2 ಅರಸುಗಳು 21
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಮನಸ್ಸೆಯು ಅರಸನಾದಾಗ ಹನ್ನೆರಡು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಐವತ್ತೈದು ವರ್ಷ ಆಳಿದನು. ಅವನ ತಾಯಿಯ ಹೆಸರು ಹೆಫ್ಚಿಬಾ.
2ಅವನು ಯೆಹೋವನು ಇಸ್ರಾಯೇಲರ ರಾಜ್ಯದಿಂದ ಅನ್ಯಜನಾಂಗಗಳ ಅಸಹ್ಯಕಾರ್ಯಗಳನ್ನು ಅವನು ಅನುಸರಿಸಿ ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.
3ತನ್ನ ತಂದೆಯಾದ ಹಿಜ್ಕೀಯನು ತೆಗೆದು ಹಾಕಿದ ಪೂಜಾಸ್ಥಳಗಳನ್ನು ತಿರುಗಿ ಸ್ಥಾಪಿಸಿ ಇಸ್ರಾಯೇಲರ ಅರಸನಾದ ಅಹಾಬನಂತೆ ಬಾಳದೇವತೆಗೋಸ್ಕರ ಯಜ್ಞವೇದಿಗಳನ್ನು ಕಟ್ಟಿಸಿ ಅಶೇರ ವಿಗ್ರಹ ಸ್ತಂಭಗಳನ್ನು ನಿಲ್ಲಿಸಿ ನಕ್ಷತ್ರಮಂಡಲಕ್ಕೆ ಕೈಮುಗಿದು ಆರಾಧಿಸಿದನು.
4ಇದಲ್ಲದೆ, “ಯೆರೂಸಲೇಮಿನಲ್ಲಿ ನನ್ನ ಹೆಸರನ್ನು ಸ್ಥಾಪಿಸುವೆನು” ಎಂದು ಯೆಹೋವನು ಯಾವುದನ್ನು ಕುರಿತು ಹೇಳಿದ್ದನೋ, ಆ ಯೆಹೋವನ ಆಲಯದಲ್ಲಿ ಮನಸ್ಸೆಯು ಯಜ್ಞವೇದಿಗಳನ್ನು ಕಟ್ಟಿಸಿದನು.
5ಯೆಹೋವನ ಆಲಯದ ಎರಡು ಪ್ರಾಕಾರಗಳಲ್ಲಿಯೂ ಸರ್ವ ನಕ್ಷತ್ರಮಂಡಲಗಳಿಗಾಗಿ ಯಜ್ಞವೇದಿಗಳನ್ನು ಕಟ್ಟಿಸಿದನು.
6ಇದಲ್ಲದೆ ಅವನು ತನ್ನ ಸ್ವಂತ ಮಗನನ್ನೇ ಆಹುತಿಕೊಟ್ಟನು. ಕಣಿಕೇಳಿಸುವುದು, ಮಾಟಮಂತ್ರಗಳನ್ನು ಮಾಡಿಸುವುದು, ಜೋತಿಷ್ಯ, ಮುಹೂರ್ತಗಳನ್ನು ನೋಡುವುದು ಮತ್ತು ಭೂತಪ್ರೇತಗಳನ್ನೂ ವಿಚಾರಿಸುವುದು, ಇವೇ ಮೊದಲಾದ ದುಷ್ಕೃತ್ಯಗಳಿಂದ ಯೆಹೋವನಿಗೆ ಕೋಪವನ್ನು ಎಬ್ಬಿಸಿದನು.
7ತಾನು ಮಾಡಿಸಿದ ಅಶೇರ ವಿಗ್ರಹಸ್ತಂಭವನ್ನು ಯೆಹೋವನ ಆಲಯದಲ್ಲಿ ಇಡಿಸಿದನು. ಯೆಹೋವನು ಆ ಆಲಯದ ವಿಷಯದಲ್ಲಿ ದಾವೀದನಿಗೂ ಮತ್ತು ಅವನ ಮಗನಾದ ಸೊಲೊಮೋನನಿಗೂ, “ಈ ಆಲಯದಲ್ಲಿಯೂ, ಇಸ್ರಾಯೇಲರ ಸಕಲ ಗೋತ್ರಗಳಲ್ಲಿಯೂ, ನಾನು ಆರಿಸಿಕೊಂಡ ಯೆರೂಸಲೇಮಿನಲ್ಲಿಯೂ ನನ್ನ ನಾಮವನ್ನು ಯುಗಯುಗಕ್ಕೂ ಇರುವಂತೆ ಮಾಡುವೆನು
8ಇಸ್ರಾಯೇಲರು ತಮಗೆ ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಧರ್ಮಶಾಸ್ತ್ರದ ನಿಯಮ ನಿಬಂಧನೆಗಳನ್ನು ಅನುಸರಿಸಿ, ನಡೆಯುವುದಾದರೆ, ನನ್ನ ನಾಮ ಮಹತ್ತು ಈ ದೇವಾಲಯದಲ್ಲಿಯೂ, ಇಸ್ರಾಯೇಲರ ಎಲ್ಲಾ ಊರುಗಳಲ್ಲಿಯೂ, ನನಗೆ ಇಷ್ಟವಾಗಿರುವ ಯೆರೂಸಲೇಮಿನಲ್ಲಿಯೂ ಸದಾಕಾಲ ಇರುವಂತೆ ಮಾಡುವೆನು, ಇಸ್ರಾಯೇಲರು ಇನ್ನು ಮುಂದೆ ದೇಶಭ್ರಷ್ಟರಾಗಿ ಅಲೆದಾಡದೆ ತಮ್ಮ ಪೂರ್ವಿಕರಿಗೆ ಕೊಡಲಾದ ದೇಶದಲ್ಲಿಯೇ ವಾಸವಾಗಿರುವಂತೆ ಮಾಡುವೆನು” ಎಂದು ಹೇಳಿದನು.
9ಆದರೆ ಇಸ್ರಾಯೇಲರು ಆತನ ಮಾತನ್ನು ಕೇಳದೆ ಮನಸ್ಸೆಯಿಂದ ಪ್ರೇರೇಪಿತರಾಗಿ ತಮ್ಮ ಮುಂದೆಯೇ ಯೆಹೋವನಿಂದ ಸಂಹೃತವಾದ ಅನ್ಯಜನಾಂಗಗಳಿಗಿಂತಲೂ ದುಷ್ಟರಾದರು.
10ಆಗ ಯೆಹೋವನು ತನ್ನ ಸೇವಕರಾದ ಪ್ರವಾದಿಗಳ ಮುಖಾಂತರವಾಗಿ,
11“ಯೆಹೂದ್ಯರ ಅರಸನಾದ ಮನಸ್ಸೆಯು ಮೊದಲು ಇದ್ದ ಅಮೋರಿಯರ ಕೃತ್ಯಗಳಿಗಿಂತಲೂ ಅಸಹ್ಯವಾದ ಕೃತ್ಯಗಳನ್ನು ನಡಿಸಿದ್ದರಿಂದಲೂ, ವಿಗ್ರಹಗಳನ್ನು ಪೂಜಿಸಲು ಯೆಹೂದ್ಯರನ್ನು ಪ್ರೇರೇಪಿಸಿದ್ದರಿಂದಲೂ,
12ಇಸ್ರಾಯೇಲಿನ ದೇವರಾದ ಯೆಹೋವನೆಂಬ ನಾನು ಯೆರೂಸಲೇಮಿನವರ ಮೇಲೆಯೂ, ಯೆಹೂದದವರ ಮೇಲೆಯೂ ಕೇಡನ್ನು ಬರಮಾಡುವೆನು. ಅದನ್ನು ಕೇಳುವವರ ಎರಡು ಕಿವಿಗಳು ಬಿರಿದು ಹೋಗುವವು.
13ನೂಲು ಮಟ್ಟಗೋಲು ಇವುಗಳಿಂದಲೋ ಎಂಬಂತೆ ಸಮಾರ್ಯವನ್ನೂ, ಅಹಾಬನ ಮನೆಯನ್ನೂ ನೆಲಸಮಮಾಡಿದಂತೆ, ಯೆರೂಸಲೇಮನ್ನೂ ಅದರಂತೆಯೇ ಮಾಡುವೆನು. ಒಬ್ಬನು ಪಾತ್ರೆಯನ್ನು ಒರಸಿ ಬೋರಲು ಹಾಕುವ ಹಾಗೆ ನಾನು ಯೆರೂಸಲೇಮನ್ನು ಒರಸಿ ಬೋರಲು ಹಾಕುವೆನು.
14ನನ್ನ ಪ್ರಜೆಗಳಲ್ಲಿ ಉಳಿದಿರುವವರನ್ನು ಶತ್ರುಗಳ ಕೈಗೆ ಒಪ್ಪಿಸುವೆನು. ಅವರ ಎಲ್ಲಾ ಶತ್ರುಗಳು ಬಂದು ಅವರ ಸ್ವತ್ತನ್ನು ಸುಲಿದು ಸೂರೆಮಾಡುವರು.
15ಅವರು ತಮ್ಮ ಪೂರ್ವಿಕರ ಕಾಲದಲ್ಲಿ ಐಗುಪ್ತದೇಶವನ್ನು ಬಿಟ್ಟುಬಂದರೂ ತಮ್ಮ ಪಾಪಗಳನ್ನು ಬಿಡದೆ ಇಂದಿನವರೆಗೂ ತಮ್ಮ ಪಾಪಗಳಿಂದ ನನ್ನನ್ನು ರೇಗಿಸುತ್ತಾ ಬಂದದ್ದೇ ಇದಕ್ಕೆ ಕಾರಣ” ಎಂದು ಹೇಳಿಸಿದನು.
16ಮನಸ್ಸೆಯು ಯೆಹೂದ್ಯರನ್ನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಲು ಪ್ರೇರೇಪಿಸಿದ್ದಲ್ಲದೆ ಯೆರೂಸಲೇಮನ್ನೆಲ್ಲಾ ನಿರಪರಾಧಿಗಳ ರಕ್ತದಿಂದ ತುಂಬಿಸಿದನು.
17ಮನಸ್ಸೆಯ ಉಳಿದ ಚರಿತ್ರೆಯೂ ಅವನ ಎಲ್ಲಾ ಕ್ರಿಯೆಗಳೂ, ಅವನು ಮಾಡಿದ ಪಾಪಕೃತ್ಯಗಳೂ ಯೆಹೂದ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.
18ಮನಸ್ಸೆಯು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಅವನ ಅರಮನೆಯಿರುವ ಉಜ್ಜನ ವನದಲ್ಲಿ ಸಮಾಧಿಮಾಡಿದರು. ಅವನಿಗೆ ನಂತರ ಅವನ ಮಗನಾದ ಆಮೋನನು ಅರಸನಾದನು.
19ಆಮೋನನು ಅರಸನಾದಾಗ ಅವನು ಇಪ್ಪತ್ತೆರಡು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ಎರಡು ವರ್ಷಗಳ ಕಾಲ ಆಳಿದನು. ಯೊಟ್ಬಾ ಊರಿನವಳೂ ಹಾರೂಚನ ಮಗಳೂ ಆದ ಮೆಷುಲ್ಲೆಮೆತ್ ಎಂಬಾಕೆಯು ಅವನ ತಾಯಿ.
20ಅವನು ತನ್ನ ತಂದೆಯಾದ ಮನಸ್ಸೆಯ ಮಾರ್ಗದಲ್ಲಿಯೇ ನಡೆದು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
21ತನ್ನ ತಂದೆಯ ಮಾರ್ಗದಲ್ಲಿ ನಡೆದು ಅವನು ಪೂಜಿಸಿದ ವಿಗ್ರಹಗಳನ್ನು ತಾನೂ ಪೂಜಿಸಿ ಅವುಗಳಿಗೆ ಅಡ್ಡಬಿದ್ದನು.
22ತನ್ನ ಪೂರ್ವಿಕರ ದೇವರಾದ ಯೆಹೋವನನ್ನೂ ಆರಾಧಿಸದೆ, ಆತನಿಗೆ ಮೆಚ್ಚಿಗೆಯಾಗುವಂತೆ ನಡೆಯುವ ಮಾರ್ಗವನ್ನೂ ಬಿಟ್ಟುಬಿಟ್ಟನು.
23ಮನಸ್ಸೆಯ ಸೇವಕರು ಆಮೋನನಿಗೆ ವಿರುದ್ಧವಾಗಿ ಒಳಸಂಚು ಮಾಡಿ ಅವನನ್ನು ಅರಸನ ಅರಮನೆಯಲ್ಲಿಯೇ ಕೊಂದುಹಾಕಿದರು.
24ಆದರೆ ದೇಶದ ಜನರು ಒಳಸಂಚುಮಾಡಿದವರನ್ನೆಲ್ಲಾ ಕೊಂದುಹಾಕಿ, ಆಮೋನನ ಮಗನಾದ ಯೋಷೀಯನನ್ನು ಅರಸನನ್ನಾಗಿ ಮಾಡಿದರು.
25ಆಮೋನನ ಉಳಿದ ಚರಿತ್ರೆಯೂ, ಅವನ ಕೃತ್ಯಗಳೂ ಯೆಹೂದ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
26ಆಮೋನನ ಶವವನ್ನು ಉಜ್ಜನ ವನದಲ್ಲಿ ಸಮಾಧಿಮಾಡಿದರು. ಅಲ್ಲಿ ಅವನು ಮೊದಲೇ ತನಗೋಸ್ಕರ ಒಂದು ಸಮಾಧಿಯನ್ನು ಸಿದ್ಧಪಡಿಸಿಟ್ಟಿದ್ದನು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath