ಕ್ರಿಶ್ಚಿಯನ್ ಧರ್ಮ
ಹಿಂದೆ

2 ಸಮುವೇಲನು 20

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಆಕಸ್ಮಾತ್ತಾಗಿ ಬೆನ್ಯಾಮೀನ ಕುಲದವನೂ, ಬಿಕ್ರೀಯ ಮಗನೂ ಆದ ಶೆಬನೆಂಬ ಒಬ್ಬ ದುಷ್ಟಮನುಷ್ಯನು ಅಲ್ಲಿ ಹೇಗೋ ಬಂದಿದ್ದನು. ಅವನು ಕಹಳೆಯನ್ನು ಊದಿ, “ಇಸ್ರಾಯೇಲರೇ, ದಾವೀದನಲ್ಲಿ ನಮಗೆ ಪಾಲಿಲ್ಲ. ಇಷಯನ ಮಗನಲ್ಲಿ ನಮಗೆ ಸ್ವತ್ತು ಇಲ್ಲ. ಪ್ರತಿಯೊಬ್ಬನೂ ನಮ್ಮ ನಮ್ಮ ನಿವಾಸಗಳಿಗೆ ಹೋಗೋಣ” ಎಂದನು.

2ಆಗ ಇಸ್ರಾಯೇಲರೆಲ್ಲರೂ ದಾವೀದನನ್ನು ಬಿಟ್ಟು, ಬಿಕ್ರೀಯ ಮಗನಾದ ಶೆಬನನ್ನು ಹಿಂಬಾಲಿಸಿದರು. ಆದರೆ ಯೆಹೂದ್ಯರು ತಮ್ಮ ಅರಸನನ್ನು ಅಂಟಿಕೊಂಡು ಯೊರ್ದನ್ ತಗ್ಗಿನಿಂದ ಯೆರೂಸಲೇಮಿನ ವರೆಗೂ ಅವನ ಜೊತೆಯಲ್ಲಿ ಹೋದರು.

3ಅರಸನಾದ ದಾವೀದನು ಯೆರೂಸಲೇಮಿಗೆ ಬಂದ ಮೇಲೆ ತಾನು ಅರಮನೆ ಕಾಯುವುದಕ್ಕೋಸ್ಕರ ಇಟ್ಟಿದ್ದ ತನ್ನ ಹತ್ತು ಮಂದಿ ಉಪಪತ್ನಿಯರನ್ನು ಪ್ರತ್ಯೇಕವಾಗಿ ಒಂದು ಮನೆಯಲ್ಲಿಟ್ಟು, ಅವರಿಗೆ ಅನ್ನವಸ್ತ್ರ ಕೊಡುತ್ತಿದ್ದನು. ಆದರೆ ಅವರನ್ನು ತಿರುಗಿ ಸಂಗಮಿಸಲಿಲ್ಲ. ಅವರು ಜೀವದಿಂದಿರುವವರೆಗೂ ವಿಧೆವೆಯರಂತಿದ್ದು ಕಾವಲಲ್ಲಿ ಇರಬೇಕಾಯಿತು.

4ಅನಂತರ ಅರಸನು ಅಮಾಸನಿಗೆ, “ನೀನು ಮೂರು ದಿನಗಳೊಳಗೆ ಯೆಹೂದ್ಯರನ್ನು ಕೂಡಿಸಿಕೊಂಡು ಇಲ್ಲಿ ಸಿದ್ಧವಾಗಿರು” ಎಂದು ಆಜ್ಞಾಪಿಸಿದನು.

5ಅಮಾಸನು ಹೋಗಿ ಯೆಹೂದ್ಯರನ್ನು ಕೂಡಿಸಿದನು. ಆದರೆ ಅವನು ನೇಮಕವಾದ ಸಮಯಕ್ಕೆ ಬಾರದೆ ತಡಮಾಡಿದ್ದರಿಂದ

6ಅರಸನು ಅಬೀಷೈಗೆ, “ಅಬ್ಷಾಲೋಮನಿಗಿಂತ ಬಿಕ್ರೀಯ ಮಗನಾದ ಶೆಬನು ನಮಗೆ ಹೆಚ್ಚಿನ ಕೇಡು ಮಾಡುವಂತಿದೆ. ಆದುದರಿಂದ ನೀನು ನನ್ನ ಸ್ವಂತ ಆಳುಗಳನ್ನು ಕರೆದುಕೊಂಡು ಹೋಗಿ ಅವನನ್ನು ಬೆನ್ನಟ್ಟಿಜಡಿಸು. ಇಲ್ಲವಾದರೆ ಅವನು ನಮ್ಮ ಕಣ್ಣಿಗೆ ಮರೆಯಾಗಿ ಹೋಗಿ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಸೇರಿಕೊಂಡಾನು” ಎಂದನು.

7ಆಗ ಅವನು ಯೋವಾಬನ ಸೈನಿಕರನ್ನೂ, ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲು ದಂಡುಗಳನ್ನೂ ಎಲ್ಲಾ ಶೂರರನ್ನೂ ಕರೆದುಕೊಂಡು ಬಿಕ್ರೀಯ ಮಗನಾದ ಶೆಬನನ್ನು ಬೆನ್ನಟ್ಟುವುದಕ್ಕೋಸ್ಕರ ಯೆರೂಸಲೇಮಿನಿಂದ ಹೊರಟರು.

8ಅವರು ಗಿಬ್ಯೋನಿನಲ್ಲಿದ್ದ ದೊಡ್ಡ ಕಲ್ಲನ್ನು ಸಮೀಪಿಸಿದಾಗ ಅಮಾಸನು ಅವನೆದುರು ಬಂದನು. ಯುದ್ಧವಸ್ತ್ರಗಳನ್ನು ಧರಿಸಿಕೊಂಡಿದ್ದ ಯೋವಾಬನೂ ಅವನನ್ನು ವಧಿಸುವುದಕ್ಕೆ ಹೋಗುತ್ತಿರುವಾಗ ಅವನ ಸೊಂಟಕ್ಕೆ ಕಟ್ಟಿದ ಕತ್ತಿಯೂ ಒರೆಯಿಂದ ಕೆಳಗೆ ಬಿದ್ದಿತು.

9ಅವನು ಅಮಾಸನನ್ನು, “ಸಹೋದರನೇ ಕ್ಷೇಮವೋ” ಎಂದು ಕೇಳಿ ಮುದ್ದಿಡುವುದಕ್ಕೋಸ್ಕರವೋ ಎಂಬಂತೆ ಬಲಗೈಯಿಂದ ಅವನ ಗಡ್ಡವನ್ನು ಹಿಡಿದು,

10ಕೈಯಲ್ಲಿದ್ದ ಕತ್ತಿಯನ್ನು ಗಮನಿಸದಿದ್ದ ಅಮಾಸನ ಹೊಟ್ಟೆಯೊಳಗೆ ತಿವಿದನು. ಅದರಿಂದ ಅವನ ಕರಳುಗಳೆಲ್ಲಾ ಹೊರಗೆ ಬಂದವು. ಎರಡನೆಯ ಸಾರಿ ತಿವಿಯಲಿಲ್ಲ. ಅಷ್ಟಕ್ಕೆ ಅವನು ಸತ್ತನು. ಯೋವಾಬನೂ ಅವನ ತಮ್ಮನಾದ ಅಬೀಷೈಯೂ ಮತ್ತು ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟುವುದಕ್ಕೋಸ್ಕರ ಮುಂದೆ ನಡೆದಾಗ,

11ಯೋವಾಬನ ಆಳುಗಳಲ್ಲೊಬ್ಬನು ಅಮಾಸನ ಹತ್ತಿರ ನಿಂತು, “ದಾವೀದ ಹಾಗೂ ಯೋವಾಬರ ಕಡೆಯವರು ಯೋವಾಬನನ್ನು ಹಿಂಬಾಲಿಸಲಿ” ಎಂದು ಕೂಗಿದನು

12ಮಾರ್ಗದ ಮಧ್ಯದಲ್ಲಿ ರಕ್ತದಲ್ಲಿ ಹೊರಳಾಡುತ್ತಿದ್ದ ಅಮಾಸನನ್ನು ನೋಡುತ್ತಾ ಎಲ್ಲಾ ಜನರು ನಿಂತರು. ಬಂದವರೆಲ್ಲರೂ ಅಲ್ಲೇ ನಿಲ್ಲುವುದನ್ನು ಕಂಡ ಆ ಆಳು ಅಮಾಸನ ಶವವನ್ನು ದಾರಿಯಿಂದ ಎಳೆದು, ಹೊಲದಲ್ಲಿ ಹಾಕಿ, ಅದನ್ನು ಬಟ್ಟೆಯಿಂದ ಮುಚ್ಚಿದನು.

13ಶವವನ್ನು ಆಚೆ ಹಾಕಿದ ನಂತರ ಜನರೆಲ್ಲರೂ ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟುವುದಕ್ಕೊಸ್ಕರ ಯೋವಾಬನನ್ನು ಹಿಂಬಾಲಿಸಿದರು.

14ಶೆಬನು ಇಸ್ರಾಯೇಲರ ಪ್ರಾಂತ್ಯಗಳಲ್ಲಿ ಸಂಚರಿಸುತ್ತಾ ಆಬೇಲ್, ಬೇತ್ಮಾಕಾಕ್ಕೂ ಬಂದನು. ಬೇರಿಯರೆಲ್ಲರೂ ಸೇರಿಕೊಂಡು ಅವನೊಡನೆ ಆ ಊರನ್ನು ಸೇರಿದರು.

15ಯೋವಾಬನ ಕಡೆಯವರು ಆಬೇಲ್ ಬೇತ್ಮಾಕಾಕ್ಕೆ ಊರಿಗೆ ಮುತ್ತಿಗೆ ಹಾಕಿ ಅದಕ್ಕೆ ಎದುರಾಗಿ ಊರು ಗೋಡೆಗೆ ಹತ್ತಿರ ಒಂದು ಮಣ್ಣಿನ ದಿಬ್ಬವನ್ನು ಮಾಡಿ, ಗೋಡೆಯನ್ನು ಕೆಡವಿಬಿಡುವುದಕ್ಕೆ ಪ್ರಯತ್ನಿಸಿದರು.

16ಆಗ ಆ ಊರಿನ ಬುದ್ಧಿವಂತೆಯಾದ ಒಬ್ಬಳು ಹೆಂಗಸು ಅವರಿಗೆ, “ಕೇಳಿರಿ, ದಯವಿಟ್ಟು ಕೇಳಿರಿ. ಯೋವಾಬನೊಂದಿಗೆ ನಾನು ಮಾತನಾಡುವುದಕ್ಕಾಗಿ ನನ್ನ ಬಳಿಗೆ ಬರಬೇಕೆಂದು ಹೇಳಿ” ಎಂದು ಕೂಗಿದಳು.

17ಯೋವಾಬನು ಬರಲು ಆ ಸ್ತ್ರೀಯು, “ನೀನು ಯೋವಾಬನೋ?” ಎಂದು ಅವನನ್ನು ಕೇಳಲು ಅವನು “ಹೌದು ನಾನೇ” ಎಂದು ಉತ್ತರ ಕೊಟ್ಟನು. ಆಕೆಯು, “ನಿನ್ನ ದಾಸಿಯ ಮಾತನ್ನು ಕೇಳು” ಅನ್ನಲು ಅವನು, “ಕೇಳುತ್ತೇನೆ” ಎಂದನು.

18ಆಗ ಆಕೆಯು, “ಪೂರ್ವಕಾಲದಲ್ಲಿ ಜನರು ಆಬೇಲಿನವರ ಆಲೋಚನೆಯನ್ನು ಕೇಳೋಣ ಅಂದುಕೊಂಡು ಅವರ ಆಲೋಚನೆಯ ಮೇರೆಗೆ ತೀರ್ಮಾನವನ್ನು ತೆಗೆದುಕೊಳ್ಳುತ್ತಿದ್ದರು.

19ನಮ್ಮ ಪಟ್ಟಣವು ಇಸ್ರಾಯೇಲರಲ್ಲಿ ಸಮಾಧಾನವುಳ್ಳದ್ದೂ, ರಾಜನಿಷ್ಠೆಯುಳ್ಳದ್ದೂ ಆಗಿದೆ. ನೀನು ಇಸ್ರಾಯೇಲರ ಪಟ್ಟಣಗಳಲ್ಲಿ ತಾಯಿಯೆಂದು ಹೆಸರುಗೊಂಡ ಈ ಪಟ್ಟಣವನ್ನು ಹಾಳುಮಾಡಬೇಕೆಂದಿರುವೆ. ನೀನು ಯೆಹೋವನ ಸ್ವತ್ತನ್ನು ನುಂಗಿಬಿಡುವುದೇಕೆ?” ಎಂದಳು.

20ಅದಕ್ಕೆ ಯೋವಾಬನು, “ನುಂಗಿಬಿಡುವುದಾಗಲಿ, ಹಾಳುಮಾಡುವುದಾಗಲಿ ನನಗೆ ದೂರವಾಗಿರಲಿ ಅಂಥದ್ದು ಬೇಡವೇ ಬೇಡ.

21ಎಫ್ರಾಯೀಮಿನ ಪರ್ವತಪ್ರದೇಶದ ಬಿಕ್ರೀಯ ಮಗನಾದ ಶೆಬನೆಂಬುವವನು ಅರಸನಾದ ದಾವೀದನಿಗೆ ವಿರೋಧವಾಗಿ ಕೈಯೆತ್ತಿದ್ದಾನೆ. ಅವನ್ನನ್ನೇ ಒಪ್ಪಿಸಿರಿ, ನಾನು ಊರನ್ನು ಬಿಟ್ಟು ಹೋಗುತ್ತೇನೆ” ಎಂದು ಹೇಳಿದನು. ಆ ಸ್ತ್ರೀಯು ಯೋವಾಬನಿಗೆ, “ನೋಡು ಈಗಲೇ ಅವನ ತಲೆಯು ಗೋಡೆಯ ಕಿಂಡಿಯಿಂದ ನಿನ್ನ ಕಡೆಗೆ ಒಗೆಯಲ್ಪಡುವುದು” ಎಂದು ಉತ್ತರ ಕೊಟ್ಟು,

22ತನ್ನ ಜನರ ಬಳಿಗೆ ಹೋಗಿ ಅವರಿಗೆ ವಿವೇಕದೊಡನೆ ಈ ಸಂಗತಿಯನ್ನು ತಿಳಿಸಿದಳು. ಅವರು ಬಿಕ್ರೀಯ ಮಗನಾದ ಶೆಬನ ತಲೆಯನ್ನು ಕತ್ತರಿಸಿ ಯೋವಾಬನಿದ್ದಲ್ಲಿಗೆ ಎಸೆದರು. ಕೂಡಲೆ ಅವನು ಕಹಳೆಯನ್ನು ಊದಿಸಿದನು. ಜನರು ಆ ಪಟ್ಟಣವನ್ನು ಬಿಟ್ಟು ತಮ್ಮ ತಮ್ಮ ನಿವಾಸಗಳಿಗೆ ಹೋದರು. ಯೋವಾಬನು ಹಿಂದಿರುಗಿ ಯೆರೂಸಲೇಮಿನಲ್ಲಿದ್ದ ಅರಸನ ಬಳಿಗೆ ಹೋದನು.

23ಯೋವಾಬನು ಇಸ್ರಾಯೇಲರ ಮುಖ್ಯ ಸೇನಾಧಿಪತಿ. ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲುದಂಡುಗಳ ಅಧಿಪತಿ.

24ಅದೋರಾಮನು ಬಿಟ್ಟೀಕೆಲಸ ಮಾಡಿಸುವವನು. ಅಹೀಲೂದನ ಮಗನಾದ ಯೆಹೋಷಾಫಾಟನು ಮುಖ್ಯ ದಾಖಲೆಮಾಡುವ ಲೇಖಕ.

25ಶೆವನು ಕಾರ್ಯದರ್ಶಿ, ಚಾದೋಕ್ ಮತ್ತು ಎಬ್ಯಾತಾರರು ಯಾಜಕರು.

26ಯಾಯೀರಿನವನಾದ ಈರನೂ ದಾವೀದನ ಯಾಜಕನು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath