ ಹೇಳಿದಂತೆಯೇ ನೆರವೇರಿಸಬೇಕು.

3“ಸ್ತ್ರೀಯು ಕನ್ಯಾವಸ್ಥೆಯಲ್ಲಿ ತಂದೆಯ ಮನೆಯಲ್ಲಿದ್ದು ಯೆಹೋವನಿಗೆ ಹರಕೆಯನ್ನು ಮಾಡಿದಾಗ ಇಲ್ಲವೆ ಯಾವುದಾದರೂ ಒಂದನ್ನು ಮುಟ್ಟದೆ ಇರುವೆನೆಂದು ಪ್ರತಿಜ್ಞೆಯನ್ನು ಮಾಡಿಕೊಂಡಾಗ

4ಅವಳ ತಂದೆಯು ಆ ಸಂಗತಿಯನ್ನು ತಿಳಿದು ಸುಮ್ಮನಿದ್ದರೆ ಅವಳು ಆ ಹರಕೆಯನ್ನು ನೆರವೇರಿಸಲೇಬೇಕು. ಯಾವುದನ್ನು ಮುಟ್ಟದೆ ಇರುವೆನೆಂದು ಹೇಳಿದಳೋ ಅದನ್ನು ಮುಟ್ಟಲೇ ಬಾರದು.

5ಆದರೆ ತಂದೆ ಆ ಸಂಗತಿಯನ್ನು ತಿಳಿದಾಗ ಹಾಗೆ ಮಾಡಬಾರದೆಂದು ಅಪ್ಪಣೆಕೊಟ್ಟರೆ ಅವಳು ಮಾಡಿದ ಹರಕೆಗಳೂ, ಪ್ರತಿಜ್ಞೆಗಳೂ ವ್ಯರ್ಥವಾಗುವವು. ತಂದೆ ಕ್ಷಮಿಸಿ ಬೇಡವೆಂದು ಹೇಳಿದ್ದರಿಂದ ಯೆಹೋವನು ಅವಳನ್ನು ದೋಷಿಯೆಂದು ಎಣಿಸುವುದಿಲ್ಲ.

6“ಅವಳು ಮದುವೆಯಾದ ಪಕ್ಷದಲ್ಲಿ ಮಾಡಿದ ಹರಕೆ ಇಲ್ಲವೆ ಯೋಚಿಸದೆ ಮಾಡಿದ ಪ್ರತಿಜ್ಞೆ ನಡೆಯುವಷ್ಟರೊಳಗೆ,

7ಗಂಡನು ಆ ಪ್ರಮಾಣದ ಸಂಗತಿಯನ್ನು ತಿಳಿದು ಸುಮ್ಮನಿದ್ದರೆ ಆ ಹರಕೆಗಳೂ, ಪ್ರತಿಜ್ಞೆಗಳೂ ನಡೆಯಬೇಕು.

8ಆದರೆ ಗಂಡನು ಕೇಳಿದಾಗಲೇ ಕ್ಷಮಿಸಿ ಬೇಡವೆಂದು ಅಪ್ಪಣೆಕೊಟ್ಟರೆ ಆ ಹರಕೆಯು ಇಲ್ಲವೆ ಆ ಪ್ರತಿಜ್ಞೆಯು ನಿರರ್ಥಕವಾಗುವವು. ಯೆಹೋವನು ಅವಳನ್ನು ದೋಷಿಯೆಂದು ಎಣಿಸುವುದಿಲ್ಲ.

9“ವಿಧವೆಯು ಇಲ್ಲವೆ ಗಂಡನಿಂದ ಬಿಡಲ್ಪಟ್ಟ ಸ್ತ್ರೀಯು ಇಂತಹ ಪ್ರಮಾಣಮಾಡಿಕೊಂಡರೆ ಅದು ನಿಲ್ಲುವುದು. ಅವಳು ಅದನ್ನು ನೆರವೇರಿಸಬೇಕು.

10“ಮುತ್ತೈದೆಯು ಅಂತಹ ಹರಕೆಯನ್ನಾಗಲಿ, ಪ್ರಮಾಣವನ್ನಾಗಲಿ ಮಾಡಿದಾಗ,

11ಅವಳ ಗಂಡನು ತಿಳಿದು ಅಡ್ಡಿಮಾಡದೆ ಸುಮ್ಮನಿದ್ದರೆ ಆ ಹರಕೆಗಳೂ, ಪ್ರತಿಜ್ಞೆಗಳೂ ನಿಲ್ಲುವವು.

12ಆದರೆ ಗಂಡನು ಅವುಗಳನ್ನು ತಿಳಿದಾಗಲೇ ಬೇಡವೆಂದರೆ ಅವು ರದ್ದಾಗುವವು. ಗಂಡನು ಕ್ಷಮಿಸಿ ಬೇಡವೆಂದು ಹೇಳಿದ್ದರಿಂದ ಅಂಥವಳು ಯೆಹೋವನಿಗೆ ಹರಕೆ ಮಾಡಿದರೂ, ದೋಷಿಯೆಂದು ಎಣಿಸಲ್ಪಡುವುದಿಲ್ಲ.

13ಹೆಂಡತಿ ಮಾಡಿದ ಹರಕೆಯನ್ನೂ, ಉಪವಾಸವಾಗಿರುವೆನೆಂದು ಅವಳು ಮಾಡಿದ ಪ್ರಮಾಣವನ್ನೂ ಸ್ಥಾಪಿಸುವುದಕ್ಕಾಗಲಿ ರದ್ದುಮಾಡುವುದಕ್ಕಾಗಲಿ ಗಂಡನಿಗೆ ಅಧಿಕಾರವಿರುವುದು.

14ಆದರೆ ಅವಳ ಗಂಡನು ಯಾವ ಅಡ್ಡಿಯನ್ನೂ ಮಾಡದೆ ಸುಮ್ಮನಿದ್ದರೆ ಅವನು ಅವಳ ಹರಕೆಗಳನ್ನೂ, ಪ್ರತಿಜ್ಞೆಗಳನ್ನೂ ಅವನು ನಮೂದಿಸಿದಂತೆ ಆಗುವುದು.

15ಅವನು ತರುವಾಯ ಬೇಡವೆಂದರೆ ಆ ಪಾಪದ ಫಲವನ್ನು ಅವನೇ ಅನುಭವಿಸಬೇಕು.”

16ಗಂಡಹೆಂಡತಿಯರ ವಿಷಯವಾಗಿಯೂ, ಇನ್ನೂ ಮದುವೆಯಿಲ್ಲದ ಹೆಂಗಸು ಮತ್ತು ಅವಳ ತಂದೆ ಇವರ ವಿಷಯವಾಗಿಯೂ, ಹರಕೆಗಳ ಸಂಬಂಧವಾಗಿಯೂ ಯೆಹೋವನು ಮೋಶೆಗೆ ಕೊಟ್ಟ ನಿಯಮಗಳು ಇವೇ.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath