ಧರ್ಮೋಪದೇಶಕಾಂಡ 20
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ನೀವು ನಿಮ್ಮ ಶತ್ರುಗಳಿಗೆ ವಿರುದ್ಧವಾಗಿ ಯುದ್ಧಕ್ಕೆ ಹೊರಟಾಗ ಅವರ ಹತ್ತಿರ ಕುದುರೆಗಳೂ, ರಥಗಳೂ ಮತ್ತು ನಿಮಗಿಂತ ಹೆಚ್ಚಾದ ಕಾಲ್ಬಲವೂ ಇರುವುದನ್ನು ಕಂಡರೆ ಹೆದರಬಾರದು. ಏಕೆಂದರೆ ಐಗುಪ್ತದೇಶದಿಂದ ನಿಮ್ಮನ್ನು ಬಿಡಿಸಿದ ನಿಮ್ಮ ದೇವರಾದ ಯೆಹೋವನು ನಿಮ್ಮ ಕಡೆ ಇದ್ದಾನಲ್ಲಾ.
2ನಿಮಗೆ ಯುದ್ಧ ಸಮೀಪಿಸಿದಾಗ ಯಾಜಕನು ಮುಂದೆ ಬಂದು ಭಟರ ಸಂಗಡ ಮಾತನಾಡಿ ಅವರಿಗೆ,
3“ಇಸ್ರಾಯೇಲರೇ, ಕೇಳಿರಿ; ನೀವು ಈಗ ಶತ್ರುಗಳೊಡನೆ ಯುದ್ಧಮಾಡುವ ಕಾಲ ಸಮೀಪಿಸಿತಷ್ಟೆ. ನೀವು ಎದೆಗುಂದಬಾರದು, ದಿಗಿಲುಪಡಬಾರದು, ನಡುಗಬಾರದೂ ಮತ್ತು ಅವರಿಗೆ ಹೆದರಲೂಬಾರದು.
4ನಿಮ್ಮ ದೇವರಾದ ಯೆಹೋವನು ತಾನೇ ನಿಮ್ಮ ಸಂಗಡ ಇದ್ದು ಶತ್ರುಗಳೊಡನೆ ನಿಮಗೋಸ್ಕರ ಯುದ್ಧಮಾಡಿ ನಿಮಗೆ ಜಯವನ್ನು ಉಂಟುಮಾಡುವನು” ಎಂದು ಹೇಳಬೇಕು.
5ಮತ್ತು ಸೈನ್ಯಾಧಿಪತಿಗಳು ಅವರಿಗೆ, “ನಿಮ್ಮಲ್ಲಿ ಯಾವನಾದರೂ ಹೊಸ ಮನೆಯನ್ನು ಕಟ್ಟಿಸಿಕೊಂಡು ಇನ್ನು ಪ್ರತಿಷ್ಠೆ ಮಾಡದಿದ್ದರೆ ಅವನು ಆ ಮನೆಗೆ ಹೋಗಲಿ, ಅವನು ಯುದ್ಧಕ್ಕೆ ಬಂದು ಸತ್ತರೆ ಮತ್ತೊಬ್ಬನು ಆ ಮನೆಯಲ್ಲಿ ಗೃಹಪ್ರವೇಶ ಮಾಡಿಕೊಳ್ಳಬಹುದು.
6ಯಾವನಾದರೂ ದ್ರಾಕ್ಷಿತೋಟವನ್ನು ಮಾಡಿ ಅದರ ಹಣ್ಣುಗಳನ್ನು ಇನ್ನೂ ಅನುಭೋಗಿಸದಿದ್ದರೆ ಅವನು ಮನೆಗೆ ಹೋಗಲಿ; ಅವನು ಕಾಳಗದಲ್ಲಿ ಸತ್ತರೆ ಮತ್ತೊಬ್ಬನು ಆ ತೋಟದ ಹಣ್ಣುಗಳನ್ನು ಅನುಭೋಗಿಸಬಹುದು.
7ಯಾವನಾದರೂ ತಾನು ಮದುವೆಗೆ ನಿಶ್ಚಯ ಮಾಡಿಕೊಂಡ ಹೆಣ್ಣನ್ನು ಇನ್ನೂ ಸೇರಿಸಿಕೊಳ್ಳದಿದ್ದರೆ ಅವನು ಮನೆಗೆ ಹೋಗಲಿ; ಅವನು ಯುದ್ಧದಲ್ಲಿ ಸತ್ತರೆ ಮತ್ತೊಬ್ಬನು ಅವಳನ್ನು ಮದುವೆ ಮಾಡಿಕೊಳ್ಳಬಹುದು” ಎಂದು ಹೇಳಬೇಕು.
8ಇದಲ್ಲದೆ, “ಯಾವನಾದರೂ ಅಧೈರ್ಯದಿಂದ ಯುದ್ಧ ಮಾಡಲು ಹಿಂಜರಿದರೆ ಅವನೂ ಮನೆಗೆ ಹೋಗಲಿ; ಅವನು ದಿಗಿಲುಪಡುವುದರಿಂದ ಅವನ ಜೊತೆಗಾರರೂ ದಿಗಿಲುಪಟ್ಟಾರು” ಎಂದು ಹೇಳಬೇಕು.
9ಸೈನ್ಯಾಧಿಪತಿಗಳು ಭಟರಿಗೆ ಈ ರೀತಿಯಾಗಿ ಹೇಳಿದ ನಂತರ ದಂಡಿನವರ ಮೇಲೆ ನಾಯಕರನ್ನು ನೇಮಿಸಬೇಕು.
10ನೀವು ಒಂದು ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಅದರ ಹತ್ತಿರಕ್ಕೆ ಬಂದಾಗ ಮೊದಲು ಅದು ಯುದ್ಧವಿಲ್ಲದೆ ಸಮಾಧಾನದಿಂದಲೇ ಅಧೀನವಾಗಬಹುದೆಂದು ಪ್ರಕಟಿಸಬೇಕು.
11ಅದರಲ್ಲಿರುವವರು ಒಪ್ಪಿ ಬಾಗಿಲನ್ನು ನಿಮಗೆ ತೆರೆದುಕೊಟ್ಟರೆ ಅವರೆಲ್ಲರೂ ನಿಮಗೆ ಬಿಟ್ಟೀಕೆಲಸವನ್ನು ಮಾಡುವ ದಾಸರಾಗಬೇಕು.
12ಅವರು ನಿಮ್ಮ ಮಾತಿಗೆ ಸಮ್ಮತಿಸದೆ ಎದುರಿಸಿದರೆ ನೀವು ಆ ಪಟ್ಟಣಕ್ಕೆ ಮುತ್ತಿಗೆ ಹಾಕಬೇಕು.
13ನಿಮ್ಮ ದೇವರಾದ ಯೆಹೋವನು ಆ ಪಟ್ಟಣವನ್ನು ನಿಮಗೆ ವಶವಾಗುವಂತೆ ಮಾಡಿದಾಗ ಅದರಲ್ಲಿರುವ ಗಂಡಸರೆಲ್ಲರನ್ನೂ ಕನಿಕರಿಸದೆ ಸಂಹಾರಮಾಡಬೇಕು.
14ಹೆಂಗಸರನ್ನೂ, ಮಕ್ಕಳನ್ನೂ, ದನಗಳನ್ನೂ ಮತ್ತು ಊರಿನಲ್ಲಿರುವ ಆಸ್ತಿಯನ್ನೂ ನೀವು ಸ್ವಂತಕ್ಕೆ ತೆಗೆದುಕೊಳ್ಳಬಹುದು. ನಿಮ್ಮ ದೇವರಾದ ಯೆಹೋವನು ನಿಮಗೆ ವಶಪಡಿಸಿದ ಶತ್ರುಗಳ ಆಸ್ತಿಯನ್ನು ನೀವೇ ಅನುಭೋಗಿಸಬಹುದು.
15ಈ ದೇಶದ ಜನಾಂಗಗಳಿಗೆ ಸೇರದೆ ದೂರವಾಗಿರುವ ಜನಾಂಗಗಳ ಪಟ್ಟಣಗಳ ವಿಷಯದಲ್ಲಿ ನೀವು ಹಾಗೆಯೇ ನಡೆದುಕೊಳ್ಳಬೇಕು.
16ಆದರೆ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವಂತಕ್ಕಾಗಿ ಕೊಡುವ ಈ ಜನಾಂಗಗಳ ಪಟ್ಟಣಗಳ ವಿಷಯದಲ್ಲಿ ಹಾಗೆ ಮಾಡದೆ ಉಸಿರಾಡುವ ಒಬ್ಬರನ್ನಾದರೂ ಉಳಿಸಬಾರದು.
17ನಿಮ್ಮ ದೇವರಾದ ಯೆಹೋವನು ನಿಮಗೆ ಅಪ್ಪಣೆಕೊಟ್ಟಂತೆ ಇವರನ್ನು ಅಂದರೆ ಹಿತ್ತಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು, ಯೆಬೂಸಿಯರು, ಇವರೆಲ್ಲರನ್ನೂ ನಾಶಮಾಡಿಬಿಡಬೇಕು.
18ಇಲ್ಲವಾದರೆ ಅವರು ತಮ್ಮ ದೇವರುಗಳಿಗಾಗಿ ಆಚರಿಸುವ ನಿಷಿದ್ಧವಾದ ಆಚಾರಗಳನ್ನು ನಿಮಗೆ ಕಲಿಸಿಕೊಟ್ಟಾರು; ಮತ್ತು ನೀವು ನಿಮ್ಮ ದೇವರಾದ ಯೆಹೋವನಿಗೆ ದ್ರೋಹಿಗಳಾಗಬಹುದು.
19ನೀವು ಒಂದು ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳುವುದಕ್ಕಾಗಿ ಅದಕ್ಕೆ ಬಹುದಿನ ಮುತ್ತಿಗೆಹಾಕಿದಾಗ, ಅದಕ್ಕೆ ಸೇರಿರುವ ಮರಗಳನ್ನು ಹಾಳುಮಾಡಬಾರದು; ಅವುಗಳಿಗೆ ಕೊಡಲಿಯನ್ನು ಹಾಕಲೇಬಾರದು. ಅವುಗಳ ಹಣ್ಣನ್ನು ತಿನ್ನಬಹುದೇ ಹೊರತು ಮರಗಳನ್ನು ಕಡಿಯಬಾರದು. ಅಡವಿಯ ಮರಗಳು ಯಾರಿಗೂ ಶತ್ರುಗಳಲ್ಲ! ಅವುಗಳೊಡನೆ ಯುದ್ಧಮಾಡಬಹುದೇ?
20ಮರಗಳು ತಿನ್ನತಕ್ಕ ಹಣ್ಣು ಕೊಡುವುದಿಲ್ಲವೆಂದು ನೀವು ತಿಳಿದಾಗ ಮಾತ್ರ ಅದನ್ನು ಕಡಿದು ನಾಶಮಾಡಬಹುದು. ಅವುಗಳಿಂದ ಯುದ್ಧಸಲಕರಣೆಗಳನ್ನು ಮಾಡಿಕೊಂಡು ನಿಮಗೆ ವಿರುದ್ಧವಾಗಿರುವ ಆ ಪಟ್ಟಣವು ನಾಶವಾಗುವ ತನಕ ಅದಕ್ಕೆ ಮುತ್ತಿಗೆ ಹಾಕಬೇಕು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath