ಕ್ರಿಶ್ಚಿಯನ್ ಧರ್ಮ
ಹಿಂದೆ

1 ಪೂರ್ವಕಾಲವೃತ್ತಾಂತ 4

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಯೆಹೂದನ ಸಂತಾನದವರು: ಪೆರೆಚ್, ಹೆಚ್ರೋನ್, ಕರ್ಮೀ, ಹೂರ್ ಮತ್ತು ಶೋಬಾಲ್.

2ಶೋಬಾಲನ ಮಗನಾದ ರೆವಾಯನು ಯಹತನನ್ನು ಪಡೆದನು. ಯಹತನು ಅಹೂಮೈ ಮತ್ತು ಲಹದ್ ಇವರನ್ನು ಪಡೆದನು. ಇವರು ಚೊರ್ರದ ಕುಟುಂಬದವರು.

3ಇಜ್ರೆಯೇಲ್, ಇಷ್ಮ ಮತ್ತು ಇಬ್ಬಾಷ್ ಇವರು ಎಟಾಮಿನವರ ಮೂಲಪುರುಷರು. ಹಚೆಲೆಲ್‌ಪೋನೀ ಎಂಬವಳು ಇವರ ತಂಗಿ.

4ಗೆದೋರಿನ ಮೂಲಪುರುಷನು ಪೆನೂವೇಲನು. ಹೂಷಾಹ್ಯರ ಮೂಲಪುರುಷನು ಏಜೆರ್. ಇವರು ಎಫ್ರಾತಾಹಳ ಚೊಚ್ಚಲ ಮಗನಾದ ಹೂರನ ಮಕ್ಕಳು. ಈ ಹೂರನೇ ಬೇತ್ಲೆಹೇಮ್ಯರ ಮೂಲಪುರುಷನು.

5ತೆಕೋವದವರ ಮೂಲಪುರುಷನಾದ ಅಷ್ಹೂರನಿಗೆ ಹೆಲಾಹ ಮತ್ತು ನಾರ ಎಂಬ ಇಬ್ಬರು ಹೆಂಡತಿಯರಿದ್ದರು.

6ಅಹುಜ್ಜಾಮ್, ಹೇಫೆರ್ ತೇಮಾನ್ಯರೂ ಮತ್ತು ಅಹಷ್ಟಾರ್ಯರೂ ಎಂಬುವವರು ನಾರಳ ಸಂತಾನದವರು.

7ಹೆಲಾಹಳ ಮಕ್ಕಳು: ಚೆರೆತ್ ಇಚ್ಹಾರ್ ಮತ್ತು ಎತ್ನಾನ್ ಎಂಬುವವರು.

8ಕೋಚನಿಂದ ಅನೂಬ್‌ ಮತ್ತು ಚೊಬೇಬ್ ಹುಟ್ಟಿದರು. ಅಹರ‍್ಹೇಲನು ಹಾರುಮನ ಮಗನು. ಕೋಚನು ಇವರ ವಂಶದ ಮೂಲ ಪುರುಷ.

9ಯಾಬೇಚನು ತನ್ನ ಅಣ್ಣತಮ್ಮಂದಿರಲ್ಲಿ ಗೌರವವುಳ್ಳವನಾಗಿದ್ದನು. ಇವನನ್ನು ಬಹು ವೇದನೆಯಿಂದ ಹೆತ್ತೆನೆಂದು ಇವನ ತಾಯಿ ಇವನಿಗೆ ಯಾಬೇಚನೆಂದು ಹೆಸರಿಟ್ಟಳು.

10ಯಾಬೇಚನು ಇಸ್ರಾಯೇಲಿನ ದೇವರಿಗೆ, “ನೀನು ನನ್ನನ್ನು ವಿಶೇಷವಾಗಿ ಆಶೀರ್ವದಿಸಿ, ನನ್ನ ಪ್ರಾಂತ್ಯವನ್ನು ವಿಸ್ತರಿಸಿ, ನಿನ್ನ ಕೃಪಾಹಸ್ತದಲ್ಲಿ ನನ್ನನ್ನು ಇರಿಸಿ ಯಾವ ವೇದನೆಯೂ ಉಂಟಾಗದಂತೆ ನನ್ನನ್ನು ಕೇಡಿನಿಂದ ರಕ್ಷಿಸಬಾರದೇ?” ಎಂದು ಮೊರೆಯಿಡಲು ದೇವರು ಅವನ ಮೊರೆಯನ್ನು ಲಾಲಿಸಿದನು.

11ಶೂಹನ ಸಹೋದರನಾದ ಕೆಲೂಬನು ಮೆಹೀರನನ್ನು ಪಡೆದನು. ಮೆಹೀರನು ಎಷ್ಟೋನನ ತಂದೆ.

12ಎಷ್ಟೋನನಿಂದ ಬೇತ್ರಾಫ, ಪಾಸೇಹ, ತೆಹಿನ್ನ ಎಂಬ ಮೂರು ಗಂಡು ಮಕ್ಕಳಿದ್ದರು. ಇವರು ರೇಕಾಹ್ಯರು. ತೆಹಿನ್ನನು ನಾಹಷ್ ಪಟ್ಟಣದವರ ಮೂಲಪುರುಷನು.

13ಕೆನಜನ ಮಕ್ಕಳು ಒತ್ನೀಯೇಲ್ ಮತ್ತು ಸೆರಾಯ ಎಂಬುವವರು. ಒತ್ನೀಯೇಲನ ಮಕ್ಕಳು ಹತತ್ ಮತ್ತು ಮೆಯೋನೋತೈ.

14ಮೆಯೋನೊತೈಯು ಒಫ್ರಾಹನನ್ನು ಪಡೆದನು. ಸೆರಾಯನು ಶಿಲ್ಪಿಗಳಾದ ಗೇಹರಾಷೀಮ್ಯರ ಮೂಲಪುರುಷನಾದ ಯೋವಾಬನನ್ನು ಪಡೆದನು.

15ಯೆಫುನ್ನೆಯ ಮಗನಾದ ಕಾಲೇಬನ ಸಂತಾನದವರು ಈರು, ಏಲಹ್ ಮತ್ತು ನಾಮ್. ಏಲನ ಮಗನಾದ ಕೆನಜ್‌.

16ಯೆಹಲ್ಲೆಲೇಲನ ಮಕ್ಕಳು: ಜೀಫ್, ಜೀಫಾ, ತೀರ್ಯ ಮತ್ತು ಅಸರೇಲ್ ಎಂಬುವವರು.

17ಎಜ್ರನ ಮಕ್ಕಳು: ಯೆತೆರ್, ಮೆರೆದ್, ಏಫೆರ್ ಮತ್ತು ಯಾಲೋನ್ ಎಂಬುವವರು. ಮೆರೆದನು ಫರೋಹನ ಮಗಳಾದ ಬಿತ್ಯೆಳನ್ನು ಮದುವೆಮಾಡಿಕೊಂಡನು. ಈಕೆಯು ಅವನಿಂದ ಗರ್ಭಿಣಿಯಾಗಿ ಮಿರ್ಯಾಮ್, ಶಮ್ಮೈ, ಎಷ್ಟೆಮೋವದವರ ಮೂಲಪುರುಷನಾದ ಇಷ್ಬಹ ಇವರನ್ನು ಹೆತ್ತಳು.

18ಯೆಹೂದ್ಯಳಾದ ಅವನ ಇನ್ನೊಬ್ಬ ಹೆಂಡತಿಯು ಗೆದೋರ್ಯರ ಮೂಲಪುರುಷನಾದ ಯೆರೆದ್, ಸೋಕೋವಿನವರ ಮೂಲಪುರುಷನಾದ ಹೆಬೆರ್ ಮತ್ತು ಜಾನೋಹದವರ ಮೂಲಪುರುಷನಾದ ಯೆಕೂತೀಯೇಲ್ ಇವರನ್ನು ಹೆತ್ತಳು.

19ನಹಮನ ತಂಗಿಯೂ, ಹೋದೀಯನ ಹೆಂಡತಿಯ ಇಬ್ಬರು ಮಕ್ಕಳಲ್ಲಿ ಒಬ್ಬನು ಗರ್ಮ್ಯದ ಕೆಯೀಲದವರ ಮೂಲಪುರುಷನಾದನು, ಮತ್ತೊಬ್ಬನು ಎಷ್ಟೆಮೋವದವರ ಮಾಕಾತ್ಯ ಸಂತಾನದ ಮೂಲಪುರುಷನಾದನು.

20ಶೀಮೋನನ ಮಕ್ಕಳು: ಅಮ್ನೋನ್, ರಿನ್ನ, ಬೆನ್ಹಾನಾನ್ ಮತ್ತು ತೀಲೋನ್. ಇಷ್ಷೀಯನ ಮಕ್ಕಳು: ಜೋಹೇತ್ ಮತ್ತು ಬೆನ್ಜೊಹೇತ್.

21ಯೆಹೂದನ ಮಗನಾದ ಶೇಲಹನ ಸಂತಾನದವರು: ಲೇಕಾಹ್ಯರ ಮೂಲಪುರುಷನಾದ ಏರ್, ಮರೇಷದವರ ಮೂಲಪುರುಷನಾದ ಲದ್ದ, ಬೇತಷ್ಬೇಯದಲ್ಲಿರುವ ನೇಯಿಗಾರರ ಕುಟುಂಬಗಳವರು,

22ಯೊಕೀಮನು ಕೋಜೇಬದವರು ಮೋವಾಬ್ ದೇಶದಲ್ಲಿ ದೊರೆತನ ನಡಿಸಿ ಬೇತ್ಲೆಹೇಮಿಗೆ ತಿರುಗಿ ಬಂದ ಯೋವಾಷ್ ಮತ್ತು ಸಾರಾಫ್ ಇವರೇ. (ಇವು ಪೂರ್ವಕಾಲದಲ್ಲಿ ನಡೆದ ಸಂಗತಿಗಳು.)

23ಮೇಲೆ ಕಂಡ ಜನರು ಕುಂಬಾರರು. ಅವರು ನೆಟಾಯಿಮ್ ಮತ್ತು ಗೆದೇರ ಎಂಬ ಊರುಗಳಲ್ಲಿ ವಾಸಿಸುತ್ತಾ ಅರಸನ ಸೇವೆಯನ್ನು ಮಾಡುತ್ತಿದ್ದರು.

24ಸಿಮೆಯೋನನ ಮಕ್ಕಳು: ನೆಮೂವೇಲ್, ಯಾಮೀನ್, ಯಾರೀಬ್, ಜೆರಹ ಮತ್ತು ಸೌಲ.

25ಸೌಲನ ಮಗ ಶಲ್ಲುಮ್. ಇವನ ಮಗ ಮಿಬ್ಸಾಮ್. ಮಿಬ್ಸಾಮನ ಮಗ ಮಿಷ್ಮ.

26ಮಿಷ್ಮಾನ ಸಂತಾನದವರು: ಇವನ ಮಗ ಹಮ್ಮೂವೇಲ್, ಇವನ ಮೊಮ್ಮಗ ಜಕ್ಕೂರ್. ಜಕ್ಕೂರನ ಮಗನು ಶಿಮ್ಮೀ.

27ಶಿಮ್ಮೀಗೆ ಹದಿನಾರು ಜನರು ಗಂಡು ಮಕ್ಕಳೂ ಮತ್ತು ಆರು ಜನರು ಹೆಣ್ಣು ಮಕ್ಕಳೂ ಇದ್ದರು. ಅವನ ಸಹೋದರರಿಗೆ ಹೆಚ್ಚು ಮಕ್ಕಳಿರಲಿಲ್ಲ. ಆದುದರಿಂದ ಅವರ ಕುಲವು ಯೆಹೂದ ಕುಲದಷ್ಟು ಅಭಿವೃದ್ಧಿಯಾಗಲಿಲ್ಲ.

28ದಾವೀದನ ಆಳ್ವಿಕೆಯ ತನಕ ಅವರು ವಾಸವಾಗಿದ್ದ ಪಟ್ಟಣಗಳು ಇವು: ಬೇರ್ಷೆಬ, ಮೋಲಾದ್, ಹಚರ್ ಷೂವಾಲ,

29ಬಿಲ್ಹ, ಎಚೆಮ್, ತೋಲಾದ್,

30ಬೆತೂವೇಲ್, ಹೊರ್ಮ, ಚಿಕ್ಲಗ್,

31ಬೇತ್ ಮರ್ಕಾಬೋತ್, ಹಚರ್ ಸೂಸೀಮ್, ಬೆತ್ ಬಿರೀ ಮತ್ತು ಶಾರಯಿಮ್.

32ಇವುಗಳಲ್ಲಿ ಸೇರಿದ ಐದು ಗ್ರಾಮಗಳು ಏಟಾಮ್, ಅಯಿನ್, ರಿಮ್ಮೋನ್, ತೋಕೆನ್ ಮತ್ತು ಆಷಾನ್.

33ಅವುಗಳ ಸುತ್ತಣ ಪ್ರದೇಶದಲ್ಲಿ ಬಾಲ್ ಊರಿನ ವರೆಗಿರುವ ಗ್ರಾಮಗಳೂ ಅವರ ನಿವಾಸಸ್ಥಾನಗಳಾಗಿದ್ದವು. ಅವರು ವಂಶಾವಳಿಯ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು.

34ಮೆಷೋಬಾಬ್, ಯಮ್ಲೇಕ್, ಅಮಚ್ಯನ ಮಗನಾದ ಯೋಷ,

35ಯೋವೇಲ್, ಯೊಷಿಬ್ಯನ ಮಗನೂ, ಸೆರಾಯನ ಮೊಮ್ಮಗನೂ, ಅಸಿಯೇಲನ ಮರಿಮಗನೂ ಆಗಿರುವ ಯೇಹೂ,

36ಎಲ್ಯೋವೇನೈ, ಯಾಕೋಬ, ಯೆಷೋಹಾಯ, ಅಸಾಯ, ಅದೀಯೇಲ್, ಯೆಸೀಮಿಯೇಲ್, ಬೆನಾಯ ಮತ್ತು

37ಶೆಮಾಯನ ಮಗನಾದ ಶಿಮ್ರಿಯಿಂದ ಹುಟ್ಟಿದ ಯೆದಾಯನ ಮರಿಮಗನೂ, ಅಲ್ಲೋನನ ಮೊಮ್ಮಗನೂ, ಶಿಪ್ಫಿಯ ಮಗನು ಆದ ಜೀಜ ಎಂಬ ಹೆಸರುಳ್ಳವರು ತಮ್ಮ ತಮ್ಮ ಗೋತ್ರಗಳಲ್ಲಿ ಪ್ರಮುಖರಾಗಿದ್ದರು.

38ಅವರ ಕುಟುಂಬಗಳು ಬೆಳೆಯುತ್ತಾ ಅಭಿವೃದ್ಧಿಯಾದವು.

39ಅವರು ತಮ್ಮ ಆಡು, ಕುರಿಗಳಿಗೋಸ್ಕರ ಹುಲ್ಲುಗಾವಲುಗಳನ್ನು ಹುಡುಕುತ್ತಾ ಗೆದೋರಿಗೆ ಹೋಗುವ ಕಣಿವೆಯನ್ನು ದಾಟಿ, ಆಚೆಯ ತಗ್ಗಿನ ಪೂರ್ವದಿಕ್ಕಿಗೆ ಹೋದಾಗ ಅಲ್ಲಿ ಶ್ರೇಷ್ಠವಾದ ಹಸಿರು ಹುಲ್ಲುಗಾವಲುಗಳನ್ನು ಕಂಡರು.

40ದೇಶವು ಎಲ್ಲಾ ಕಡೆಗಳಲ್ಲಿ ವಿಸ್ತಾರವಾಗಿದ್ದು ಸುಖ ಸಮಾಧಾನಗಳಿಂದ ಕೂಡಿತ್ತು. ಅಲ್ಲಿ ಮೊದಲಿನಿಂದಲೂ ವಾಸವಾಗಿದ್ದವರು ಹಾಮ್ಯರೇ.

41ಮೇಲೆ ಹೇಳಿದ ಪ್ರಭುಗಳು ಯೆಹೂದ ರಾಜನಾದ ಹಿಜ್ಕೀಯನ ಕಾಲದಲ್ಲಿ ಅಲ್ಲಿಗೆ ಹೋಗಿ ಆ ಹಾಮ್ಯರ ಪಾಳೆಯಗಳನ್ನೂ, ಅಲ್ಲಿ ಸಿಕ್ಕಿದ ಮೆಗೂನ್ಯರನ್ನೂ ಗೆದ್ದು, ಎಲ್ಲರನ್ನೂ ನಿರ್ನಾಮಮಾಡಿದರು. ಅವರು ತಮ್ಮ ಆಡುಕುರಿಗಳಿಗೆ ಅಲ್ಲಿ ಮೇವು ಸಿಕ್ಕಿದ್ದರಿಂದ ಅಲ್ಲೇ ವಾಸಿಸಿದರು. ಅಲ್ಲಿನ ಮೂಲನಿವಾಸಿಗಳು ಯಾರೂ ಉಳಿಯಲಿಲ್ಲ.

42ಇದಲ್ಲದೆ ಸಿಮೆಯೋನನ ಕುಲದ ಐನೂರು ಜನರು ಸೇಯೀರ್ ಪರ್ವತಕ್ಕೆ ಹೋದರು. ಇಷ್ಷೀಯ ಮಕ್ಕಳಾದ ಪೆಲಟ್ಯ, ನೆಗರ್ಯ, ರೆಫಾಯ ಮತ್ತು ಉಜ್ಜೀಯೇಲ್ ಎಂಬುವವರು ಅವರ ಮುಖ್ಯಸ್ಥರು.

43ಅವರು ಅಮಾಲೇಕ್ಯರಲ್ಲಿ ಉಳಿದವರನ್ನು ಸಂಹರಿಸಿ ಅಲ್ಲೇ ನೆಲೆಸಿದರು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath