ವಿಮೋಚನಕಾಂಡ 39
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದ ದೇವಮಂದಿರದ ಸೇವೆಗೆ ಅಲಂಕಾರವಾದ ವಸ್ತ್ರಗಳನ್ನೂ ಮತ್ತು ಆರೋನನಿಗೆ ಪರಿಶುದ್ಧ ವಸ್ತ್ರಗಳನ್ನೂ ಮಾಡಿದರು.
2ಮಹಾಯಾಜಕನ ಏಫೋದೆಂಬ ಕವಚವನ್ನು ನಯವಾಗಿ ಹೊಸೆದ ಹತ್ತಿಯ ಬಟ್ಟೆಯಿಂದಲೂ ಚಿನ್ನದ ದಾರದಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದಲೂ ಮಾಡಿದರು.
3ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದೊಡನೆಯೂ ಹತ್ತಿಯ ಬಟ್ಟೆಯೊಡನೆಯೂ ಕಸೂತಿ ಕೆಲಸದವರ ಪದ್ಧತಿಯ ಮೇರೆಗೆ ಕಸೂತಿ ಕೆಲಸವನ್ನು ಮಾಡುವುದಕ್ಕಾಗಿ ಬಂಗಾರವನ್ನು ಬಡಿದು ಹಗುರವಾದ ತಗಡುಗಳನ್ನು ಮಾಡಿ ಸಣ್ಣ ಸಣ್ಣ ಎಳೆಗಳಾಗಿ ಕತ್ತರಿಸಿದರು.
4ಏಫೋದ್ ಕವಚಕ್ಕೆ ಹೆಗಲಿನ ಮೇಲೆ ಎರಡು ಪಟ್ಟಿಗಳನ್ನು ಮಾಡಿದರು; ಅದರ ಎರಡು ಅಂಚುಗಳು ಜೋಡಿಸಲ್ಪಟ್ಟಿದ್ದವು.
5ಕವಚದ ಮೇಲಿರುವ ಕಸೂತಿ ನಡುಕಟ್ಟು ಕವಚಕ್ಕೆ ಏಕವಾಗಿದ್ದು ಅದರಂತೆಯೇ ನಯವಾಗಿ ಹೊಸೆದ ಹತ್ತಿಯ ಬಟ್ಟೆಯಿಂದಲು, ಚಿನ್ನದ ದಾರಗಳಿಂದಲು ಹಾಗೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಮಾಡಲ್ಪಟ್ಟಿತ್ತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.
6ಮುದ್ರಾಕ್ಷವನ್ನು ಕೆತ್ತುವ ರೀತಿಯಲ್ಲಿ ಗೋಮೇಧಕರತ್ನಗಳಲ್ಲಿ ಇಸ್ರಾಯೇಲನ ಹನ್ನೆರಡು ಮಕ್ಕಳ ಹೆಸರುಗಳನ್ನು ಕೆತ್ತಿ ಆ ರತ್ನಗಳನ್ನು ಕುಂದಣದಲ್ಲಿ ಹಚ್ಚಿದರು.
7ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಆ ರತ್ನಗಳನ್ನು ಇಸ್ರಾಯೇಲರ ಜ್ಞಾಪಕಾರ್ಥವಾಗಿ ಅವುಗಳನ್ನು ಏಫೋದ್ ಕವಚದ ಹೆಗಲಿನ ಮೇಲಿರುವ ಪಟ್ಟಿಗಳಲ್ಲಿ ಬಿಗಿಸಿದನು.
8ಏಫೋದ್ ಕವಚದಂತೆಯೇ ಕಸೂತಿಯಿಂದಲೂ ಕೆಲಸದಿಂದ ಚಿನ್ನದ ದಾರಗಳಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದಲೂ ನಯವಾದ ನಾರಿನ ಬಟ್ಟೆಯಲ್ಲಿ ಎದೆಯಪದಕವನ್ನು ಮಾಡಿದನು.
9ಅದು ಚಚ್ಚೌಕವಾಗಿತ್ತು. ಆ ಎದೆಯಪದಕವು ಎರಡು ಪದರುಗಳ್ಳುಳದ್ದಾಗಿತ್ತು; ಅದು ಒಂದು ಗೇಣು ಉದ್ದವೂ ಒಂದು ಗೇಣು ಅಗಲವೂ ಆಗಿತ್ತು.
10ಅದರ ಮುಂಭಾಗದಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಇರಿಸಿದರು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಮತ್ತು ಸ್ಫಟಿಕಗಳು.
11ಎರಡನೆಯ ಸಾಲಿನಲ್ಲಿ ಪಚ್ಚೆ, ನೀಲಮಣಿ ಮತ್ತು ವಜ್ರಗಳು.
12ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಸುಗಂಧಿ ಮತ್ತು ಪದ್ಮರಾಗಗಳು.
13ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ ಮತ್ತು ವೈಡೂರ್ಯಗಳು ಇದ್ದವು. ಈ ರತ್ನಗಳನ್ನು ಕುಂದಣಗಳಲ್ಲಿ ಇರಿಸಿದರು.
14ಇಸ್ರಾಯೇಲರ ಕುಲಗಳ ಸಂಖ್ಯೆಯ ಪ್ರಕಾರ ಹನ್ನೆರಡು ರತ್ನಗಳಿದ್ದವು; ಮುದ್ರಾಕ್ಷಗಳಲ್ಲಿ ಕೆತ್ತುವ ರೀತಿಯಲ್ಲಿ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರು ಕೆತ್ತಲ್ಪಟ್ಟಿತ್ತು.
15ಎದೆಪದಕದ ಮೇಲ್ಗಡೆಯಲ್ಲಿ ಹುರಿಗಳಂತಿರುವ ಚೊಕ್ಕಬಂಗಾರದ ಸರಪಣಿಗಳನ್ನು ನೇಯ್ಗೆಯ ಕೆಲಸದಿಂದ ಮಾಡಿದರು.
16ಎರಡು ಚಿನ್ನದ ಬಳೆಗಳನ್ನೂ ಎರಡು ಚಿನ್ನದ ಉಂಗುರಗಳನ್ನೂ ಮಾಡಿ ಆ ಉಂಗುರಗಳನ್ನು ಎದೆಪದಕದ ಎರಡು ಮೂಲೆಗಳಿಗೆ ಜೋಡಿಸಿದರು.
17ಹೆಣಿಗೇಕೆಲಸದ ಆ ಎರಡು ಚಿನ್ನದ ಸರಪಣಿಗಳನ್ನು ಪದಕದ ಮೂಲೆಗಳಲ್ಲಿರುವ ಉಂಗುರಗಳಿಗೆ ಜೋಡಿಸಿದರು.
18ಹೆಣಿಗೇಕೆಲಸದ ಆ ಸರಪಣಿಗಳ ಅಂಚುಗಳನ್ನು ಏಫೋದ್ ಕವಚದ ಹೆಗಲಿನ ಪಟ್ಟಿಗಳಲ್ಲಿರುವ ಎರಡು ಬಳೆಗಳ ಮುಂಭಾಗಕ್ಕೆ ಜೋಡಿಸಿದರು.
19ಅದಲ್ಲದೆ ಎರಡು ಚಿನ್ನದ ಉಂಗುರಗಳನ್ನು ಮಾಡಿ ಪದಕದ ಒಳಗಣ ಅಂಚಿನ ಮೂಲೆಗಳಲ್ಲಿ ಕವಚದ ಹತ್ತಿರದಲ್ಲೇ ಇಟ್ಟರು.
20ಅವರು ಬೇರೆ ಎರಡು ಚಿನ್ನದ ಉಂಗುರಗಳನ್ನು ಮಾಡಿ ಕವಚದ ಎರಡು ಹೆಗಲಿನ ಪಟ್ಟಿಗಳ ಮುಂಭಾಗದ ಕೆಳಗೆ, ಏಫೋದ್ ಕವಚವನ್ನು ಜೋಡಿಸಿರುವ ಸ್ಥಳದ ಹತ್ತಿರ ಆ ಕಸೂತಿಯ ನಡುಕಟ್ಟಿನ ಮೇಲ್ಗಡೆಯಲ್ಲಿ ಇರಿಸಿದರು.
21ಎದೆಯಪದಕವು ಕಸೂತಿಯ ನಡುಕಟ್ಟಿನ ಮೇಲ್ಗಡೆಯಲ್ಲಿ ಬಿಗಿಯಾಗಿರುವಂತೆಯೂ ಕವಚದಿಂದ ಕಳಚಿಬೀಳದಂತೆಯೂ ಅದರ ಉಂಗುರಗಳನ್ನು ಕವಚದ ಉಂಗುರಗಳಿಗೆ ನೀಲಿ ದಾರದಿಂದ ಕಟ್ಟಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಿದರು.
22ಬೆಚಲೇಲನು ಏಫೋದ್ ಕವಚದ ಸಂಗಡ ತೊಟ್ಟುಕೊಳ್ಳಬೇಕಾದ ನಿಲುವಂಗಿಯನ್ನು ನೀಲಿಬಣ್ಣದ ಬಟ್ಟೆಯಿಂದಲೇ ನೇಕಾರನ ಕೆಲಸದಿಂದ ಮಾಡಿದನು.
23ತಲೆತೂರಿಸುವುದಕ್ಕೆ ಅದರಲ್ಲಿ ಕೊರಳು ಪಟ್ಟಿಯನ್ನು ಮಾಡಿ ಅದು ಹರಿಯದಂತೆ ಅದರ ಸುತ್ತಲೂ ನೇಯ್ಗೆ ಕಸೂತಿಯನ್ನು ಹಾಕಿದನು.
24ನಿಲುವಂಗಿಯ ಅಂಚಿನ ಸುತ್ತಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದ ದಾಳಿಂಬೆ ಹಣ್ಣಿನಂತೆ ಚೆಂಡುಗಳನ್ನು ಮಾಡಿದರು.
25ಮತ್ತು ಚೊಕ್ಕ ಬಂಗಾರದಿಂದ ಗೆಜ್ಜೆಗಳನ್ನು ಮಾಡಿ ನಿಲುವಂಗಿಯ ಅಂಚಿನಲ್ಲಿ ದಾಳಿಂಬೆ ಚೆಂಡುಗಳ ನಡುವೆ ಇಟ್ಟರು.
26ಚಿನ್ನದ ಗೆಜ್ಜೆಯೂ ದಾಳಿಂಬೆಯಂತಿರುವ ಚೆಂಡೂ ಒಂದಾದ ಮೇಲೆ ಒಂದು ದೇವರ ಸೇವೆಗಾಗಿ ಇರುವ ಆ ನಿಲುವಂಗಿಯ ಅಂಚಿನ ಸುತ್ತಲೂ ಇದ್ದವು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದನು.
27ಅವರು ಆರೋನನಿಗೂ ಅವನ ಮಕ್ಕಳಿಗೂ ನಯವಾದ ನಾರಿನಿಂದ ನೇಕಾರರ ಕೆಲಸದ ರೀತಿಯಲ್ಲಿ ಮೇಲಂಗಿಗಳನ್ನೂ,
28ನಯವಾದ ನಾರಿನಿಂದ ಮಹಾಯಾಜಕನ ಮುಂಡಾಸವನ್ನು, ಯಾಜಕರ ಅಲಂಕಾರವಾದ ಮುಂಡಾಸಗಳನ್ನು ಹಾಗೂ ಚಡ್ಡಿಗಳನ್ನು,
29ಮತ್ತು ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಕಸೂತಿ ಕೆಲಸದ ರೀತಿಯಲ್ಲಿ ನಡುಕಟ್ಟನ್ನೂ ಮಾಡಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.
30ಅವರು ಚೊಕ್ಕ ಬಂಗಾರದಿಂದ ಪರಿಶುದ್ಧ ಕಿರೀಟಕ್ಕೆ ಬಾಸಿಂಗವನ್ನು ಮಾಡಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ ಅದರಲ್ಲಿ, ಯೆಹೋವನಿಗೆ ಮೀಸಲು ಎಂಬ ಲಿಪಿಯನ್ನು ಬರೆದರು.
31ಅದನ್ನು ಮುಂಡಾಸಕ್ಕೆ ಜೋಡಿಸುವುದಕ್ಕಾಗಿ ನೀಲಿ ದಾರವನ್ನು ಅದಕ್ಕೆ ಕಟ್ಟಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.
32ಈ ರೀತಿಯಲ್ಲಿ ದೇವದರ್ಶನದ ಗುಡಾರದ ಕೆಲಸವೆಲ್ಲಾ ಮುಗಿಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಅದನ್ನು ಮಾಡಿದರು.
33ಆಗ ಅವರು ಆ ದೇವದರ್ಶನ ಗುಡಾರವನ್ನು ಮೋಶೆಯ ಬಳಿಗೆ ತೆಗೆದುಕೊಂಡು ಬಂದರು. ಗುಡಾರವನ್ನು, ಅದಕ್ಕೆ ಸಂಬಂಧಪಟ್ಟ ಉಪಕರಣಗಳೆಲ್ಲವನ್ನೂ ಅಂದರೆ ಅದರ ಕೊಂಡಿಗಳನ್ನು, ಚೌಕಟ್ಟುಗಳನ್ನು, ಅಗುಳಿಗಳನ್ನು, ಕಂಬಗಳನ್ನು, ಮೆಟ್ಟುವಕಲ್ಲುಗಳನ್ನು,
34ಹದಮಾಡಿರುವ ಕೆಂಪುಬಣ್ಣದ ಟಗರಿನ ತೊಗಲುಗಳಿಂದ ಮಾಡಿದ ಮೇಲ್ಹೊದಿಕೆಯನ್ನು, ಕಡಲಪ್ರಾಣಿಯ ತೊಗಲುಗಳಿಂದ ಮಾಡಿದ ಮೇಲ್ಹೊದಿಕೆಯನ್ನು ಹಾಗೂ ಗರ್ಭಗುಡಿಯನ್ನು ಮರೆಮಾಡುವ ಪರದೆಯನ್ನು,
35ಆಜ್ಞಾಶಾಸನಗಳ ಮಂಜೂಷವನ್ನು, ಅದರ ಕೋಲುಗಳನ್ನು, ಕೃಪಾಸನವನ್ನು,
36ಮೇಜನ್ನು, ಅದರ ಎಲ್ಲಾ ಉಪಕರಣಗಳನ್ನು, ನೈವೇದ್ಯದ ರೊಟ್ಟಿಯನ್ನು,
37ಚೊಕ್ಕ ಬಂಗಾರದ ದೀಪಸ್ತಂಭವನ್ನು, ಅದರ ಮೇಲಿಡಬೇಕಾದ ಹಣತೆಗಳನ್ನು, ಅದರ ಉಪಕರಣಗಳನ್ನು, ದೀಪಕ್ಕೆ ಬೇಕಾದ ಎಣ್ಣೆಯನ್ನು,
38ಚಿನ್ನದ ಧೂಪವೇದಿಯನ್ನು, ಅಭಿಷೇಕತೈಲವನ್ನು, ಸುವಾಸನೆಯುಳ್ಳ ಧೂಪವನ್ನು, ಗುಡಾರದ ಬಾಗಿಲಿನ ಪರದೆಯನ್ನು,
39ತಾಮ್ರದ ಯಜ್ಞವೇದಿಯನ್ನು, ಅದರ ತಾಮ್ರದ ಜಾಲರಿಯನ್ನು, ಅದರ ಕೋಲುಗಳನ್ನು, ಉಪಕರಣಗಳನ್ನು,
40ತೊಟ್ಟಿಯನ್ನು, ಅದರ ಪೀಠವನ್ನು, ಅಂಗಳದ ತೆರೆಗಳನ್ನು, ಕಂಬಗಳನ್ನು, ಮೆಟ್ಟುವಕಲ್ಲುಗಳನ್ನು, ಅಂಗಳದ ಬಾಗಿಲಿನ ಪರದೆಯನ್ನು, ಅದರ ಹಗ್ಗಗಳನ್ನು, ಗೂಟಗಳನ್ನು, ದೇವದರ್ಶನದ ಗುಡಾರದ ಸೇವೆಗೆ ಬೇಕಾದ ಎಲ್ಲಾ ಉಪಕರಣಗಳನ್ನು,
41ದೇವಮಂದಿರದೊಳಗೆ ನಡೆಯುವ ದೇವರಕಾರ್ಯಗಳಿಗೆ ಅಲಂಕಾರ ವಸ್ತ್ರ ಅಂದರೆ ಆರೋನನಿಗೆ ಬೇಕಾದ ಪವಿತ್ರ ವಸ್ತ್ರಗಳನ್ನು ಯಾಜಕಸೇವೆ ಮಾಡುವವರಾದ ಅವನ ಮಕ್ಕಳಿಗೆ ಬೇಕಾದ ವಸ್ತ್ರಗಳನ್ನು ತಂದರು.
42ಯೆಹೋವನು ಮೋಶೆಗೆ ಆಜ್ಞಾಪಿಸಿದ್ದಂತೆಯೇ ಇಸ್ರಾಯೇಲರು ಆ ಕೆಲಸಗಳನ್ನೆಲ್ಲಾ ಮಾಡಿದ್ದರು.
43ಅವರು ಮಾಡಿದ್ದ ಕೆಲಸವನ್ನು ಮೋಶೆಯು ಪರೀಕ್ಷಿಸಿ ನೋಡಲಾಗಿ ಯೆಹೋವನ ಅಪ್ಪಣೆಯಂತೆಯೇ ಅವರು ಎಲ್ಲವನ್ನು ಮಾಡಿದ್ದರಿಂದ ಮೋಶೆಯು ಅವರನ್ನು ಆಶೀರ್ವದಿಸಿದನು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath