1 ಸಮುವೇಲನು 30
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ದಾವೀದನೂ ಅವನ ಜನರೂ ಮೂರನೆಯ ದಿನ ಚಿಕ್ಲಗ್ ಊರನ್ನು ಮುಟ್ಟಿದರು. ಅಷ್ಟರೊಳಗೆ ಅಮಾಲೇಕ್ಯರು ದಂಡೆತ್ತಿ ದಕ್ಷಿಣ ಪ್ರಾಂತ್ಯಕ್ಕೂ ಚಿಕ್ಲಗ್ ಊರಿಗೂ ಬಂದು ಚಿಕ್ಲಗ್ ಊರನ್ನು ಸುಟ್ಟು ಹಾಳುಮಾಡಿ,
2ಆ ಊರಿನಲ್ಲಿದ್ದ ಎಲ್ಲಾ ಹೆಂಗಸರನ್ನೂ ಚಿಕ್ಕವರನ್ನೂ ದೊಡ್ಡವರನ್ನೂ ಸೆರೆಹಿಡಿದುಕೊಂಡು ಹೋಗಿದ್ದರು.
3ಆದರೆ ಯಾರನ್ನೂ ಕೊಂದಿರಲಿಲ್ಲ. ದಾವೀದನೂ ಅವನ ಜನರೂ ತಮ್ಮ ಊರಿಗೆ ಬಂದಾಗ ಅದು ಸುಡಲ್ಪಟ್ಟಿರುವುದನ್ನೂ, ತಮ್ಮ ಹೆಂಡತಿಯರೂ ಗಂಡುಮಕ್ಕಳೂ ಸೆರೆಯಾಗಿ ಒಯ್ಯಲ್ಪಟ್ಟಿರುವುದನ್ನೂ ಕಂಡು
4ಅವರು ತಮ್ಮಿಂದಾಗುವಷ್ಟು ಕಾಲ ಅತ್ತರು.
5ದಾವೀದನ ಇಬ್ಬರು ಹೆಂಡತಿಯರಾದ ಇಜ್ರೇಲಿನವಳಾದ ಅಹೀನೋವಮಳೂ, ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಸೆರೆಯಾಗಿ ಹೋಗಿದ್ದರು.
6ಇದಲ್ಲದೆ ಜನರು ತಮ್ಮ ಗಂಡು ಹೆಣ್ಣು ಮಕ್ಕಳಿಗಾಗಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡು, ದಾವೀದನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದುದರಿಂದ ಅವನು ಬಲು ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ಅವನು ತನ್ನ ದೇವರಾದ ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡು
7ಅಹೀಮೆಲೆಕನ ಮಗನಾದ ಎಬ್ಯಾತಾರನಿಗೆ, “ದಯವಿಟ್ಟು ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ” ಎಂದು ಹೇಳಲು ಅವನು ತಂದನು.
8ಆಗ ದಾವೀದನು ಯೆಹೋವನನ್ನು, “ನಾನು ಆ ಗುಂಪನ್ನು ಹಿಂದಟ್ಟಬಹುದೋ, ಅದು ನನಗೆ ಸಿಕ್ಕುವುದೋ?” ಎಂದು ಕೇಳಲು ಆತನು, “ಹಿಂದಟ್ಟು, ಅದು ನಿನಗೆ ಸಿಕ್ಕುವುದು, ನೀನು ಎಲ್ಲರನ್ನೂ ಬಿಡಿಸಿಕೊಂಡು ಬರುವಿ” ಎಂದು ಉತ್ತರಕೊಟ್ಟನು.
9ದಾವೀದನೂ ಅವನ ಸಂಗಡ ಇದ್ದ ಆರುನೂರು ಮಂದಿ ಸೈನಿಕರೂ ಹೊರಟು ಬೆಸೋರ್ ಹಳ್ಳಕ್ಕೆ ಬಂದ ಮೇಲೆ ಆ ಹಳ್ಳದಿಂದ ಮೇಲೆ ಹತ್ತಲಾರದಷ್ಟು
10ಆಯಾಸಗೊಂಡ ಇನ್ನೂರು ಜನರು ಅಲ್ಲೇ ನಿಂತುಬಿಟ್ಟದ್ದರಿಂದ, ದಾವೀದನು ಉಳಿದ ನಾನೂರು ಜನರನ್ನೇ ಕರೆದುಕೊಂಡು ಮುಂದೆ ನಡೆದನು.
11ಅವನ ಜನರು ಅಡವಿಯಲ್ಲಿ ಒಬ್ಬ ಐಗುಪ್ತನು ಬಿದ್ದಿರುವುದನ್ನು ಕಂಡು, ಅವನನ್ನು ದಾವೀದನ ಬಳಿಗೆ ತಂದು, ಅವನಿಗೆ ರೊಟ್ಟಿ ತಿನ್ನಿಸಿ, ನೀರು ಕುಡಿಸಿ,
12ಅಂಜೂರ ಹಣ್ಣಿನ ಉಂಡೆಯನ್ನೂ ಎರಡು ದ್ರಾಕ್ಷಿ ಗೊಂಚಲುಗಳನ್ನು ಕೊಟ್ಟರು. ಮೂರು ದಿನ ಹಗಲಿರುಳು ಅನ್ನಪಾನವಿಲ್ಲದೆ ಬಹಳವಾಗಿ ಬಳಲಿಹೋಗಿದ್ದ ಇವನು ಅವುಗಳನ್ನು ತಿನ್ನುತ್ತಲೇ ಚೇತರಿಸಿಕೊಂಡನು.
13ಆಗ ದಾವೀದನು ಅವನನ್ನು, “ನೀನು ಯಾರ ಕಡೆಯವನು, ಎಲ್ಲಿಯವನು?” ಎಂದು ಕೇಳಿದನು. ಅವನು “ನಾನು ಐಗುಪ್ತನು, ಒಬ್ಬ ಅಮಾಲೇಕ್ಯನ ದಾಸನು. ನಾನು ಮೂರು ದಿನಗಳ ಹಿಂದೆ ಅಸ್ವಸ್ಥನಾಗಿ ಮಲಗಿಕೊಂಡಿದ್ದರಿಂದ ನನ್ನ ಯಜಮಾನನು ನನ್ನನ್ನು ಬಿಟ್ಟುಹೋದನು.
14ನಾವು ಕೆರೇತ್ಯರೂ ಯೆಹೂದ್ಯರೂ ಕಾಲೇಬ್ಯರೂ ಇರುವ ದಕ್ಷಿಣ ಪ್ರಾಂತ್ಯವನ್ನು ಸೂರೆಮಾಡಿ ಚಿಕ್ಲಗ್ ಊರನ್ನು ಸುಟ್ಟುಬಿಟ್ಟು ಬಂದೆವು” ಎಂದು ಉತ್ತರ ಕೊಟ್ಟನು.
15ಅನಂತರ ದಾವೀದನು, “ನೀನು ನನ್ನನ್ನು ಆ ಗುಂಪು ಇರುವ ಸ್ಥಳಕ್ಕೆ ಕರೆದುಕೊಂಡು ಹೋಗುವಿಯೋ?” ಎಂದು ಕೇಳಿದ್ದಕ್ಕೆ ಅವನು, “ನೀನು ನನ್ನನ್ನು ಕೊಲ್ಲುವುದಿಲ್ಲವೆಂದೂ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರೆ ನಿನ್ನನ್ನು ಆ ಗುಂಪಿನವರ ಬಳಿಗೆ ಕರಕೊಂಡು ಹೋಗುವೆನು” ಅಂದನು.
16ಅವರು ಅಲ್ಲಿಗೆ ಹೋದಾಗ ಆ ಗುಂಪಿನವರು ತಮಗೆ ಫಿಲಿಷ್ಟಿಯ ಮತ್ತು ಯೆಹೂದ ಪ್ರಾಂತ್ಯಗಳಲ್ಲಿ ದೊರಕಿದ ದೊಡ್ಡ ಕೊಳ್ಳೆಯ ನಿಮಿತ್ತವಾಗಿ ಸಂತೋಷಿಸಿ, ಉಂಡು ಕುಡಿದು, ಕುಣಿದಾಡುತ್ತಾ ಅಲ್ಲಿನ ಬೈಲಿನಲ್ಲಿ ವ್ಯಾಪಿಸಿಕೊಂಡಿದ್ದರು.
17ದಾವೀದನು ಮರುದಿನ ಹೊತ್ತಾರೆಯಿಂದ ಸೂರ್ಯಸ್ತಮಾನದವರೆಗೂ ಅವರನ್ನು ಸಂಹರಿಸಿದನು. ಒಂಟೆಗಳನ್ನು ಹತ್ತಿ ಓಡಿಹೋದ ನಾನೂರು ಮಂದಿ ಪ್ರಾಯಸ್ಥರ ಹೊರತು ಬೇರೆ ಯಾರೂ ತಪ್ಪಿಸಿಕೊಳ್ಳಲಿಲ್ಲ.
18ದಾವೀದನು ತನ್ನ ಇಬ್ಬರು ಹೆಂಡತಿಯರನ್ನೂ ಅಮಾಲೇಕ್ಯರು ಒಯ್ದಿದ್ದ ಎಲ್ಲಾ ಕೊಳ್ಳೆಯನ್ನೂ ಬಿಡಿಸಿಕೊಂಡನು.
19ಅಮಾಲೇಕ್ಯರು ಒಯ್ದಿದ್ದ ಚಿಕ್ಕ ದೊಡ್ಡ ಒಡವೆಗಳಾಗಲಿ, ಗಂಡು ಹೆಣ್ಣು ಮಕ್ಕಳಾಗಲಿ ಒಂದನ್ನೂ ಬಿಡದೆ ಎಲ್ಲವನ್ನೂ ತಿರುಗಿ ತೆಗೆದುಕೊಂಡು ಬಂದನು.
20ಇದಲ್ಲದೆ ದಾವೀದನು ಶತ್ರುಗಳ ದನಕುರಿಗಳನ್ನೂ ತೆಗೆದುಕೊಂಡನು. ಅವನ ಜನರು, “ಇವು ದಾವೀದನ ಕೊಳ್ಳೆ” ಎಂದು ಹೇಳಿ ಅವುಗಳನ್ನು ತಮ್ಮ ದನಗಳ ಮುಂದಾಗಿ ಹೊಡೆದುಕೊಂಡು ಬಂದರು.
21ಅನಂತರ ದಾವೀದನು ಆಯಾಸದಿಂದ ತನ್ನ ಹಿಂದೆ ಬರಲಾರದೆ ಬೆಸೋರ್ ಹಳ್ಳದ ಹತ್ತಿರ ಉಳಿದಿದ್ದ ಇನ್ನೂರು ಜನರ ಬಳಿಗೆ ಹೋಗುತ್ತಿರುವಾಗ, ಅವರು ಅವನನ್ನೂ ಅವನೊಂದಿಗಿದ್ದ ಜನರನ್ನೂ ಸಂಧಿಸಿ, ಅವರ ಕ್ಷೇಮಸಮಾಚಾರವನ್ನು ವಿಚಾರಿಸಿದರು.
22ಆಗ ದಾವೀದನ ಜೊತೆಯಲ್ಲಿ ಹೋಗಿದ್ದ ಜನರಲ್ಲಿ ದುಷ್ಟರೂ ಮೂರ್ಖರೂ ಆದ ಕೆಲವು ಮಂದಿ, “ಇವರು ನಮ್ಮ ಸಂಗಡ ಬಾರದ್ದರಿಂದ, ನಾವು ತೆಗೆದುಕೊಂಡು ಬಂದಿರುವ ಕೊಳ್ಳೆಯಲ್ಲಿ ಇವರಿಗೆ ಏನೂ ಸಿಕ್ಕುವುದಿಲ್ಲ. ತಮ್ಮ ತಮ್ಮ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೋಗಿಬಿಡಲಿ” ಎಂದರು.
23ಆಗ ದಾವೀದನು ಅವರಿಗೆ, “ಸಹೋದರರೇ, ಯೆಹೋವನು ನಮ್ಮನ್ನು ಕಾಪಾಡಿ ನಮಗೆ ವಿರೋಧವಾಗಿ ಬಂದಿದ್ದ ಶತ್ರುಗಳ ಗುಂಪನ್ನು ನಮ್ಮ ಕೈಗೆ ಒಪ್ಪಿಸಿ ನಮಗೆ ಇಷ್ಟನ್ನೆಲ್ಲಾ ಕೊಟ್ಟ ಮೇಲೆ ನೀವು ಹೀಗೆ ಮಾಡಬಾರದು.
24ಈ ವಿಷಯದಲ್ಲಿ ನಿಮ್ಮ ಮಾತನ್ನು ಯಾರು ಕೇಳುವರು? ಯುದ್ಧಮಾಡಿದವನಿಗೆ ಸಿಕ್ಕುವಷ್ಟು ಪಾಲು ಸಾಮಾನು ಕಾಯುವವನಿಗೂ ಸಿಕ್ಕಬೇಕು. ಉಭಯರಿಗೂ ಸಮಭಾಗವಾಗಬೇಕು” ಎಂದು ಉತ್ತರಕೊಟ್ಟನು.
25ದಾವೀದನು ಇಸ್ರಾಯೇಲರಲ್ಲಿ ಇದನ್ನು ಕಟ್ಟಳೆಯಾಗಿ ನೇಮಿಸಿದ್ದರಿಂದ ಇಂದಿನವರೆಗೂ ಹಾಗೆಯೇ ನಡೆಯುತ್ತಾ ಬಂದಿದೆ.
26ದಾವೀದನು ಚಿಕ್ಲಗ್ ಊರಿಗೆ ಬಂದನಂತರ ತನ್ನ ಸ್ನೇಹಿತರಾದ ಯೆಹೂದದ ಹಿರಿಯರಿಗೆ ಕೊಳ್ಳೆಯ ಒಂದು ಭಾಗವನ್ನು ಕಳುಹಿಸಿ, “ಇಗೋ ಯೆಹೋವನ ಶತ್ರುಗಳನ್ನು ಸೂರೆಮಾಡಿ ತಂದವುಗಳಲ್ಲಿ ಇದು ನಿಮಗೆ ಬಹುಮಾನವಾಗಿರಲಿ” ಎಂದು ಹೇಳಿದನು.
27ಬಹುಮಾನ ಹೊಂದಿದವರು ಯಾರೆಂದರೆ: ಬೇತೇಲಿನವರು, ದಕ್ಷಿಣ ಪ್ರಾಂತ್ಯದ ರಾಮೋತಿನವರು, ಯತ್ತೀರಿನವರು,
28ಅರೋಯೇರಿನವರು ಸಿಪ್ಮೋತಿನವರು ಎಷ್ಟೆಮೋವದವರು,
29ರಾಕಾಲಿನವರು, ಎರಹ್ಮೇಲ್ಯರು, ಕೇನ್ಯರು,
30ಹೊರ್ಮದವರು, ಬೋರಾಷಾನಿನವರು, ಅತಾಕಿನವರು,
31ಹೆಬ್ರೋನಿನವರು ಮತ್ತು ದಾವೀದನೂ ಅವನ ಜನರೂ ಸಂಚರಿಸುತ್ತಿದ್ದ ಇತರ ಎಲ್ಲಾ ಸ್ಥಳಗಳವರು ಇವರೇ.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath