ಕ್ರಿಶ್ಚಿಯನ್ ಧರ್ಮ
ಹಿಂದೆ

2 ಪೂರ್ವಕಾಲವೃತ್ತಾಂತ 8

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಯೆಹೋವನ ಆಲಯವನ್ನೂ ಮತ್ತು ತನ್ನ ಅರಮನೆಯನ್ನೂ ಕಟ್ಟಿಸಿ ಮುಗಿಸಿದನು.

2ಸೊಲೊಮೋನನು ಹೂರಾಮನಿಂದ ತನಗೆ ದೊರಕಿದ ಪಟ್ಟಣವನ್ನು ಪುನಃ ಕಟ್ಟಿಸಿ ಅವುಗಳಲ್ಲಿ ಇಸ್ರಾಯೇಲರು ವಾಸಿಸುವಂತೆ ಮಾಡಿದನು.

3ಅನಂತರ ಸೊಲೊಮೋನನು ಚೋಬ ರಾಜ್ಯದ ಹಮಾತಿಗೆ ಬಂದು ಅದನ್ನು ಸ್ವಾಧೀನಮಾಡಿಕೊಂಡನು.

4ಮರುಭೂಮಿಯಲ್ಲಿರುವ ತದ್ಮೋರ್ ಪಟ್ಟಣವನ್ನೂ ಹಮಾತಿನಲ್ಲಿ ತಾನು ಕಟ್ಟಿಸಿದ್ದ ಎಲ್ಲಾ ಉಗ್ರಾಣದ ಪಟ್ಟಣಗಳನ್ನೂ ಭದ್ರಪಡಿಸಿದನು.

5ಇದಲ್ಲದೆ ಮೇಲಿನ ಮತ್ತು ಕೆಳಗಿನ ಬೇತ್ಹೋರೋನ್ ಎಂಬ ಪಟ್ಟಣಗಳಿಗೆ ಪೌಳಿಗೋಡೆ, ಬಾಗಿಲು, ಅಗುಳಿ ಇವುಗಳನ್ನು ಸಿದ್ಧಪಡಿಸಿ ಕೋಟೆಗಳನ್ನಾಗಿ ಮಾಡಿಕೊಂಡನು.

6ಬಾಲಾತೊರು ಮತ್ತು ಎಲ್ಲಾ ಉಗ್ರಾಣದ ಪಟ್ಟಣ, ಯುದ್ಧರಥಗಳನ್ನಿರಿಸುವ ಪಟ್ಟಣಗಳನ್ನೂ, ರಾಹುತರ ಪಟ್ಟಣಗಳನ್ನೂ ಸೊಲೊಮೋನನು ಕಟ್ಟಿಸಿದನು. ಅಲ್ಲದೆ ಯೆರೂಸಲೇಮಿನಲ್ಲಿಯೂ, ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತ್ಯಗಳಲ್ಲಿಯೂ ತನಗೆ ಇಷ್ಟವಾದವುಗಳನ್ನೆಲ್ಲಾ ಕಟ್ಟಿಸಿದನು.

7ಇದಲ್ಲದೆ ಇಸ್ರಾಯೇಲರಿಂದ ಸಂಹೃತರಾಗದೆ, ಕಾನಾನ್ ದೇಶದಲ್ಲಿ ಉಳಿದಿದ್ದ ಹಿತ್ತಿಯ, ಅಮೋರಿಯ, ಪೆರಿಜೀಯ, ಹಿವ್ವಿಯ, ಯೆಬೂಸಿಯ,

8ಮೊದಲಾದ ಅನ್ಯ ಜನಾಂಗಗಳನ್ನು, ಇಸ್ರಾಯೇಲ್ಯರು ನಾಶಮಾಡದೆ ಉಳಿಸಿದ ಸಂತಾನದವರೆಲ್ಲರನ್ನೂ ಸೊಲೊಮೋನನು ಬಿಟ್ಟಿ ಕೆಲಸಕ್ಕಾಗಿ ನೇಮಿಸಿದನು. ಅವರು ಇಂದಿನವರೆಗೂ ಬಿಟ್ಟಿ ಕೆಲಸ ಮಾಡುವವರಾಗಿದ್ದಾರೆ.

9ಆದರೆ ಸೊಲೊಮೋನನು ಬಿಟ್ಟಿ ಕೆಲಸಕ್ಕಾಗಿ ಇಸ್ರಾಯೇಲರನ್ನು ನೇಮಕ ಮಾಡಿಕೊಳ್ಳಲಿಲ್ಲ. ಅವರನ್ನು ಸೈನಿಕರನ್ನಾಗಿಯೂ, ಅಧಿಪತಿಗಳನ್ನಾಗಿಯೂ, ಸರದಾರರನ್ನಾಗಿಯೂ, ರಥಾಶ್ವಬಲಗಳ ನಾಯಕರನ್ನಾಗಿಯೂ ನೇಮಿಸಿಕೊಂಡನು.

10ಈ ಇನ್ನೂರೈವತ್ತು ಮಂದಿ ಅರಸನಾದ ಸೊಲೊಮೋನನ ಮುಖ್ಯಾಧಿಕಾರಿಗಳೂ, ಪ್ರಜೆಗಳ ಮೇಲ್ವಿಚಾರಕರೂ ಆಗಿದ್ದರು.

11ಸೊಲೊಮೋನನು, “ಯಾವ ಯಾವ ಸ್ಥಳಗಳಲ್ಲಿ ಯೆಹೋವನ ಮಂಜೂಷವಿತ್ತೋ ಅವೆಲ್ಲವೂ ಪವಿತ್ರಸ್ಥಾನಗಳು. ಆದುದರಿಂದ ಇಸ್ರಾಯೇಲರ ಅರಸನಾದ ದಾವೀದನ ಮನೆಯಲ್ಲಿ ಫರೋಹನ ಪುತ್ರಿಯಾದ ನನ್ನ ಹೆಂಡತಿಯು ವಾಸಿಸಬಾರದು” ಅಂದುಕೊಂಡು ಆಕೆಯನ್ನು ದಾವೀದನಗರದಲ್ಲಿರಿಸದೆ, ತಾನು ಆಕೆಗಾಗಿ ಕಟ್ಟಿಸಿದ ಮಂದಿರಕ್ಕೆ ಕರೆದುಕೊಂಡು ಬಂದನು.

12ಆ ಕಾಲದಿಂದ ಸೊಲೊಮೋನನು, ತಾನು ಮಂಟಪದ ಮುಂದೆ ಕಟ್ಟಿಸಿದ ಯೆಹೋವನ ಯಜ್ಞವೇದಿಯ ಮೇಲೆ,

13ಮೋಶೆಯ ಆಜ್ಞೆಯಂತೆ ಸಬ್ಬತ್ ದಿನ, ಅಮಾವಾಸ್ಯೆ, ವಾರೋತ್ಸವ ಜಾತ್ರೆ ಇವುಗಳಲ್ಲಿಯೂ ಹುಳಿಯಿಲ್ಲದ ರೊಟ್ಟಿಗಳ ಹಬ್ಬ, ಪಂಚಾಶತ್ತಮ ದಿನದ ಹಬ್ಬ, ಪರ್ಣಶಾಲೆ ಹಬ್ಬ ಎಂಬ ಮೂರು ವಾರ್ಷಿಕ ಹಬ್ಬಗಳಲ್ಲಿಯೂ ಆಯಾ ದಿನಗಳಿಗೆ ನೇಮಕವಾದ ಯಜ್ಞಗಳನ್ನು ಸಮರ್ಪಿಸುತ್ತಿದ್ದನು.

14ಇದಲ್ಲದೆ, ತನ್ನ ತಂದೆಯಾದ ದಾವೀದನ ಆಜ್ಞೆಗೆ ಅನುಸಾರವಾಗಿ ಯಾಜಕ ವರ್ಗಗಳನ್ನೂ, ಲೇವಿಯರನ್ನೂ ಅವರವರ ಸೇವಾವೃತ್ತಿಗೆ ನೇಮಿಸಿದನು. ಲೇವಿಯರು ಆಯಾ ದಿನದ ನೇಮದ ಪ್ರಕಾರ ದೇವರನ್ನು ಸ್ತುತಿಸಲು, ಯಾಜಕರ ಕೈಕೆಳಗೆ ಸೇವೆಮಾಡುತ್ತಲೂ ದ್ವಾರಪಾಲಕರು ತಮ್ಮ ತಮ್ಮ ವರ್ಗಗಳ ಸರದಿಯ ಮೇಲೆ ಆಯಾ ಬಾಗಿಲುಗಳನ್ನು ಕಾಯುತ್ತಲೂ ಇರಬೇಕಾಗಿತ್ತು. ದೇವರ ಮನುಷ್ಯನಾದ ದಾವೀದ ರಾಜನ ಅಪ್ಪಣೆ ಇದೇ ಆಗಿತ್ತು.

15ರಾಜನು ಯಾಜಕರನ್ನೂ, ಲೇವಿಯರನ್ನೂ, ಭಂಡಾರಗಳನ್ನೂ ಕುರಿತು ಕೊಟ್ಟ ಅಪ್ಪಣೆಯನ್ನು ಅವರು ಸ್ವಲ್ಪವಾದರೂ ಮೀರಲಿಲ್ಲ.

16ಈ ಪ್ರಕಾರ ಆಸ್ತಿವಾರ ಮೊದಲುಗೊಂಡು ಸಮಾಪ್ತಿಯವರೆಗೂ ಸೊಲೊಮೋನನ ಎಲ್ಲಾ ಕೆಲಸ ಕಾರ್ಯಗಳೂ ಮುಗಿದು ಯೆಹೋವನ ಆಲಯವು ಪೂರ್ಣಗೊಂಡಿತ್ತು.

17ಆನಂತರ, ಸೊಲೊಮೋನನು ಎದೋಮ್ ದೇಶದ ಸಮುದ್ರ ತೀರದಲ್ಲಿರುವ ಎಚ್ಯೋನ್ಗೆಬೆರ್ ಹಾಗೂ ಏಲೋತ್ ಎಂಬ ಊರುಗಳಿಗೆ ಹೋದನು.

18ಹೂರಾಮನು ಅವನಿಗೆ ತನ್ನ ಆಳುಗಳ ಮುಖಾಂತರ ಹಡುಗುಗಳನ್ನು ಕಳುಹಿಸಿದ್ದಲ್ಲದೆ, ಸಮುದ್ರ ಪ್ರಯಾಣದಲ್ಲಿ ನಿಪುಣರಾದ ನಾವಿಕರನ್ನು ಕಳುಹಿಸಿದನು. ಅವರು ಸೊಲೊಮೋನನ ಸೇವಕರೊಡನೆ ಓಫೀರಿಗೆ ಪ್ರಯಾಣಮಾಡಿ ಅಲ್ಲಿಂದ ಅರಸನಾದ ಸೊಲೊಮೋನನಿಗೆ ನಾನೂರೈವತ್ತು ತಲಾಂತು ಬಂಗಾರವನ್ನು ತಂದುಕೊಟ್ಟರು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath