1 ಪೂರ್ವಕಾಲವೃತ್ತಾಂತ 8
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಬೆನ್ಯಾಮೀನನ ಮಕ್ಕಳು: ಬೆಳನು ಚೊಚ್ಚಲ ಮಗ. ಅಷ್ಬೇಲ್ ಎರಡನೆಯವನು, ಅಹ್ರಹ ಮೂರನೆಯವನು,
2ನೋಹ ನಾಲ್ಕನೆಯವನು, ರಾಫ ಐದನೆಯವನು.
3ಬೆಳನ ಮಕ್ಕಳು: ಅದ್ದಾರ್, ಗೇರ, ಅಬೀಹೂದ್,
4ಅಬೀಷೂವ, ನಾಮಾನ್, ಅಹೋಹ,
5ಗೇರ, ಶೆಪೂಫಾನ್ ಮತ್ತು ಹೂರಾಮ್ ಎಂಬವರು.
6ಏಹೂದನ ಸಂತಾನದವರು ಗೆಬ ಊರಿನ ಎಲ್ಲಾ ಕುಟುಂಬಗಳಲ್ಲಿ ಪ್ರಮುಖರು.
7ನಾಮಾನ್, ಅಹೀಯ ಮತ್ತು ಗೇರ ಇವರು ಮಾನಹತಿಗೆ ಒಯ್ಯಲ್ಪಟ್ಟರು. ಏಹೂದನು ಉಚ್ಚ ಮತ್ತು ಅಹೀಹುದ್ ಇವರನ್ನು ಪಡೆದನು.
8ಶಹರಯಿಮನು ತನ್ನ ಹೆಂಡತಿಯರಾದ ಹೂಷೀಮ್ ಮತ್ತು ಬಾರ ಎಂಬವರನ್ನು ತ್ಯಜಿಸಿ,
9ಮತ್ತೊಬ್ಬ ಹೆಂಡತಿಯಾದ ಹೋದೆಷಳಿಂದ ಮೋವಾಬ್ ದೇಶದಲ್ಲಿ ಯೋವಾಬ್, ಚಿಬ್ಯ, ಮೇಷ, ಮಲ್ಕಾಮ್, ಯೆಯೂಚ್, ಸಾಕ್ಯ ಮತ್ತು ಮಿರ್ಮ ಇವರನ್ನು ಪಡೆದನು.
10ಶಹರಯಿಮನ ಮಕ್ಕಳಾದ ಇವರು ಗೋತ್ರ ಪ್ರಧಾನರಾಗಿದ್ದರು.
11ಇದಲ್ಲದೆ ಅವನು ಹುಷೀಮಳಿಂದ ಅಬೀಟೂಬ್, ಎಲ್ಪಾಲ ಇವರನ್ನು ಪಡೆದನು.
12ಎಲ್ಪಾಲನ ಮಕ್ಕಳು ಏಬರ್, ಮಿಷ್ಷಾಮ್ ಮತ್ತು ಶೆಮೆದ್. ಇವರೂ ಓನೋ, ಲೋದ್ ಎಂಬ ಪಟ್ಟಣಗಳನ್ನೂ, ಅವುಗಳಿಗೆ ಸೇರಿದ ಗ್ರಾಮಗಳನ್ನೂ ಕಟ್ಟಿಸಿದರು.
13ಅಯ್ಯಾಲೋನ್ ಊರಿನ ಕುಟುಂಬಗಳಲ್ಲಿ ಪ್ರಮುಖರೂ, ಗತ್ ಊರಿನವರನ್ನು ಓಡಿಸಿ ಬಿಟ್ಟವರು ಬೆರೀಯ ಮತ್ತು ಶಮ.
14ಅಹಿಯೋ, ಶಾಷಕ್, ಯೆರೇಮೋತ್,
15ಜೆಬದ್ಯ, ಅರಾದ್, ಎದೆರ್,
16ಮಿಕಾಯೇಲ್, ಇಷ್ಪ ಮತ್ತು ಯೋಹ ಬೆರೀಯನ ಮಕ್ಕಳು.
17ಎಲ್ಪಾಲನ ಮಕ್ಕಳು ಜೆಬದ್ಯ, ಮೆಷುಲ್ಲಾಮ್, ಹೆಬೆರ್, ಹಿಜ್ಕೀ,
18ಇಷ್ಮೆರೈ, ಇಜ್ಲೀಯ ಮತ್ತು ಯೋಬಾಬ್.
19ಯಾಕೀಮ್, ಜಿಕ್ರೀ, ಜಬ್ದೀ,
20ಎಲೀಗೇನೈ, ಚಿಲ್ಲೆತೈ, ಎಲೀಯೇಲ್,
21ಆದಾಯ, ಬೆರಾಯ ಮತ್ತು ಶಿಮ್ರಾತ್ ಇವರು ಶಮ್ಮೀಯ ಮಕ್ಕಳು.
22ಇಷ್ಪಾನ್, ಏಬೆರ್, ಎಲೀಯೇಲ್,
23ಅಬ್ದೋನ್, ಜಿಕ್ರೀ, ಹಾನಾನ್, ಹನನ್ಯ, ಏಲಾಮ್, ಅನೆತೋತೀಯ,
25ಇಫ್ದೆಯಾಹ ಮತ್ತು ಪೆನೂವೇಲನು ಇವರು ಶಾಷಕನ ಮಕ್ಕಳು.
26ಶಂಷೆರೈ, ಶೆಹರ್ಯ, ಅತಲ್ಯ,
27ಯಾರೆಷ್ಯ, ಏಲೀಯ ಮತ್ತು ಜಿಕ್ರೀ ಇವರು ಯೆರೋಹಾಮನ ಮಕ್ಕಳು.
28ಇವರು ವಂಶಾವಳಿಯ ಪ್ರಕಾರ ಗೋತ್ರಪ್ರಧಾನರೂ, ಯೆರೂಸಲೇಮಿನಲ್ಲಿ ವಾಸಿಸುವವರೂ ಆಗಿದ್ದರು.
29ಗಿಬ್ಯೋನಿನಲ್ಲಿ ಗಿಬ್ಯೋನ್ಯರ ಮೂಲಪುರುಷನಾದ ಯೆಗೂವೇಲ್ ವಾಸಿಸುತ್ತಿದ್ದನು. ಅವನ ಹೆಂಡತಿಯ ಹೆಸರು ಮಾಕ.
30ಚೊಚ್ಚಲ ಮಗನು ಅಬ್ದೋನನು, ತರುವಾಯ ಹುಟ್ಟಿದವರು, ಚೂರ್, ಕೀಷ್, ಬಾಳ್, ನಾದಾಬ್,
31ಗೆದೋರ್, ಅಹ್ಯೋ ಮತ್ತು ಜೆಕೆರ್ ಇವರು.
32ಮಿಕ್ಲೋತನು ಶಿಮಾಹನನ್ನು ಪಡೆದನು. ಇವರು ತಮ್ಮ ಗೋತ್ರದ ಕುಟುಂಬದವರೊಂದಿಗೆ ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದರು.
33ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್ ಮತ್ತು ಎಷ್ಬಾಳ ಇವರನ್ನು ಪಡೆದನು.
34ಯೋನಾತಾನನು ಮೆರೀಬ್ಬಾಳನನ್ನು ಪಡೆದನು; ಮೆರೀಬ್ಬಾಳನು ಮೀಕನನ್ನು ಪಡೆದನು.
35ಮೀಕನ ಮಕ್ಕಳು: ಪೀತೋನ್, ಮೆಲೆಕ್, ತರೇಯ, ಆಹಾಜ್ ಇವರೇ.
36ಆಹಾಜನು ಯೆಹೋವದ್ದಾಹನನ್ನು ಪಡೆದನು. ಯೆಹೋವದ್ದಾಹನು ಆಲೆಮೆತ್, ಅಜ್ಮಾವೆತ್, ಜಿಮ್ರೀ ಇವರನ್ನು ಪಡೆದನು.
37ಜಿಮ್ರೀಯು ಮೋಚನನ್ನು ಪಡೆದನು. ಮೋಚನು ಬಿನ್ನನನ್ನು ಪಡೆದನು. ಇವನ ಮಗ ರಾಫ. ಇವನ ಮಗನು ಎಲ್ಲಾಸ. ಇವನ ಮಗನು ಅಚೇಲ.
38ಅಚೇಲನಿಗೆ ಆರು ಮಂದಿ ಮಕ್ಕಳಿದ್ದರು. ಅವರ ಹೆಸರುಗಳು ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ ಮತ್ತು ಹಾನಾನ್.
39ಆಚೇಲನ ತಮ್ಮನಾದ ಏಷಕನ ಮಕ್ಕಳು: ಚೊಚ್ಚಲು ಮಗ ಊಲಾಮ್, ಎರಡನೆಯವನು ಯೆಯೂಷ್, ಮೂರನೆಯವನಾದ ಎಲೀಫೆಲೆಟ್.
40ಊಲಾಮನ ಮಕ್ಕಳು ಬಿಲ್ಲನ್ನು ಉಪಯೋಗಿಸುವುದರಲ್ಲಿ ಗಟ್ಟಿಗರಾದ ರಣವೀರರು. ಅವರು ಅನೇಕ ಮಂದಿ ಮಕ್ಕಳನ್ನೂ, ಮೊಮ್ಮಕ್ಕಳನ್ನೂ ಪಡೆದರು. ಒಟ್ಟು ನೂರ ಐವತ್ತು ಜನರು ಅವರ ಕುಟುಂಬದಲ್ಲಿದ್ದರು. ಎಲ್ಲರೂ ಬೆನ್ಯಾಮೀನ್ಯರು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath