ಕ್ರಿಶ್ಚಿಯನ್ ಧರ್ಮ
ಹಿಂದೆ

ಅಪೊಸ್ತಲರ ಕೃತ್ಯಗಳು 25

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಫೆಸ್ತನು ಅಧಿಕಾರ ವಹಿಸಿಕೊಂಡು, ಮೂರು ದಿನಗಳಾದ ನಂತರ ಕೈಸರೈಯದಿಂದ ಯೆರೂಸಲೇಮಿಗೆ ಹೋದನು.

2ಅಲ್ಲಿ ಮುಖ್ಯಯಾಜಕನೂ, ಯೆಹೂದ್ಯರಲ್ಲಿ ಪ್ರಮುಖರೂ, ಅವನಿಗೆ ಪೌಲನ ಮೇಲೆ ದೂರು ಹೇಳಿ,

3ನೀನು ದಯಮಾಡಿ ಅವನನ್ನು ಯೆರೂಸಲೇಮಿಗೆ ಕಳುಹಿಸಬೇಕೆಂದು ಪೌಲನ ಕೇಡಿಗಾಗಿ ಬಲವಾದ ಬಿನ್ನಹವನ್ನು ಮಾಡಿದರು. ಏಕೆಂದರೆ, ದಾರಿಯಲ್ಲಿ ಅವನನ್ನು ಕೊಲ್ಲುವುದಕ್ಕಾಗಿ ಹೊಂಚುಹಾಕಿಕೊಂಡಿದ್ದರು.

4ಫೆಸ್ತನು ಅವರಿಗೆ; ಪೌಲನು ಕೈಸರೈಯದಲ್ಲಿ ಸೆರೆಮನೆಯೊಳಗಿದ್ದಾನೆ, ನಾನೇ ಬೇಗ ಅಲ್ಲಿಗೆ ಹೊರಟು ಹೋಗಬೇಕೆಂದಿದ್ದೇನೆ.

5ಆದಕಾರಣ ನಿಮ್ಮಲ್ಲಿ ಪ್ರಮುಖರು, ನನ್ನೊಂದಿಗೆ ಬಂದು ಆ ಮನುಷ್ಯನಲ್ಲಿ ಅಪವಾದ ಏನಾದರೂ ಇದ್ದರೆ ಅವನ ಮೇಲೆ ತಪ್ಪುಹೊರಿಸಲಿ ಎಂದು ಹೇಳಿದನು.

6ಅವನು ಯೆರುಸಲೇಮಿನಲ್ಲಿ ಎಂಟು ಹತ್ತಕ್ಕಿಂತ ಹೆಚ್ಚು ದಿನಗಳು ನಿಲ್ಲದೆ ಕೈಸರೈಯಕ್ಕೆ ಹೋಗಿ ಮರುದಿನ ನ್ಯಾಯಸ್ಥಾನದಲ್ಲಿ ಕುಳಿತುಕೊಂಡು, ಪೌಲನನ್ನು ಕರತರಬೇಕೆಂದು ಅಪ್ಪಣೆಮಾಡಿದನು.

7ಅವನು ಬಂದ ಮೇಲೆ ಯೆರೂಸಲೇಮಿನಿಂದ ಬಂದಿದ್ದ ಯೆಹೂದ್ಯರು, ಅವನ ಸುತ್ತಲು ನಿಂತುಕೊಂಡು ತಾವು ಸಾಬೀತುಪಡಿಸಲಾರದ ಅನೇಕ ದೊಡ್ಡ ದೊಡ್ಡ ತಪ್ಪುಗಳನ್ನು ಹೊರಿಸುತ್ತಿರಲು,

8ಪೌಲನು; “ಯೆಹೂದ್ಯರ ಧರ್ಮಶಾಸ್ತ್ರದ ವಿಷಯದಲ್ಲಾಗಲಿ, ದೇವಾಲಯದ ವಿಷಯದಲ್ಲಾಗಲಿ, ಚಕ್ರವರ್ತಿಯ ವಿಷಯದಲ್ಲಾಗಲಿ ನಾನು ಯಾವ ತಪ್ಪನ್ನೂ ಮಾಡಲಿಲ್ಲವೆಂದು” ಪ್ರತ್ಯುತ್ತರ ಹೇಳಿದನು.

9ಆದರೆ ಫೆಸ್ತನು ಯೆಹೂದ್ಯರ ಪ್ರೀತಿಯನ್ನು ಸಂಪಾದಿಸಿಕೊಳ್ಳಬೇಕೆಂದು ಅಪೇಕ್ಷಿಸಿ ಪೌಲನನ್ನು; “ನೀನು ಯೆರೂಸಲೇಮಿಗೆ ಹೋಗಿ ಅಲ್ಲಿ ಈ ಕಾರ್ಯಗಳ ವಿಷಯವಾಗಿ ನನ್ನ ಮುಂದೆ ವಿಚಾರಿಸಲ್ಪಡುವುದಕ್ಕೆ ನಿನಗೆ ಮನಸ್ಸುಂಟೋ?” ಎಂದು ಕೇಳಲು, ಪೌಲನು;

10“ನಾನು ಕೈಸರನ ನ್ಯಾಯಸ್ಥಾನದ ಮುಂದೆ ನಿಂತಿದ್ದೇನೆ; ಇಲ್ಲಿಯೇ ನನ್ನ ವಿಚಾರಣೆಯಾಗತಕ್ಕದ್ದು. ಯೆಹೂದ್ಯರಿಗೆ ನಾನು ಅನ್ಯಾಯವೇನೂ ಮಾಡಲಿಲ್ಲ; ಅದು ನಿನಗೂ ಚೆನ್ನಾಗಿ ತಿಳಿದೇ ಇದೆ.

11ನಾನು ಅನ್ಯಾಯ ಮಾಡಿದವನಾಗಿ ಮರಣದಂಡನೆಗೆ ಕಾರಣವಾದ ಏನನ್ನಾದರೂ ಮಾಡಿದ್ದೇಯಾದರೆ ಮರಣ ದಂಡನೆಯನ್ನು ನಿರಾಕರಿಸುವುದಿಲ್ಲ. ಆದರೆ ಇವರು ನನ್ನ ಮೇಲೆ ಹೊರಿಸುವ ಅಪವಾದಗಳು ಪೊಳ್ಳಾಗಿದ್ದ ಪಕ್ಷದಲ್ಲಿ, ಯಾರೂ ನನ್ನನ್ನು ಇವರ ಕೈಗೊಪ್ಪಿಸಲಾಗದು. ನಾನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ” ಎಂದನು.

12ಆಗ, ಫೆಸ್ತನು ತನ್ನ ಸಭೆಯವರ ಸಂಗಡ ಸಮಾಲೋಚನೆಮಾಡಿದ ಮೇಲೆ ಪೌಲನಿಗೆ; “ನೀನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ ಎಂದೆಯಲ್ಲಾ, ಆದುದರಿಂದ ಕೈಸರನ ಬಳಿಗೇ ಹೋಗಬೇಕು” ಎಂದು ಹೇಳಿದನು.

13ಕೆಲವು ದಿನಗಳು ಕಳೆದನಂತರ ಅಗ್ರಿಪ್ಪರಾಜನೂ, ಬೆರ್ನಿಕೆರಾಣಿಯೂ, ಫೆಸ್ತನನ್ನು ಭೇಟಿಯಾಗುವುದಕ್ಕೆ ಕೈಸರೈಯಕ್ಕೆ ಬಂದರು.

14ಅವರು ಅನೇಕ ದಿನಗಳು ಅಲ್ಲಿ ತಂಗಿರಲಾಗಿ ಫೆಸ್ತನು ಪೌಲನ ಸಂಗತಿಯನ್ನು ರಾಜನಿಗೆ ತಿಳಿಸಿ ಹೇಳಿದ್ದೇನಂದರೆ; “ಫೇಲಿಕ್ಸನು ಬಿಟ್ಟುಹೋದ ಒಬ್ಬ ಸೆರೆಯವನು ಇದ್ದಾನೆ.

15ನಾನು ಯೆರೂಸಲೇಮಿನಲ್ಲಿದ್ದಾಗ, ಯೆಹೂದ್ಯರ ಮುಖ್ಯಯಾಜಕರೂ, ಹಿರಿಯರೂ ಅವನ ವಿಷಯವಾಗಿ ನನಗೆ ದೂರುಹೇಳಿ ಅವನಿಗೆ ವಿರುದ್ಧವಾಗಿ ತೀರ್ಪು ಆಗಬೇಕೆಂದು ಬೇಡಿಕೊಂಡರು.

16“ನಾನು ಅವರಿಗೆ; ಪ್ರತಿವಾದಿಯು ವಾದಿಗಳಿಗೆ, ಮುಖಾಮುಖಿಯಾಗಿ ನಿಂತು ತನ್ನ ಮೇಲೆ ಆರೋಪಿಸಿದ ದೋಷದ ವಿಷಯದಲ್ಲಿ ಪ್ರತಿವಾದಮಾಡುವುದಕ್ಕೆ ಎಡೆಕೊಡದೆ, ಅವನನ್ನು ಒಪ್ಪಿಸಿಬಿಡುವುದು ರೋಮಾಯರ ಪದ್ಧತಿಯಲ್ಲವೆಂದು” ಹೇಳಿದೆನು.

17ಅವರು ಇಲ್ಲಿಗೆ ಕೂಡಿಬಂದಾಗ ನಾನು ಸ್ವಲ್ಪವೂ ತಡಮಾಡದೆ ಮರುದಿನವೇ ನ್ಯಾಯಸ್ಥಾನದ ಮೇಲೆ ಕುಳಿತುಕೊಂಡು ಆ ಮನುಷ್ಯನನ್ನು ಕರತರಬೇಕೆಂದು ಅಪ್ಪಣೆಕೊಟ್ಟೆನು.

18ತಪ್ಪು ಹೊರಿಸುವವರು ನಿಂತುಕೊಂಡು ನಾನು ಭಾವಿಸಿದ್ದ ಅಪರಾಧಗಳಲ್ಲಿ ಒಂದನ್ನಾದರೂ ಅವನ ಮೇಲೆ ಹೊರಿಸದೆ,

19ಅವರ ಮತದ ವಿಷಯದಲ್ಲಿಯೂ, ಜೀವಿಸಿದ್ದಾನೆ ಎಂದು, ಪೌಲನು ಹೇಳುವ ಸತ್ತುಹೋದಂಥ ಯೇಸುವೆಂಬ ಒಬ್ಬನ ವಿಷಯದಲ್ಲಿಯೂ, ಅವನ ಮೇಲೆ ಕೆಲವು ವಿವಾದದ ಮಾತುಗಳನ್ನು ತಂದರು.

20ಇಂಥ ಕಾರ್ಯಗಳನ್ನು ಹೇಗೆ ವಿಚಾರಣೆಮಾಡಬೇಕೆಂಬುದು ನನಗೆ ತೋಚದೆ; ನೀನು ಯೆರೂಸಲೇಮಿಗೆ ಹೋಗಿ ಅಲ್ಲಿ ಇವುಗಳ ವಿಷಯವಾಗಿ ವಿಚಾರಣೆಹೊಂದುವುದಕ್ಕೆ ನಿನಗೆ ಮನಸ್ಸುಂಟೋ? ಎಂದು ನಾನು ಕೇಳಿದೆ.

21ಅದಕ್ಕೆ ಪೌಲನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುವ ತನಕ, ತನ್ನನ್ನು ಕಾಯಬೇಕೆಂದು ಕೇಳಿಕೊಂಡಾಗ ನಾನು ಕೈಸರನ ಬಳಿಗೆ ಕಳುಹಿಸುವ ತನಕ, ಅವನನ್ನು ಕಾಯುವುದಕ್ಕೆ ಅಪ್ಪಣೆಕೊಟ್ಟೆನು ಎಂದು ಹೇಳಿದನು.

22ಅದಕ್ಕೆ ಅಗ್ರಿಪ್ಪನು; “ಆ ಮನುಷ್ಯನು ಹೇಳಿಕೊಳ್ಳುವುದನ್ನು ಕೇಳುವುದಕ್ಕೆ ನನಗೂ ಮನಸ್ಸಿದೆ” ಎಂದು ಹೇಳಲು, ಫೆಸ್ತನು; “ನಾಳೆ ಕೇಳಬಹುದು” ಎಂದನು.

23ಮರುದಿನ ಅಗ್ರಿಪ್ಪರಾಜನೂ, ಬೆರ್ನಿಕೆರಾಣಿಯೂ ಬಹು ಆಡಂಬರದಿಂದ ಬಂದು ಸಹಸ್ರಾಧಿಪತಿಗಳ ಮತ್ತು ಪಟ್ಟಣದ ಮುಖಂಡರ ಸಂಗಡ ಸಭಾಂಗಣದೊಳಗೆ ಸೇರಿಬಂದಾಗ ಫೆಸ್ತನು ಅಪ್ಪಣೆ ಕೊಡಲು, ಪೌಲನನ್ನು ಕರತಂದರು.

24ಆಗ ಫೆಸ್ತನು; “ಅಗ್ರಿಪ್ಪರಾಜನೇ, ನಮ್ಮ ಸಂಗಡ ಕೂಡಿಬಂದಿರುವ ಎಲ್ಲಾ ಜನರೇ, ಈ ಮನುಷ್ಯನನ್ನು ನೋಡುತ್ತೀರಲ್ಲಾ, ಇವನ ವಿಷಯದಲ್ಲಿ ಯೆಹೂದ್ಯರೆಲ್ಲರೂ, ಇವನು ಇನ್ನು ಮೇಲೆ ಬದುಕಬಾರದೆಂದು ಕೂಗುತ್ತಾ ಯೆರೂಸಲೇಮಿನಲ್ಲಿಯೂ, ಇಲ್ಲಿಯೂ ನನ್ನನ್ನು ಬೇಡಿಕೊಂಡರು.

25ಇವನು ಮರಣದಂಡನೆಗೆ ಕಾರಣವಾದದ್ದೇನೂ ಮಾಡಲಿಲ್ಲವೆಂದು ನನಗೆ ಕಂಡುಬಂದಿತು. ಅವನೇ ಕೈಸರನಿಗೆ ವಿಜ್ಞಾಪನೆಮಾಡಿಕೊಂಡದ್ದರಿಂದ, ಇವನನ್ನು ಕೈಸರನ ಬಳಿಗೆ ಕಳುಹಿಸುವುದಕ್ಕೆ ತೀರ್ಮಾನಿಸಿದೆನು.

26ಆದರೆ ಇವನ ಕುರಿತಾಗಿ ಕೈಸರನಿಗೆ ಬರೆಯುವುದಕ್ಕೆ ನಿರ್ದಿಷ್ಟವಾದ ಕಾರಣವೇನೂ ಕಂಡು ಬರಲಿಲ್ಲ. ಸೆರೆಯಲ್ಲಿರುವವನ ವಿರುದ್ಧ ಆರೋಪಿಸಿರುವ ದೋಷಗಳನ್ನು ಸೂಚಿಸದೆ, ಅವನನ್ನು ಕಳುಹಿಸುವುದು ಯುಕ್ತವಲ್ಲವೆಂದು ನನಗೆ ತೋರುತ್ತದೆ.

27ಆದುದರಿಂದ ವಿಚಾರಣೆಯಾದ ಮೇಲೆ ಬರೆಯುವುದಕ್ಕೆ ಏನಾದರೂ ಸಿಕ್ಕೀತೆಂದು, ಇವನನ್ನು ನಿಮ್ಮ ಮುಂದೆ ಮುಖ್ಯವಾಗಿ ಅಗ್ರಿಪ್ಪರಾಜನೇ ನಿನ್ನ ಮುಂದೆ ಕರೆಯಿಸಿದ್ದೇನೆ” ಅಂದನು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath